ಚೆನ್ನೈ: ಕೇಂದ್ರ ಸರ್ಕಾರದ ‘ಸಿನಿಮಾ ಛಾಯಾಗ್ರಹಣ 2021‘ (ತಿದ್ದುಪಡಿ ) ಕರಡು ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ‘ಸಮಾಜದಲ್ಲಿ ಸಕಾರಾತ್ಮಕ ಚಿಂತನೆ ಮೂಡಿಸುವ ಮನೋಭಾವಕ್ಕೆ ವಿರುದ್ಧವಾಗಿರುವ ಈ ತಿದ್ದುಪಡಿ ಮಸೂದೆಯನ್ನು ಹಿಂದಕ್ಕೆ ಪಡೆಯುವಂತೆ‘ ಕೇಂದ್ರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಕೇಂದ್ರದ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಪತ್ರ ಬರೆದಿರುವ ಸ್ಟಾಲಿನ್, ‘ತಿದ್ದುಪಡಿ ಮಸೂದೆಯಲ್ಲಿರುವ ಸಿನಿಮಾ ಕ್ಷೇತ್ರದದವರ ಸೃಜನ ಶೀಲತೆಯನ್ನು ಮೊಟಕುಗೊಳಿಸಿ ಮತ್ತು ಹೀಗೆಯೇ ಸಿನಿಮಾ ನಿರ್ಮಾಣ ಮಾಡಬೇಕೆಂದು ಷರತ್ತುಗಳನ್ನು ವಿಧಿಸಿರುವಂತಹ ಕ್ರಮಗಳು ಸಂಪೂರ್ಣವಾಗಿ ನ್ಯಾಯಸಮ್ಮತವಲ್ಲ‘ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕರಡು ಮಸೂದೆ ಕುರಿತು ಕೇಂದ್ರದೊಂದಿಗೆ ಚರ್ಚಿಸುವಂತೆ ತಮಿಳು ಚಲನಚಿತ್ರ ನಿರ್ಮಾಪಕರ ಪರಿಷತ್ತು ಸೇರಿದಂತೆ ರಾಜ್ಯ ಚಲನಚಿತ್ರೋದ್ಯಮ ಪ್ರತಿನಿಧಿಗಳ ನಿಯೋಗ ಮನವಿ ಮಾಡಿದ ಹಿನ್ನೆಲೆಯಲ್ಲಿ ಸ್ಟಾಲಿನ್ ಈ ವಿಷಯ ಕುರಿತು ರವಿಶಂಕರ್ ಪ್ರಸಾದ್ ಅವರಿಗೆ ಪತ್ರ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.