ಅಂದು ಬೆಳಿಗ್ಗೆ 4.45ಕ್ಕೆ ದೆಹಲಿಯಿಂದ ಹೊರಟ ಗಲ್ಫ್ ಏರ್‌ವೇಸ್ ವಿಮಾನ ಬಹರೇನ್‌ನತ್ತ ಪ್ರಯಾಣ ಬೆಳೆಸಿತು. ಮಧ್ಯಾಹ್ನ 12.35ಕ್ಕೆ ಯೂರೋಪ್‌ನ ಮೆಡಿಟರೇನಿಯನ್ ದ್ವೀಪ ಸೈಪ್ರಸ್‌ನ ಪ್ರಮುಖ ನಗರ ಲಾರನೇಕಾ ತಲುಪಿತು. ನಮ್ಮನ್ನು ಸ್ವಾಗತಿಸಲು UITBB (Trades Union International of Workers in the Building, Wood,Building Materials and Allied Industries) ಪ್ರಧಾನ ಕಾರ್ಯದರ್ಶಿ ಮೀಖಾಲೀಸ್ಪಾ ಪಾಪನಿಕೋಲಾಲೋ ಏರ್‌ಪೋರ್ಟ್‌ಗೆ ಬಂದಿದ್ದರು. ಅವರ ಜತೆ ವಿಮಾನ ಇಳಿದು ನೇರವಾಗಿ ಪಿಇಎಸ್ ಗೆಸ್ಟ್ ಹೌಸ್ / ಹೋಟೆಲ್ ತಲುಪಿದೆವು.

ಏಷ್ಯಾ-ಯುರೋಪ್ ಮತ್ತು ಆಫ್ರಿಕ ಮೂರೂ ಖಂಡಗಳಿಗೂ ಹಾದು ಹೋಗಬಹುದಾದ ಪುಟ್ಟ ದ್ವೀಪ ರಾಷ್ಟ್ರ ಸೈಪ್ರಸ್. ಇದರ ಒಟ್ಟಾರೆ ಉದ್ದ 250 ಕಿ.ಮೀ. ಈ ದ್ವೀಪದ ಒಂದು ತುದಿಯಿಂದ ಇನ್ನೊಂದು ತುದಿಗೆ ಕೆಲವೇ ಗಂಟೆಗಳಲ್ಲಿ ತಲುಪಬಹುದು. 11 ಲಕ್ಷ ಜನಸಂಖ್ಯೆ ಹೊಂದಿರುವ ಸೈಪ್ರಸ್‌ನಲ್ಲಿ ಶೇ 21 ರಷ್ಟು ವಿದೇಶಿಯರಿದ್ದಾರೆ. ಹಿಂದೆ ಸ್ಥಳೀಯ ಕರೆನ್ಸಿ ಇದ್ದರೂ, ಯೂರೋಪಿಯನ್ ಯೂನಿಯನ್ ಸೇರ್ಪಡೆಗೊಂಡ ಬಳಿಕ ‘ಯೂರೊ’ ಕರೆನ್ಸಿ ಚಲಾವಣೆಯಲ್ಲಿದೆ. ಆಧುನಿಕವಾದ ಆದರೆ ಅತ್ಯಂತ ಪುರಾತನ ನಾಗರಿಕತೆ ಹಾಗೂ ಶ್ರೀಮಂತ ಪಾರಂಪರಿಕ ಶೈಲಿಯ, ವೈವಿಧ್ಯಮಯ ಸಂಸ್ಕೃತಿಗಳನ್ನು ಒಡಲಲ್ಲಿಟ್ಟುಕೊಂಡ ದೇಶವಿದು.

‘ಮೆಡಿಟರೇನಿಯನ್’ ಸಮುದ್ರದ ಮಧ್ಯದಲ್ಲಿ ‘ಗಿಟಾರ್’ ವಾದ್ಯದಂತೆ ಸುಂದರವಾಗಿ ಕಾಣುವ ಹಾಗೂ ಸ್ವಚ್ಚ, ಸುಂದರ ಕಡಲ ಕಿನಾರೆಗಳನ್ನು ಹೊಂದಿರುವ ದ್ವೀಪರಾಷ್ಟ್ರ. ಇದು ಇಡೀ ಯೂರೋಪ್‌ನಲ್ಲೇ ಅತ್ಯಂತ ಶುದ್ಧ ಹಾಗೂ ಶುಭ್ರವಾದ ನೀರಿನಿಂದ ಆವೃತವಾಗಿರುವ ‘ದ್ವೀಪ’ ಎಂಬ ಖ್ಯಾತಿ ಪಡೆದಿದೆ.

ಇಲ್ಲಿನ ಬೀಚ್‍ಗಳು ಕಡಲಿನ ತೊರೆಗಳು ತಂದು ಬಿಡುವ ನುಣುಪಾದ ಬಳಪದ ವಿವಿಧ ವರ್ಣಗಳ ಕಲ್ಲುಗಳು ಆಕರ್ಷಣೀಯ. ಇಲ್ಲಿನ ಅಧಿಕೃತ ಭಾಷೆಗಳೆಂದರೆ ಗ್ರೀಕ್ ಮತ್ತು ಇಂಗ್ಲಿಷ್. ಉತ್ತರ ಸೈಪ್ರಸ್‌ನಲ್ಲಿ ಟರ್ಕಿಷ್ ಆಡಳಿತ ಭಾಷೆಯಾಗಿದೆ. ಇಲ್ಲಿನ ಸರಾಸರಿ ಹವಾಗುಣ ಶೀತಗಾಲದಲ್ಲಿ 13 ಡಿಗ್ರಿ ಸೆಲ್ಷಿಯಸ್ ಆದರೆ ಬೇಸಿಗೆಯಲ್ಲಿ 34 ಡಿಗ್ರಿ ಸೆ. ಇರುತ್ತದೆ.

2015ರಲ್ಲಿ ಸೈಪ್ರಸ್ ದ್ವೀಪ ಜಗತ್ತಿನ ಅತ್ಯಂತ ‘ಸುರಕ್ಷ ದೇಶ’ ಎಂಬ ಕೀರ್ತಿಗೆ ಪಾತ್ರವಾಗಿದೆ. ಪುಟ್ಟ ರಾಷ್ಟ್ರಗಳ ಪೈಕಿ ಇಂಥ ಗೌರವಕ್ಕೆ ಪಾತ್ರವಾಗಿರುವ ಐದು ದೇಶಗಳ ಪೈಕಿ ಇದೂ ಒಂದು.
ಏರ್‌ಪೋರ್ಟ್‌ನಿಂದ ಹೊರಬಂದಾಗ ನನಗೆ ಯಾವುದೇ ಪೊಲೀಸ್, ಸೆಕ್ಯುರಿಟಿ ಅಂತೆಲ್ಲ ಕಿರಿಕಿರಿ ಇರಲಿಲ್ಲ. ನಾವು ಉಳಿದುಕೊಂಡಿರುವ ಹೋಟೆಲ್‌ನಲ್ಲಾಗಲಿ ಹಾಗೂ ಸುತ್ತಮುತ್ತಲಿನ ದೊಡ್ಡದೊಡ್ಡ ವಿಲ್ಲಾಗಳೂ ಸೆಕ್ಯುರಿಟಿ ಎಂಬ ಭಯದಿಂದ ಮುಕ್ತವಾಗಿವೆ.

ಸೈಪ್ರೆಸ್ ನಾಗರಿಕತೆ

ಸುಮಾರು 90 ದಶಲಕ್ಷದಷ್ಟು ವರ್ಷಗಳ ಹಿಂದೆ ಆಫ್ರಿಕಾ ಮತ್ತು ಮಹಾಸಾಗರದೊಳಗೆ ನಡೆದ ಸಂಘರ್ಷದ ಪರಿಣಾಮದಿಂದ ಸಾಗರದ ನಡುವೆ ಸಣ್ಣ ಭೂಮಿಯ ತುಂಡೊಂದು ಸೃಷ್ಟಿಯಾಯಿತು. ಅದೇ ‘ಸೈಪ್ರಸ್’ ದ್ವೀಪ. ಈ ನೆಲದಲ್ಲಿ ಜಗತ್ತಿನ ಮೊಟ್ಟಮೊದಲ ಮಾನವ ಅವಶೇಷಗಳ ಜತೆಗೆ, ಆನೆಯ ಪಳೆಯುಳಿಕೆಗಳು ದೊರಕಿವೆ. ಹಾಗಾಗಿ ಇದನ್ನು ಜಗತ್ತಿನ ಅತಿ ಪುರಾತನ ನಾಗರಿಕತೆ ಹೊಂದಿರುವ ರಾಷ್ಟ್ರ ಎನ್ನುತ್ತಾರೆ. ಈ ಸುಂದರ ‘ದ್ವೀಪ’ವನ್ನು ತಮ್ಮದಾಗಿಸಿಕೊಳ್ಳಲು ಇತ್ತೀಚಿನವರೆಗೂ ಬ್ರಿಟಿಷರು, ಟರ್ಕರು, ಗ್ರೀಕರ ನಡುವೆ ಸಂಘರ್ಷಗಳು ನಡೆದಿವೆ. ಈ ಇತಿಹಾಸವನ್ನು ನಮ್ಮೊಂದಿಗಿದ್ದ ಸೈಪ್ರಸ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಹಾಗೂ ನಮ್ಮ ಗೈಡ್ ಅಂದ್ರಾಯ್ ಕಣ್ಣಿಗೆ ಕಟ್ಟುವಂತೆ ವಿವರಿಸಿದರು.

ವ್ಯಾಪಾರಿಗಳ ಕನಸಿನ ಕೂಸು

‘ಸೈಪ್ರೆಸ್’ ಎನ್ನುವ ಚೆಂದದ ಹೆಸರು ಬಂದಿದ್ದು ವಿದೇಶಿಗರಿಂದ. ಈ ದ್ವೀಪ ರಾಷ್ಟ್ರವನ್ನು ಆಳಲು ಹಲವರು ಹಾತೊರೆದು ವ್ಯಾಪಾರದ ಹೆಸರಲ್ಲಿ ದಾಳಿ ಮಾಡಿದರು. ಹಾಗಾಗಿ ಇದು ಸಾಗರೋತ್ತರ ವ್ಯಾಪಾರಿಗಳ ಕನಸಿನಕೂಸು.

ಇದು 1914 ಮೊದಲ ಮಹಾಯುದ್ಧದ ಆರಂಭದವರೆಗೂ ಬ್ರಿಟಿಷ್ ವಸಾಹತಾಗಿತ್ತು. ಆನಂತರ, ಒಟ್ಟೋಮನ್‍ರ ವಶವಾಗಿತ್ತು. 1925ರಲ್ಲಿ ಅದು ಒಟ್ಟೋಮನ್ ಟರ್ಕರಿಂದ ಬೇರ್ಪಟ್ಟ ನಂತರ ರಾಜಾಡಳಿತದ ವಸಹಾತುವಾಗಿ ಬದಲಾಯಿತು. ತದನಂತರ ಗ್ರೀಕ್ ನೇತೃತ್ವದಲ್ಲಿ ಯೂನಿಯನ್ಸ್ ಆಫ್ ಆಫ್ ಐ ಲ್ಯಾಂಡ್ ಎನ್ನುವ ಒಕ್ಕೂಟದ ಭಾಗವಾಗಿ ಸೇರ್ಪಡೆಯಾಯಿತು. ಅಲ್ಲಿಂದ ಹೀಗೆ ಒಬ್ಬರ ತೆಕ್ಕೆಯಿಂದ ಇನ್ನೊಬ್ಬರ ತೆಕ್ಕೆಗೆ ಬದಲಾಗುತ್ತಲೇ ಬಂದಿದೆ. 1974 ರಲ್ಲಿ ಟರ್ಕಿಷ್ ಅತಿಕ್ರಮಣಕ್ಕೆ ಮತ್ತೆ ಒಳಗಾದ ಈ ಸೈಪ್ರಸ್‌ನ ಉತ್ತರ ಭಾಗದ ಶೇ 37 ರಷ್ಟು ಭೌಗೋಳಿಕ ನೆಲ 44 ವರ್ಷಗಳಿಂದಲೂ ಟರ್ಕಿಗಳ ವಶದಲ್ಲಿದೆ.

ಸೈಪ್ರಸ್ ಧಾರ್ಮಿಕತೆ

ಸೈಪ್ರಸ್‌ನಲ್ಲಿ ಶೇ 73 ರಷ್ಟು ಕ್ರಿಶ್ಚಿಯನ್ನರಿದ್ದಾರೆ. ಇವೆರಲ್ಲ ಗ್ರೀಕ್ ಸೈಪ್ರಿಸ್ಟ್ ಹಾಗೂ ಗ್ರೀಕ್ ಅಥ್ರೋಡಿಕ್ಟಗಳೇ ಆಗಿದ್ದಾರೆ. ಉಳಿದಂತೆ ಉತ್ತರ ಭಾಗದಲ್ಲಿರುವ ಶೇ 25ಕ್ಕಿಂತ ಹೆಚ್ಚಿನ ಜನ ಟರ್ಕಿ ಮೂಲದ ಸುನ್ನಿ ಮುಸ್ಲಿಂರಾಗಿದ್ದಾರೆ. ಹೀಗಾಗಿ ಬಹುತೇಕ ಗ್ರೀಕ್ ಸಂಸ್ಕೃತಿ ಹಾಗೂ ಟರ್ಕಿಯ ಪ್ರಭಾವಗಳಿಂದ ದಕ್ಷಿಣ ಮತ್ತು ಉತ್ತರ ಭಾಗಗಳು ಬೆರತುಹೋಗಿವೆ.

ವೈವಿದ್ಯಮಯ ಆಹಾರ ಹಾಗೂ ಕೃಷಿ

ಈ ದ್ವೀಪದಲ್ಲಿ ಅಕ್ಕಿ, ಗೋಧಿ, ಸೋಯಾದಂತಹ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಬೆಳೆಯುವುದಿಲ್ಲ. ಇವೆಲ್ಲ ಅಮೆರಿಕ, ಚೀನಾ, ಭಾರತ ಮತ್ತಿತರ ದೇಶಗಳಿಂದ ಆಮದಾಗುತ್ತವೆ. ಕಿತ್ತಳೆ, ಸೇಬು, ಬಾಳೆಹಣ್ಣು, ದ್ರಾಕ್ಷಿ, ಮೊಸಂಬಿ, ದಾಳಿಂಬೆ, ಸ್ಟ್ರಾಬೆರಿ, ಆಲಿವ್ ಹಣ್ಣುಗಳನ್ನು ಹಾಗೆಯೇ ಎಲ್ಲಾ ವಿಧದ ತರಕಾರಿಗಳನ್ನು ಯೆಥೇಚ್ಚವಾಗಿ ಬೆಳೆಯುತ್ತಾರೆ. ಮಾಂಸಕ್ಕಾಗಿ ಹಂದಿ, ಟರ್ಕಿಕೋಳಿ, ಮೇಕೆ ದನ ಮತ್ತು ಕುರಿಗಳನ್ನು ಸಾಕಲಾಗುತ್ತದೆ. ಮೇಕೆ ಮತ್ತು ಕುರಿಯ ಹಾಲಿನಿಂದಲೇ ಉತ್ಕೃಷ್ಟ ಮೊಸರು, ಬೆಣ್ಣೆ ಹಾಗೂ ತುಪ್ಪ ತಯಾರಿಸುತ್ತಾರೆ. ಇದರಿಂದಲೇ ಬಗೆಬಗೆಯ ಸಿಹಿಗಳನ್ನು ತಯಾರಿಸುತ್ತಾರೆ.

ನಾವಿದ್ದ ಲಾರನೇಕಾದಲ್ಲಿ ಸ್ಟ್ರಾಬೆರಿ, ಆಲೂಗಡ್ಡೆ, ಬೆಂಡೆಕಾಯಿ ಬಿಟ್ಟರೆ ಬೇರೆನೂ ಹೆಚ್ಚಾಗಿ ಸಿಗುವುದಿಲ್ಲ. ಹಲವು ದಶಕಗಳ ಹಿಂದೆ ಈ ಲಾರನೇಕಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿದ್ದಾಗ, ಇಡೀ ಪ್ರದೇಶ ಕಿತ್ತಳೆಹಣ್ಣಿನ ತೋಟಗಳಿಂದ ಕಂಗೊಳಿಸುತ್ತಿತ್ತಂತೆ. ಆಗ ಕಮ್ಯೂನಿಸ್ಟ್ ಪಕ್ಷದ ನೇತೃತ್ವದಲ್ಲಿ ಕೃಷಿಕಾರ್ಮಿಕರು ಸಂಘಟಿತರಾಗಿ ಹೋರಾಟ ನಡೆಸಿದ್ದ ಇತಿಹಾಸವನ್ನು ಮೀಖಾಲೀಸ್ಪಾ ಒಣಗಿ ಬಯಲಾಗಿದ್ದ ಜಮೀನುಗಳನ್ನು ತೋರಿಸುತ್ತಾ ಹೇಳಿದರು.

ಅಂದು ಲಾರನೇಕಾ ಸುತ್ತಲಿನ ಪರ್ವತಪ್ರದೇಶಗಳಿಂದ ನದಿಗಳು ಹರಿಯುತ್ತಿದ್ದವು. ಈಗ ಅವು ಯಾವುವೂ ಇಲ್ಲ. ಮಾತ್ರವಲ್ಲ; ಈಗ 500-600 ಅಡಿಗಳ ಆಳಕ್ಕೆ ಬೋರ್‌ವೆಲ್‌ಗಳನ್ನು ಕೊರೆದರೂ ನೀರು ಸಿಗುವ ಗ್ಯಾರಂಟಿ ಇಲ್ಲ ಎನ್ನುವ ಸ್ಥಿತಿಗೆ ಸೈಪ್ರಸ್ ಬಂದಿದೆ.

ಇಲ್ಲಿ ತರಕಾರಿ, ಮೀನು, ಮಾಂಸದಿಂದ ವೈವಿಧ್ಯಮಯ ಆಹಾರ ತಯಾರಿಸುವ ಜತೆಗೆ, ಕಾಪಿಡುತ್ತಾರೆ. ಮಾಂಸಹಾರದ ಜತೆಗೆ ತರಕಾರಿ ಹಾಗೂ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಊಟದ ಜೊತೆ ಬಿಯರ್, ವೈನ್ ಬಳಸುವ ಅಭ್ಯಾಸವಿದೆ. ಆಲಿವ್ ಎಣ್ಣೆ ಹಾಗೂ ನಮ್ಮ ಮಲೆನಾಡಿನಲ್ಲಿ ಸಿಗುವ ಮುರುಗನ್ ಹುಳಿಯಂತಿರುವ ದ್ರವರೂಪದ ಮಿಶ್ರಣ ಆಹಾರ ಪದಾರ್ಥಗಳನ್ನು ಬಳಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.