‘ಲಂಡನ್ ನಗರದಿಂದ ಬೆಳಿಗ್ಗೆ ಎಂಟು ಗಂಟೆಗೆ ರೈಲಿನಲ್ಲಿ ಪ್ಯಾರಿಸ್ ನಗರಕ್ಕೆ ಹೋಗಿ, ಮೊದಲಿಗೆ ಐಫೆಲ್ ಟವರ್‌ಗೆ ಭೇಟಿ ನೀಡುವುದು’ ಎಂದು ನಮ್ಮ ಟೂರ್ ಮ್ಯಾನೇಜರ್ ಹೇಳಿದಾಗ, ನಮ್ಮೊಳಗಿದ್ದ ಕುತೂಹಲ ಹೆಚ್ಚಾಯಿತು. ಎಷ್ಟು ಹೊತ್ತಿಗೆ ಪ್ಯಾರಿಸ್ ತಲುಪುತ್ತೇವೋ, ಐಫೆಲ್ ಟವರ್ ನೋಡುತ್ತೇವೋ ಎಂಬ ಕಾತರ.

ಲಂಡನ್–ಪ್ಯಾರಿಸ್ ನಡುವೆ ಸಮುದ್ರದೊಳಗೆ ರೈಲು ಪ್ರಯಾಣವಂತೆ. ಹಾಗೆಂದು ಸಹ ಪ್ರವಾಸಿಗರೊಬ್ಬರು ಹೇಳಿದಾಗಲೇ ಗೊತ್ತಾಗಿದ್ದು. ರೈಲು ಪ್ಯಾರಿಸ್ ಸಮೀಪಿಸುತ್ತಿದ್ದಾಗ ದೂರದಲ್ಲೇ ಐಫೆಲ್ ಟವರ್ ಕಂಡಿತು. ನಮ್ಮನ್ನು ಕೈ ಬೀಸಿ ಕರೆದಂತೆ ಭಾಸವಾಯಿತು. ಹತ್ತಿರ ಹೋಗಿ ನಿಂತದಾಗ, ಆದ ಸಂತೋಷ ಅಷ್ಟಿಷ್ಟಲ್ಲ.

ಪ್ಯಾರಿಸ್‍ಗೆ ಭೇಟಿ ಕೊಡುವವರು ಕಬ್ಬಿಣದ ಬೃಹತ್ ರಚನೆ ಐಫೆಲ್ ಟವರ್‌ನ ಸೌಂದರ್ಯ ಸವಿಯುತ್ತಾರೆ. ಇದೊಂದು ಫ್ರಾನ್ಸ್ ದೇಶದ ಅದ್ವಿತೀಯ ಪ್ರವಾಸಿ ಆಕರ್ಷಣಾ ಕೇಂದ್ರ. ಇದನ್ನು ನಿರ್ಮಿಸಲು 7300 ಟನ್ ಕಬ್ಬಿಣದ ಬಳಕೆಯಾಗಿದೆ. ತ್ರಿಕೋನಾಕೃತಿಯಲ್ಲಿರುವ ಈ ಟವರ್ ಅನ್ನು ಐಫೆಲ್ ಎಂಬ ಎಂಜಿನಿಯರ್ ತನ್ನ ಇಬ್ಬರು ಸಹೋದ್ಯೋಗಿಗಳಾದ ಮಾರಿಸ್ ಮತ್ತು ಎಮೈಲಿರವರೊಂದಿಗೆ ವಿನ್ಯಾಸ ಮಾಡಿ ನಿರ್ಮಿಸಿದ್ದಾರೆ. ಆದರೂ ಅದು ಐಫೆಲ್ ಟವರ್ ಎಂದೇ ಹೆಸರುವಾಸಿಯಾಗಿದೆ.

ಇದು ಫ್ರೆಂಚ್ ಕ್ರಾಂತಿಯ 200 ನೇ ವರ್ಷದ ನೆನಪಿಗಾಗಿ ನಿರ್ಮಾಣವಾದ ಟವರ್. 1887ರಲ್ಲಿ ಆರಂಭವಾಯಿತು. 1889 ಮಾರ್ಚ್ 31ರಂದು ಪೂರ್ಣಗೊಂಡಿತು. ಈ ಮಾರ್ಚ್ 31ಕ್ಕೆ 130 ವರ್ಷಗಳಾಗುತ್ತದೆ ಈ ಟವರ್ ನಿರ್ಮಾಣ ಮಾಡಿ. 1063 ಅಡಿ ಎತ್ತರದ ಈ ಸ್ಮಾರಕ 1930ರವರೆಗೆ ಜಗತ್ತಿನ ಅತ್ಯಂತ ಎತ್ತರದ ರಚನೆಯಾಗಿತ್ತು. ಅದ್ಭುತ ವಾಸ್ತುಶಿಲ್ಪ ಎಂದು ಪರಿಗಣಿಸಲಾಗಿದೆ. ಫ್ರಾನ್ಸ್ ದೇಶದ ಜನ ಇದನ್ನು ‘ಐರನ್ ಲೇಡಿ’ ಎಂದು ಒಲುಮೆಯಿಂದ ಕರೆಯುತ್ತಾರೆ.

ಟವರ್ ಏರಲು ಲಿಫ್ಟ್ ಸೌಲಭ್ಯಗಳಿವೆ. ಅದರಲ್ಲಿ ಮೂರು ಕಂಪಾರ್ಟ್‌ಮೆಂಟ್‍ನಲ್ಲಿ ವೀಕ್ಷಿಸಬಹುದು. ಒಂದು ಮಹಡಿಯಲ್ಲಿ ಟವರ್ ನಿರ್ಮಾಣದ ವಿವಿಧ ಹಂತಗಳ ಪ್ರತಿಕೃತಿ ಇದೆ. ಎಂಜಿನಿಯರ್ ಐಫೆಲ್ ಪ್ರತಿಮೆಯೂ ಇದೆ. ಇದರ ಮೇಲೇರಿ ಹೋದರೆ, ಪ್ಯಾರಿಸ್ ನಗರ ಪೂರ್ಣವಾಗಿ ವೀಕ್ಷಿಸಬಹುದು. ನಮಗಂತೂ ಇದೊಂದು ರೋಮಾಂಚನಕಾರಿ ಅನುಭವ ಎನ್ನಿಸಿತು.

ಪ್ರತಿ ಸಂಜೆ ವಿದ್ಯುತ್ ದೀಪಾಲಂಕಾರ ಇರುತ್ತದೆ. 1978 ರ ಕ್ರಿಸ್‍ಮಸ್ ಹಬ್ಬದ ಸಂದರ್ಭದಲ್ಲಿ ಇಡೀ ಟವರ್ ಅನ್ನು 30,000 ಲ್ಯಾಂಪ್‍ಗಳ ಮೂಲಕ ಕ್ರಿಸ್‍ಮಸ್ ಟ್ರೀ ರೀತಿ ಕಾಣುವಂತೆ ಅಲಂಕರಿಸಲಾಗಿತ್ತಂತೆ. 2000ನೇ ಇಸವಿಯಲ್ಲಿ ಹೊಸ ಸಹಸ್ರಮಾನದ ಉದಯದ ಕುರುಹಾಗಿ 20,000 ಹೊಳೆಯುವ ದೀಪಗಳ ಮೂಲಕ ಹೊಸ ವರ್ಷದ ಚಿಹ್ನೆಯನ್ನೇ ಪ್ರದರ್ಶಿಸಲಾಯಿತಂತೆ. 2009 ರಲ್ಲಿ ಈ ಟವರ್‌ನ 120ನೇ ವರ್ಷಾಚರಣೆ ವೇಳೆ ಬೆಳಕಿನ ಪ್ರದರ್ಶನವಿತ್ತು.

ಐಫೆಲ್, ಈ ಸ್ಮಾರಕ ಅನುಮತಿ ಪಡೆದುಕೊಂಡಿದ್ದು 20 ವರ್ಷಗಳವರೆಗೆ ಮಾತ್ರ. ಆ ನಂತರ ಈ ರಚನೆಯನ್ನು ಬಿಚ್ಚಿಡಬಹುದು ಎಂದು ತಿಳಿಸಿದ್ದನಂತೆ. ನಗರಸಭೆಯವರು ಅದನ್ನು ತೆಗೆಯುವ ಸಿದ್ದತೆ ನಡೆಸಿದ್ದರು. ಆದರೆ, ಈ ಟವರ್ ಸಂವಹನ ಉದ್ದೇಶಗಳಿಗಾಗಿ ಬಹಳ ಅಮೂಲ್ಯ ಎನಿಸಿದ್ದರಿಂದ ಅದನ್ನು ಹಾಗೆ ಉಳಿಸಿಕೊಳ್ಳಲಾಗಿದೆ.

ಅಲ್ಲದೇ, ಈ ಟವರ್ ಅನ್ನು ಎಂಜಿನಿಯರ್ ಐಫೆಲ್, ಪವನ ಶಾಸ್ತ್ರ ಅಧ್ಯಯನ ಹಾಗೂ ಪ್ರಯೋಗಗಳಿಗೆ ಬಳಸಬಹುದು ಎಂದು ತೋರಿಸಿಕೊಟ್ಟಿದ್ದನಂತೆ. ಮೊದಲ ಮಹಾಯುದ್ಧದ ವೇಳೆ, ಜರ್ಮನ್ ರೇಡಿಯೊ ಸಂವಹನಕ್ಕಾಗಿ ಟವರ್ ಬಳಸಲಾಗಿದೆ.

ಈ ಟವರ್ ಸುತ್ತಾ ನೂರಾರು ಮೀಟರ್‌ಗಳ ವಿಶಾಲವಾದ, ಜಾಗವಿದೆ. ಹಸಿರಿನ ಪರಿಸರ ಇದರ ಅಂದ ಹೆಚ್ಚಿಸಿದೆ. ಈ ಪ್ರದೇಶದಲ್ಲಿ ಸುಮಾರು 1000 ಜನ ಯೋಗಾಭ್ಯಾಸ ನಡೆಸಿದ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತ ಪಸರಿಸಿದ್ದನ್ನು ಸ್ಮರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.