ನವದೆಹಲಿ: ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಪಾರುಪತ್ಯ ದಿನದಿಂದ ದಿನಕ್ಕೆ ಎಲ್ಲೆ ಮೀರುತ್ತಿದೆ. ಈ ನಡುವೆ 87 ಭಾರತೀಯರು ಕಾಬೂಲ್ನಿಂದ ಸುರಕ್ಷಿತವಾಗಿ ಭಾರತಕ್ಕೆ ಹಿಂತಿರುಗುತ್ತಿದ್ದು, ಭಾವೋದ್ವೇಗದಿಂದ 'ಭಾರತ್ ಮಾತಾ ಕಿ ಜೈ' ಎಂಬ ಘೋಷಣೆಗಳನ್ನು ಮೊಳಗಿಸಿದ್ದಾರೆ.

ಏರ್ ಇಂಡಿಯಾ 1956 ವಿಮಾನದಲ್ಲಿ 87 ಭಾರತೀಯರು ತಜಕಿಸ್ತಾನದ ಮೂಲಕ ನವದೆಹಲಿಗೆ ಮರಳುತ್ತಿದ್ದಾರೆ. ಈ ವಿಮಾನದಲ್ಲಿ ಇಬ್ಬರು ನೇಪಾಳಿ ಪ್ರಜೆಗಳು ಇದ್ದಾರೆ. ಐಎಎಫ್ ಏರ್ಕ್ರಾಫ್ಟ್ ಮೂಲಕ ಕಾಬೂಲ್ನಿಂದ ಪ್ರಯಾಣಿಕರನ್ನು ಹೊರ ಒಯ್ಯಲಾಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.

ಅಫ್ಗಾನಿಸ್ತಾನದಿಂದ ಭಾರತೀಯರನ್ನು ಕರೆತರಲಾಗುತ್ತಿದೆ. ಏರ್ ಇಂಡಿಯಾ 1956 ವಿಮಾನದ ಮೂಲಕ 87 ಭಾರತೀಯರು ತಜಕಿಸ್ತಾನದಿಂದ ನವದೆಹಲಿಗೆ ಹೊರಟಿದ್ದಾರೆ. ಇದರಲ್ಲಿ ಇಬ್ಬರು ನೇಪಾಳಿಯರು ಇದ್ದಾರೆ. ತಜಕಿಸ್ತಾನದ ದುಶಂಬೆಯಲ್ಲಿರುವ ಭಾರತೀಯ ದೂತವಾಸ ನಿರೀಕ್ಷಿತ ಸಹಾಯ ಮತ್ತು ಸಲಹೆ ನೀಡಿದರು. ಹೆಚ್ಚಿನ ಸ್ಥಳಾಂತರ ಕಾರ್ಯ ಮುಂದುವರಿದಿದೆ ಎಂದು ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ ಎಂದು 'ಎಎನ್ಐ' ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.