ಬೆಂಗಳೂರು: ಪರಿಷ್ಕೃತ ಪಠ್ಯ ಪುಸ್ತಕವನ್ನು ಹಿಂದಕ್ಕೆ ಪಡೆಯುವ ಅಗತ್ಯ ಇಲ್ಲ. ಈ ವಿಚಾರವಾಗಿ ಸರ್ಕಾರದ ನಿಲುವನ್ನು ಬೆಂಬಲಿಸಲು ಪಕ್ಷ ನಿರ್ಧರಿಸಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದರು.

ಈ ಕುರಿತು ಪಕ್ಷದ ಕಚೇರಿಯಲ್ಲಿ ಸೋಮವಾರ ನಡೆದ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರ ಸಭೆಯ ಬಳಿಕ ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸುತ್ತಿರುವವರು ಕೇವಲ ಎಡಪಂಥೀಯರು. ಇವರ ಒತ್ತಡಕ್ಕೆ ಹೆಚ್ಚಿನ ಮನ್ನಣೆ ನೀಡಬೇಕಾಗಿಲ್ಲ. ಸತ್ಯ ಸಂಗತಿ ಮಕ್ಕಳಿಗೆ ಹೇಳುವುದನ್ನು ವಿರೋಧಿಸುತ್ತಾರೆ. ಅವರ ಕಾರ್ಯಸೂಚಿಯ ವಿಷಯಗಳನ್ನೇ ಪಠ್ಯ ಪುಸ್ತಕಗಳಲ್ಲಿ ತುಂಬಿಸಿದ್ದಾರೆ. ಅದನ್ನು ಕೈಬಿಟ್ಟಿರುವುದು ಅವರ ಸಿಟ್ಟಿಗೆ ಕಾರಣ ಎಂಬ ವಿಷಯ ಸಭೆಯಲ್ಲಿ ಪ್ರಸ್ತಾಪವಾಯಿತು ಎಂದರು.

‘ಎಡಪಂಥೀಯರು ಎತ್ತಿರುವ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇವೆ. ಭಗತ್‌ಸಿಂಗ್ ಪಾಠ ತೆಗೆದಿಲ್ಲ, ಕುವೆಂಪು ಪಾಠವನ್ನು ಬರಗೂರು ಸಮಿತಿ ತೆಗೆದಿತ್ತು, ರೋಹಿತ್ ಸಮಿತಿ ಅದನ್ನು ಸೇರಿಸಿದೆ. ಕಾಂಗ್ರೆಸ್ ಅವಧಿಯಲ್ಲೇ ಅತಿ ಹೆಚ್ಚು ಬ್ರಾಹ್ಮಣ ಲೇಖಕರ ಪಾಠವನ್ನು ಸೇರಿಸಿತ್ತು. ಆದ್ದರಿಂದ ಪಠ್ಯ ಪುಸ್ತಕ ಪರಿಷ್ಕರಣೆಯನ್ನು ಬಲವಾಗಿ ಸಮರ್ಥಿಸಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು’ ಎಂದು ರವಿಕುಮಾರ್ ಹೇಳಿದರು.

‘ಮನೆಗೆಲಸದ ಹೆಣ್ಣುಮಗಳು’ ಕವಿತೆ ವಾಪಸ್ ಪಡೆದ ಎಸ್ಜಿ ಸಿದ್ದರಾಮಯ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.