ಅಹಮದಾಬಾದ್: ಕೊರೊನಾ ವೈರಸ್ನ ಇತರೆ ತಳಿಗಳಿಗಿಂತ ವೇಗವಾಗಿ ಪ್ರಸರಣವಾಗಬಲ್ಲ ನೂತನ ‘ಎಕ್ಸ್ಇ’ ತಳಿ ಸೋಂಕಿನ ಪ್ರಕರಣ ಗುಜರಾತ್ನಲ್ಲಿ ಪತ್ತೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಉನ್ನತ ಮೂಲಗಳು ತಿಳಿಸಿವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಮಾರ್ಚ್ 13ರಂದು ರೋಗಿಗೆ ಕೋವಿಡ್ ಪಾಸಿಟಿವ್ ಆಗಿರುವುದು ಪತ್ತೆಯಾಗಿದ್ದು, ಒಂದು ವಾರದಲ್ಲಿ ಚೇತರಿಸಿಕೊಂಡರು ಎಂದು ಮೂಲಗಳು ತಿಳಿಸಿವೆ.

ಜಿನೋಮ್-ಸೀಕ್ವೆನ್ಸಿಂಗ್ ಪರೀಕ್ಷೆಯಲ್ಲಿ ರೋಗಿಯು ಕೊರೊನಾ ವೈರಸ್ನ ಎಕ್ಸ್ಇ ರೂಪಾಂತರ ತಳಿಯ ಸೋಂಕಿಗೆ ಒಳಗಾಗಿದ್ದಾನೆ ಎಂಬುದು ಪತ್ತೆಯಾಗಿದೆ. ಇದು ಎಕ್ಸ್ಇ ರೂಪಾಂತರವೇ ಎಂಬುದನ್ನು ಮತ್ತೊಮ್ಮೆ ಖಚಿತಪಡಿಸಲು ಮಾದರಿಯನ್ನು ಮರುಪರಿಶೀಲಿಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಎಕ್ಸ್ಇ ಎಂದರೇನು?

ಕೊರೊನಾ ವೈರಸ್ನ ಹೊಸ ರೂಪಾಂತರ ತಳಿ ‘ಎಕ್ಸ್ಇ’. ಒಮೈಕ್ರಾನ್ನ ಎರಡು ರೂಪಾಂತರ ತಳಿಗಳಾದ ಬಿಎ.1 ಮತ್ತು ಬಿಎ.2ಗಳ ಮರು ಸಂಯೋಜಿತ ಹೈಬ್ರಿಡ್ ತಳಿಯಾಗಿದೆ. ಸದ್ಯ, ಜಗತ್ತಿನಾದ್ಯಂತ ಈ ಸೋಂಕಿನ ಪ್ರಕರಣಗಳ ಸಂಖ್ಯೆ ಸಣ್ಣ ಪ್ರಮಾಣದಲ್ಲಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಓಮೈಕ್ರಾನ್ನ ಉಪತಳಿಯಾದ ಬಿಎ.2 ಗಿಂತಲೂ ಎಕ್ಸ್ಇ ಸುಮಾರು ಹತ್ತು ಪಟ್ಟು ಹೆಚ್ಚು ಹರಡುತ್ತದೆ.

ಇಲ್ಲಿಯವರೆಗೆ, ಓಮೈಕ್ರಾನ್ನ ಉಪತಳಿ ಬಿಎ.2 ಅನ್ನು ಕೋವಿಡ್-19ನ ಅತ್ಯಂತ ವೇಗವಾಗಿ ಹರಡುವ ತಳಿ ಎಂದು ಪರಿಗಣಿಸಲಾಗಿದೆ.

ಬುಧವಾರ, ಮುಂಬೈ ಪಾಲಿಕೆಯ ಅಧಿಕಾರಿಗಳು ಎಕ್ಸ್ಇ ರೂಪಾಂತರ ತಳಿಯ ಮೊದಲ ಪ್ರಕರಣ ನಗರದಲ್ಲಿ ಪತ್ತೆಯಾಗಿದೆ ಎಂದು ಘೋಷಿಸಿದ್ದರು. ಆದರೆ, ಕೇಂದ್ರ ಸರ್ಕಾರವು ಇದನ್ನು ನಿರಾಕರಿಸಿತ್ತು. ರೋಗಿಯಲ್ಲಿ ಪತ್ತೆಯಾದ ಜಿನೋಮ್ ಸಂಯೋಜನೆಯು ಎಕ್ಸ್ಇಗೆ ಹೋಲಿಕೆ ಇಲ್ಲ ಎಂದು ಹೇಳಿತ್ತು.

ಇದನ್ನೂ ಓದಿ.. ಮುಂಬೈನಲ್ಲಿ ಕೋವಿಡ್ 'ಎಕ್ಸ್.ಇ' ತಳಿ; ವರದಿಗಳನ್ನು ಅಲ್ಲಗಳೆದ ಕೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.