ನವದೆಹಲಿ: ಫ್ಯಾಕ್ಟ್ ಚೆಕ್ ಮಾಡುವಾತನ ಅಜೆಂಡಾ ಪ್ರಧಾನಿ ನರೇಂದ್ರ ಮೋದಿ ಅವರ ದ್ವೇಷವೇ ಆಗಿದ್ದರೆ ಆತ ಫ್ಯಾಕ್ಟ್ ಚೆಕ್ಕರ್ ಆಗಲಾರ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ಕಂಪನಿಗಳು ಈ ನೆಲದ ಕಾನೂನನ್ನು ಗೌರವಿಸಬೇಕು ಎಂದೂ ಅವರು ಹೇಳಿದ್ದಾರೆ. ಮಾಧ್ಯಮ ಕಂಪನಿಗಳಿಗೆ ಕೇಂದ್ರ ಸರ್ಕಾರವು ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಜಾರಿಗೊಳಿಸಿದ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.

ಓದಿ:ಸಂಬಿತ್ ಪಾತ್ರಾ ಟ್ವೀಟ್: ಟ್ಯಾಗ್ ತೆಗೆಯಲು ಟ್ವಿಟರ್ಗೆ ಕೇಂದ್ರ ಸೂಚನೆ

ಇತ್ತೀಚೆಗೆ ಬಿಜೆಪಿ ನಾಯಕ ‘ಸಂಬಿತ್ ಪಾತ್ರಾ ಅವರ ಟ್ವೀಟ್‌ನಲ್ಲಿ ‘ತಿರುಚಲಾದ ಮಾಹಿತಿ’ ಟ್ಯಾಗ್ ಹಾಕಿದ್ದಕ್ಕೆ ಟ್ವಿಟರ್ ವಿರುದ್ಧ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದು, ಟ್ವಿಟರ್ ಪಕ್ಷಪಾತ ಧೋರಣೆ ಅನುಸರಿಸಬಾರದು ಎಂದು ಹೇಳಿದ್ದಾರೆ.

ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ಅನುಗುಣವಾಗಿ ನಡೆದುಕೊಳ್ಳುವಂತೆ ಟ್ವಿಟರ್, ಫೇಸ್‌ಬುಕ್‌ನಂಥ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಸರ್ಕಾರ ಸೂಚಿಸಿದೆ. ನಿಯಮಗಳ ಜಾರಿ ನಿಟ್ಟಿನಲ್ಲಿ ಅಧಿಕಾರಿಗಳಿಗೆ ನೆರವಾಗಲು ನೋಡಲ್ ಅಧಿಕಾರಿಗಳನ್ನೂ ನೇಮಕ ಮಾಡಲಾಗಿದೆ ಎಂದು ಅವರು ‘ಇಂಡಿಯಾ ಟುಡೆ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮಗಳ ದುರುಪಯೋಗ ಪರಿಶೀಲಿಸುವ ಹಿತದೃಷ್ಟಿಯಿಂದ ಹಿಂಸಾಚಾರ, ಗಲಭೆಗಳು, ಭಯೋತ್ಪಾದನೆ, ಅತ್ಯಾಚಾರ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂಥ ಸಂದೇಶಗಳ ಮೂಲವನ್ನು ಮಾತ್ರ ತಿಳಿಯಲು ಸರ್ಕಾರ ಬಯಸಿದೆ ಎಂದು ಅವರು ಹೇಳಿದ್ದಾರೆ.

ಓದಿ:ಹೊಸ ಐಟಿ ನಿಯಮಗಳ ಅನುಸರಣೆಗೆ ವಿವರ ಹಂಚಿದ ಗೂಗಲ್, ಫೇಸ್‌ಬುಕ್, ವಾಟ್ಸ್ಆ್ಯಪ್

‘ಭಾರತದ ಡಿಜಿಟಲ್ ಸಾರ್ವಭೌಮತ್ವದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಮಾಡಿಕೊಳ್ಳಲಾಗದು ಎಂದು ಕೇಂದ್ರ ಸಚಿವನಾಗಿ ನಾನು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ತಿಳಿಯಪಡಿಸುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.