ನವದೆಹಲಿ: ಉತ್ತರಾಖಂಡದ ಬಾರ್‌ಹೋತಿ ಸೆಕ್ಟರ್ ಬಳಿ ಚೀನಾದ ‘ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ)’ ಕಳೆದ ತಿಂಗಳು ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಉಲ್ಲಂಘಿಸಿ ಭಾರತದ ಭೂ ಪ್ರದೇಶದೊಳಗೆ ಪ್ರವೇಶಿಸಿತ್ತು ಎಂದು ಮೂಲಗಳು ಹೇಳಿವೆ.

ಆಗಸ್ಟ್ 30ರಂದು ಚೀನಾ ಯೋಧರು ಗಡಿ ಉಲ್ಲಂಘಿಸಿ ಭಾರತದೊಳಕ್ಕೆ ಬಂದಿದ್ದರು. ಕೆಲವು ಗಂಟೆಗಳ ಕಾಲ ಅಲ್ಲಿ ತಂಗಿದ್ದ ಅವರು ಬಳಿಕ ವಾಪಸಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಸದ್ಯ ಆ ಪ್ರದೇಶದಲ್ಲಿ ಇಂಡೊ–ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ) ನಿಯೋಜನೆ ಮಾಡಲಾಗಿದೆ. ಐಟಿಬಿಪಿ ಸಿಬ್ಬಂದಿ ಗಸ್ತು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಓದಿ:ಪೂರ್ವ ಲಡಾಖ್ನಲ್ಲಿ ಸೇನೆ ಬಲಪಡಿಸುತ್ತಿರುವ ಚೀನಾ, ಆಧುನಿಕ ತಂಗುದಾಣಗಳ ಸ್ಥಾಪನೆ

ಬಾರ್‌ಹೋತಿ ಪ್ರದೇಶದಲ್ಲಿ ಸಣ್ಣಮಟ್ಟಿನ ಗಡಿ ಉಲ್ಲಂಘನೆ ಆಗಾಗ ನಡೆಯುತ್ತಿರುತ್ತವೆ. ಎರಡೂ ಕಡೆಯ ಯೋಧರು ಎಲ್‌ಎಸಿ ಬಗ್ಗೆ ಭಿನ್ನ ಗ್ರಹಿಕೆಗಳನ್ನು ಹೊಂದಿರುವುದೇ ಇದಕ್ಕೆ ಕಾರಣ ಎಂದೂ ಮೂಲಗಳು ಹೇಳಿವೆ.

ಪೂರ್ವ ಲಡಾಖ್‌ನ ಕೆಲವು ದುರ್ಗಮ ಪ್ರದೇಶಗಳಲ್ಲಿ ಚೀನಾ ಸೇನೆಯು ಗೌಪ್ಯವಾಗಿ ತಂಗುದಾಣಗಳನ್ನು ನಿರ್ಮಿಸಿಕೊಳ್ಳುತ್ತಿದೆ ಎಂದು ಮಂಗಳವಾರ ವರದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.