ನವದೆಹಲಿ: ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದಸೌದಿ ಅರೇಬಿಯಾ ಸರ್ಕಾರ ತನ್ನ ರಾಷ್ಟ್ರದ ಪ್ರಜೆಗಳು ಭಾರತ ಸೇರಿದಂತೆ 15 ದೇಶಗಳಿಗೆ ತೆರಳದಂತೆ ನಿರ್ಬಂಧ ವಿಧಿಸಿದೆ.

ದೇಶದ ಪ್ರಜೆಗಳು ಭಾರತ ಸೇರಿದಂತೆ 15 ದೇಶಗಳಿಗೆ ಪ್ರಯಾಣ ಬೆಳೆಸುವಂತಿಲ್ಲ ಎಂದುಸೌದಿ ಅರೇಬಿಯಾ ಸರ್ಕಾರದಪಾಸ್ಪೋರ್ಟ್ ಇಲಾಖೆಅದೇಶ ಹೊರಡಿಸಿದೆ.

ಭಾರತ ಸೇರಿದಂತೆ ಲೆಬನಾನ್, ಸಿರಿಯಾ, ಟರ್ಕಿ, ಅಫ್ಘಾನಿಸ್ತಾನ, ಯೆಮನ್, ಸೊಮಾಲಿಯಾ, ಇಥಿಯೋಪಿಯ, ಕಾಂಗೊ, ಲಿಬಿಯಾ, ಇಂಡೋನೇಶಿಯಾ, ವಿಯಾಟ್ನಂ, ಅರ್ಮೇನಿಯ, ಬೆಲಾರಸ್ ಮತ್ತು ವೆನಿಜುಲಾ ದೇಶಗಳಿಗೆ ತೆರಳದಂತೆ ಸೌದಿ ಅರೇಬಿಯಾ ಸರಕಾರ ನಿರ್ಬಂಧ ವಿಧಿಸಿದೆ.

ಜಾಗತಿಕವಾಗಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಚೀನಾದಲ್ಲಿ ಪ್ರಕರಣಗಳ ಸಂಖ್ಯೆ ಏರು ಮುಖದಲ್ಲಿದೆ. ಅಲ್ಲಿನ ಕೆಲವು ನಗರಗಳಲ್ಲಿ ಲಾಕ್ಡೌನ್ ವಿಧಿಸಲಾಗಿದೆ.

ಉತ್ತರ ಕೋರಿಯಾದಲ್ಲೂ ಕೋವಿಡ್ ಪ್ರಕರಣಗಳು ಪತ್ತೆಯಾಗಿರುವುದರಿಂದ ಅಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಈ ನಡುವೆ ಕೆಲ ಆಫ್ರಿಕನ್–ಯುರೋಪ್ ದೇಶಗಳಲ್ಲಿ ಮಂಕಿ ಫಾಕ್ಸ್ ವೈರಸ್ ಹರಡುತ್ತಿರುವುದರಿಂದ ಮಂಜಾಗ್ರತೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸೌದಿ ಅರೇಬಿಯಾ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.