ನವದೆಹಲಿ (ಪಿಟಿಐ): ಅಬಕಾರಿ ನೀತಿ ಅನುಷ್ಠಾನದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಇಲ್ಲಿಯ ನ್ಯಾಯಾಲಯವೊಂದು ಇನ್ನೂ ಎರಡು ದಿನ ಸಿಬಿಐ ಕಸ್ಟಡಿಗೆ ನೀಡಿದೆ

ಸಿಸೋಡಿಯಾ ಅವರನ್ನು ಸೋಮವಾರ ನ್ಯಾಯಾಲಯದ ಎದುರು ಹಾಜರುಪಡಿಸುವಂತೆ ವಿಶೇಷ ನ್ಯಾಯಾಧೀಶ ಎಂ.ಕೆ. ನಾಗ್ಪಾಲ್ ಅವರು ಸಿಬಿಐಗೆ ಹೇಳಿದರು.

ನ್ಯಾಯಾಲಯವು ಸಿಸೋಡಿಯಾ ಅವರನ್ನು ಮೊದಲಿಗೆ ಮೂರು ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿತ್ತು. ಬಂಧನದ ಅವಧಿಯನ್ನು ಮೂರು ದಿನಗಳ ಕಾಲ ಮುಂದೂಡುವಂತೆ ನ್ಯಾಯಾಲಯಕ್ಕೆ ಸಿಬಿಐ ಮನವಿ ಮಾಡಿತ್ತು. ಈ ಮನವಿಯನ್ನು ವಿರೋಧಿಸಿದ್ದ ಸಿಸೋಡಿಯಾ ಪರ ವಕೀಲರು, ‘ನಿಗದಿತ ಅವಧಿಯಲ್ಲಿ ವಿಚಾರಣೆ ನಡೆಸಲು ಸಿಬಿಐ ಅಸಮರ್ಥವಾದರೆ ಅದಕ್ಕಾಗಿ ಬಂಧನದ ಅವಧಿ ವಿಸ್ತರಿಸುವುದು ಅಸಮಂಜಸ’ ಎಂದು ಹೇಳಿದ್ದರು.

ಬಳಿಕ ನ್ಯಾಯಾಲಯವು ಕಸ್ಟಡಿ ಅವಧಿಯನ್ನು ಎರಡು ದಿನಗಳಿಗೆ ವಿಸ್ತರಿಸಿತು.

ಸಿಬಿಐ ತಮ್ಮನ್ನು ಗೌರವಪೂರ್ವಕವಾಗಿಯೇ ನಡೆಸಿಕೊಳ್ಳುತ್ತಿದೆ. ಆದರೆ, ಪುನರಾವರ್ತಿತವಾಗಿ ಕೇಳಲಾಗುತ್ತಿರುವ ಪ್ರಶ್ನೆಗಳಿಂದ ಮಾನಸಿಕ ಹಿಂಸೆ ಉಂಟಾಗುತ್ತಿದೆ ಎಂದು ಸಿಸೋಡಿಯಾ ಅವರು ನ್ಯಾಯಾಲಯಕ್ಕೆ ಹೇಳಿದ್ದರು.

ಈ ಕುರಿತು ಸಿಬಿಐಗೆ ನಿರ್ದೇಶನ ನೀಡಿದ ನ್ಯಾಯಾಲಯ, ಪುನರಾವರ್ತಿತವಾಗಿ ಪ್ರಶ್ನೆಗಳನ್ನು ಕೇಳದಂತೆ ಹೇಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.