ನಾಸಿಕ್: ಸಭೆಯೊಂದರಲ್ಲಿ ಮಾಸ್ಕ್ ರಹಿತರಾಗಿ ಕಾಣಿಸಿಕೊಂಡ ಶಿವಸೇನಾ ಸಂಸದ ಸಂಜಯ್ ರಾವುತ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅನುಸರಿಸುತ್ತಿರುವುದಾಗಿ ಉತ್ತರಿಸಿದ ಪ್ರಸಂಗ ನಡೆದಿದೆ.

ಮಹಾರಾಷ್ಟ್ರದ ನಾಸಿಕ್ನಲ್ಲಿ ಗುರುವಾರ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಸಂಜಯ್ ರಾವುತ್ ಮಾಸ್ಕ್ ಧರಿಸದೆ ಕಾಣಿಸಿಕೊಂಡಿದ್ದರು. ಕೆಲವು ವರದಿಗಾರರು ಕೋವಿಡ್ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ಯಾಕೆ ಧರಿಸಿಲ್ಲ ಎಂದು ರಾವುತ್ ಅವರನ್ನು ಪ್ರಶ್ನಿಸಿದ್ದರು.

'ಪ್ರಧಾನಿ ನರೇಂದ್ರ ಮೋದಿ ಜನರಿಗೆ ಮಾಸ್ಕ್ ಧರಿಸಲು ಹೇಳುತ್ತಾರೆ. ಆದರೆ, ಸ್ವತಃ ಅವರೇ ಮಾಸ್ಕ್ ಧರಿಸುವುದಿಲ್ಲ. ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಮಾಸ್ಕ್ ಧರಿಸುತ್ತಾರೆ, ಆದರೆ ಮೋದಿ ರಾಷ್ಟ್ರ ನಾಯಕ. ನಾನು ಪ್ರಧಾನ ಮಂತ್ರಿಯನ್ನು ಅನುಸರಿಸುತ್ತೇನೆ. ಹಾಗಾಗಿ ನಾನು ಮಾಸ್ಕ್ ಧರಿಸುವುದಿಲ್ಲ. ಜನರೂ ಮಾಸ್ಕ್ ಧರಿಸುವುದಿಲ್ಲ' ಎಂದು ಸಂಜಯ್ ರಾವುತ್ ಪ್ರತಿಕ್ರಿಯಿಸಿದ್ದಾರೆ.

ಇದೇ ವೇಳೆ, ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬರು ಮುನ್ನೆಚ್ಚರಿಕೆ ವಹಿಸಬೇಕು. ಪ್ರಸ್ತುತ ಆಕ್ಷೇಪಾರ್ಹ ಆದೇಶಗಳು ಜಾರಿಯಲ್ಲಿಲ್ಲ. ಆರ್ಥಿಕತೆ ಬೆಳವಣಿಗೆಗೆ ಅಡ್ಡಿ ಪಡಿಸುವಂತಹ ಅಡೆತಡೆಗಳ ಹೇರಿಕೆಯಾಗುವುದಿಲ್ಲ ಎಂದು ಭಾವಿಸಿದ್ದೇವೆ. ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ, ಅವರ ಪತಿ ಸದಾನಂದ ಸುಳೆ, ಮಹಾರಾಷ್ಟ್ರ ಶಿಕ್ಷಣ ಮಂತ್ರಿ ವರ್ಷಾ ಗಾಯಕ್ವಾಡ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಹಾಗಾಗಿ ಪ್ರತಿಯೊಬ್ಬರು ಸಾರ್ವಜನಿಕ ಕಾರ್ಯಕ್ರಮಗಳಿಗೆ ತೆರಳುವಾಗ ಜಾಗರೂಕರಾಗಿರಬೇಕು ಎಂದು ರಾವುತ್ ಹೇಳಿದರು.

ಮಹಾತ್ಮ ಗಾಂಧಿಗೆ ಅವಮಾನಿಸಿದ್ದ ಕಾಳಿಚರಣ್ ಮಹಾರಾಜ್ ಬಂಧನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.