ಕೋಲ್ಕತ್ತ: ಚುನಾವಣೆ ಪ್ರಚಾರದ ವೇಳೆ ನಂದಿಗ್ರಾಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಭದ್ರತಾ ನಿರ್ದೇಶಕ, ಐಪಿಎಸ್ ಅಧಿಕಾರಿ ವಿವೇಕ್ ಸಹಾಯ್ ಮತ್ತು ಪುರ್ಬಾ ಮೇದಿನಿಪುರದ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಪ್ರಕಾಶ್ ಅವರನ್ನು ಭಾನುವಾರ ಅಮಾನತುಗೊಳಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ವಿಭು ಗೋಯೆಲ್ ಅವರನ್ನು ಕೂಡ ಹುದ್ದೆಯಿಂದ ತೆರವುಗೊಳಿಸಲಾಗಿದ್ದು, ಚುನಾವಣೇತರ ಹುದ್ದೆಗೆ ವರ್ಗಾಯಿಸಲಾಗಿದೆ ಎಂದು ಆಯೋಗ ತಿಳಿಸಿದೆ.

ಮಾರ್ಚ್ 10 ರಂದು ನಡೆದ ಘಟನೆಯ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಸಲ್ಲಿಸಿದ ವರದಿ ಮತ್ತು ವಿಶೇಷ ವೀಕ್ಷಕರಾದ ಅಜಯ್ ನಾಯಕ್ ಮತ್ತು ವಿವೇಕ್ ದುಬೆ ಅವರು ನೀಡಿದ ವರದಿಯನ್ನು ಪರಿಶೀಲಿಸಿದ ಬಳಿಕ ಆಯೋಗವು ಈ ನಿರ್ಧಾರಕ್ಕೆ ಬಂದಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

'ವರದಿ ನಂತರ ಆಯೋಗವು ಐಪಿಎಸ್ ಅಧಿಕಾರಿ, ಭದ್ರತಾ ನಿರ್ದೇಶಕ ವಿವೇಕ್ ಸಹಾಯ್ ಅವರನ್ನು ಭದ್ರತಾ ನಿರ್ದೇಶಕನ ಹುದ್ದೆಯಿಂದ ತೆಗೆದುಹಾಕಬೇಕು ಮತ್ತು ತಕ್ಷಣವೇ ಅಮಾನತುಗೊಳಿಸಬೇಕು ಎಂದು ನಿರ್ಧರಿಸಿತು. ಝಡ್+ ಭದ್ರತೆಯುಳ್ಳ ವ್ಯಕ್ತಿಯ ಭದ್ರತೆಯನ್ನು ನೋಡಿಕೊಳ್ಳುವ ಪ್ರಾಥಮಿಕ ಕರ್ತವ್ಯ ನಿರ್ವಹಣೆಯಲ್ಲಿ ಭದ್ರತಾ ವಿಭಾಗದ ನಿರ್ದೇಶಕರು ವಿಫಲರಾಗಿದ್ದಾರೆ. ಅವರ ವಿರುದ್ಧ ಒಂದು ವಾರದಲ್ಲಿ ಆರೋಪ ನಿಗದಿ ಮಾಡಬೇಕು’ ಎಂದು ಆಯೋಗದ ಹೇಳಿಕೆಯು ತಿಳಿಸಿತ್ತು.

ಭದ್ರತಾ ವಿಭಾಗದ ಮುಖ್ಯಸ್ಥರಾಗಿ ಸೂಕ್ತ ಅಧಿಕಾರಿಯನ್ನು ನೇಮಕ ಮಾಡುವ ಹೊಣೆಯನ್ನು ಮುಖ್ಯ ಕಾರ್ಯದರ್ಶಿಗೆ ನೀಡಲಾಗಿದೆ. ರಾಜ್ಯದ ಪೊಲೀಸ್ ಮುಖ್ಯಸ್ಥರ ಜತೆಗೆ ಸಮಾಲೋಚನೆ ನಡೆಸಿ ನೇಮಕ ಮಾಡುವಂತೆ ಹೇಳಲಾಗಿದೆ.ಸ್ಮಿತಾ ಪಾಂಡೆ ಅವರನ್ನು ಪುರ್ಬಾ ಮೇದಿನಿಪುರದ ಜಿಲ್ಲಾಧಿಕಾರಿ ಮತ್ತು ಡಿಇಒ ಆಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಿಸಲಾಗಿದ್ದು, ಜಿಲ್ಲಾಧಿಕಾರಿ ವಿಭು ಗೋಯೆಲ್ ಅವರನ್ನು ಚುನಾವಣಾ ರಹಿತ ಹುದ್ದೆಗೆ ವರ್ಗಾಯಿಸಲಾಗುತ್ತದೆ. ಪುರ್ಬಾ ಮೇದಿನಿಪುರದ ಎಸ್‌ಪಿ ಪ್ರವೀಣ್ ಪ್ರಕಾಶ್ ಅವರನ್ನು ಕೂಡಲೇ ಅಮಾನತುಗೊಳಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಸುನೀಲ್ ಕುಮಾರ್ ಯಾದವ್ ಅವರನ್ನು ಪುರ್ಬಾ ಮೇದಿನಿಪುರದ ಹೊಸ ಎಸ್‌ಪಿ ಆಗಿ ನೇಮಿಸಲಾಗಿದೆ.
ಮಮತಾ ಅವರು ಕೆಳಗೆ ಬಿದ್ದು ಎಡಗಾಲು ಹಾಗೂ ಸೊಂಟಕ್ಕೆ ಏಟಾಗಿತ್ತು. ಇದೇ ಹತ್ತರಂದು ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ಅವರನ್ನು ತಳ್ಳಿದ್ದಾರೆ ಎಂದು ಆರೋಪಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.