ಆಗ್ರಾ (ಉತ್ತರ ಪ್ರದೇಶ): ಸರ್ಕಾರಿ ಸ್ವಾಮ್ಯದ ಎಸ್.ಎನ್. ಮೆಡಿಕಲ್ ಕಾಲೇಜಿನ ಕಿರಿಯ ವೈದ್ಯೆಯೊಬ್ಬರು ತನ್ನ ತಾಯಿಯ ಜೀವ ಉಳಿಸಿಕೊಳ್ಳಲುಕ್ರೌಡ್‌ಫಂಡಿಂಗ್ (ದೇಣಿಗೆ ಸಂಗ್ರಹ) ಅಭಿಯಾನವನ್ನು ಆರಂಭಿಸಿದ್ದಾರೆ.

ಡಾ. ಅಂಜಲಿ ಗುಪ್ತಾ ಅವರಿಗೆ ತನ್ನ ತಾಯಿಯ ಕೀಮೋಥೆರಪಿ ಮತ್ತುರೇಡಿಯೇಷನ್ ಥೆರಪಿಗೆ ಬೇಕಾದ ಔಷಧಗಳನ್ನು ಖರೀದಿಸಲು ₹1 ಕೋಟಿ ಹಣ ಅವಶ್ಯಕತೆ ಇದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಳಿ ಸಹಾಯಕ್ಕಾಗಿ ವಿನಂತಿಸಿದ್ದಾರೆ.

ಅಂಜಲಿ ಅವರ ತಾಯಿ60 ವರ್ಷದ ದಯಾ ಗುಪ್ತಾ ಅವರು2019ರಿಂದ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ದೆಹಲಿಯಡಾ.ಬಿ.ಆರ್. ಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ರೋಟರಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಯಾ ಅವರಿಗೆ 2021ರಜನವರಿಯಿಂದ ವೈದ್ಯರು ನಾಲ್ಕು ವಿಭಿನ್ನ ರೀತಿಯ ಕೀಮೋಥೆರಪಿಯನ್ನು ಪ್ರಯತ್ನಿಸಿದ್ದಾರೆ. ಆದರೆ, ಅವರು ಕ್ಯಾನ್ಸರ್‌ನಿಂದ ಇನ್ನೂ ಗುಣಮುಖರಾಗಿಲ್ಲ.

ದಯಾ ಅವರ ಚಿಕಿತ್ಸೆಗೆ (ಕೀಮೋಥೆರಪಿ) ಬೇಕಾದ ಔಪಧಗಳು ಭಾರತದಲ್ಲಿ ಲಭ್ಯವಿಲ್ಲ. ಹಾಗಾಗಿ ಅವುಗಳನ್ನು ಅಮೆರಿಕದಿಂದ ಅಮದು ಮಾಡಿಕೊಳ್ಳಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕ್ರೌಡ್‌ಫಂಡಿಂಗ್ ಅಭಿಮಾನದ ಮೂಲಕ ಅಂಜಲಿ ಅವರು ಕಳೆದ 29 ದಿನಗಳಲ್ಲಿ ₹23.69 ಲಕ್ಷ ಸಂಗ್ರಹಿಸಿದ್ದಾರೆ. ನಿಗದಿತ ಚಿಕಿತ್ಸೆಯನ್ನು ಮುಂದುವರಿಸಲು ಅವರಿಗೆ ಇನ್ನೂ ₹76 ಲಕ್ಷ ಹಣದ ಅಗತ್ಯತೆ ಇದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅಂಜಲಿ ಗುಪ್ತಾ, ’ನನ್ನ ಕಣ್ಣ ಮುಂದೆ ತಾಯಿ ಸಾಯುವುದನ್ನು ನೋಡಲು ಸಾಧ್ಯವಾಗುತ್ತಿಲ್ಲ. ಕೋವಿಡ್ ಸಂಕಷ್ಟದ ಸಮಯದಲ್ಲಿ ನಾನು ಸೇವೆ ಸಲ್ಲಿಸಿದ್ದೇನೆ. ಮುಂದಿನ ದಿನಗಳಲ್ಲಿ ಸಮಾಜಕ್ಕೆ ನನ್ನ ಕೈಲಾದಷ್ಟು ಸೇವೆ ಮಾಡುತ್ತೇನೆ. ಸದ್ಯ ನನ್ನ ಕುಟುಂಬ ಸಂಕಷ್ಟದಲ್ಲಿದೆ. ತಾಯಿಯ ಚಿಕಿತ್ಸಾ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸರ್ಕಾರ ಮತ್ತು ಸಾರ್ವಜನಿಕರು ನಮಗೆ ನೆರವು ನೀಡುವಂತೆವಿನಂತಿಸುತ್ತೇನೆ‘ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.