ಬೆಂಗಳೂರಿನಲ್ಲಿ ಕ್ರಿಸ್ಮಸ್ ಸಂಭ್ರಮ ಜೋರಾಗಿದೆ. ನಗರದ ಪುರಾತನ ಚರ್ಚ್, ಕ್ಯಾಥೆಡ್ರಲ್ಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ. ಚರ್ಚ್ಗಳಲ್ಲಿ ಕ್ರೈಸ್ತರ ಸಾಮೂಹಿಕ ಪ್ರಾರ್ಥನೆ, ಸಮೂಹಗಾನ, ಕ್ಯಾರೋಲ್ಗಳು ಹಬ್ಬದ ರಂಗು ಹೆಚ್ಚಿಸಿವೆ. ಕೇಕ್, ವೈನ್ ಇಲ್ಲದೆ ಕ್ರಿಸ್ಮಸ್ ಅಪೂರ್ಣ.ನಗರದಲ್ಲಿ ನಡೆಯುತ್ತಿರುವ ಬೃಹತ್ ಕೇಕ್ ಷೋ ಕ್ರಿಸ್ಮಸ್ಗೆ ಮೆರುಗು ತಂದಿದೆ. ವಾರದ ಮೊದಲೇ ನಗರದ ಹೋಟೆಲ್, ರೆಸ್ಟೋರೆಂಟ್ಗಳು ಕ್ರಿಸ್ಮಸ್ ಆಹಾರ ಉತ್ಸವಕ್ಕಾಗಿ ವಿಶೇಷ ಮೆನು ಸಿದ್ಧಗೊಳಿಸಿವೆ. ವೈವಿಧ್ಯಮಯ ಕೇಕ್, ಚಾಕಲೋಟ್ಗಳು ಕ್ರಿಸ್ಮಸ್ ಖುಷಿಯನ್ನು ಇಮ್ಮಡಿಗೊಳಿಸಿವೆ. ವರ್ಷಾಂತ್ಯದ ಹಬ್ಬಕ್ಕಾಗಿಯೇ ಮಾಲ್ಗಳಲ್ಲಿ ಅಲಂಕೃತ ಕ್ರಿಸ್ಮಸ್ ಟ್ರೀಗಳು ತಲೆ ಎತ್ತಿವೆ. ಇನ್ನೇನು ಉಡುಗೊರೆಗಳ ಬುಟ್ಟಿ ಹೊತ್ತ ಬಿಳಿ ಗಡ್ಡದ ದಢೂತಿ ದೇಹದ ಪ್ರೀತಿಯ ಅಜ್ಜ ಸಾಂಟಾ ಕ್ಲಾಸ್ ಬರುವುದೊಂದೇ ಬಾಕಿ!

ಸಿಹಿ ಹೆಚ್ಚಿಸಲು ಚಾಕೊಲೇಟ್

ಕ್ರಿಸ್ಮಸ್ಗೆ ಒಂದು ವಾರ ಬಾಕಿ ಇರುವಾಗ ಫ್ಯಾಬೆಲ್ ಈ ವಿಶೇಷ ಸಂದರ್ಭಕ್ಕಾಗಿಯೇ ಕೈಯಿಂದ ತಯಾರಿಸಿದ ಚಾಕೊಲೇಟ್ ಬಿಡುಗಡೆ ಮಾಡಿದೆ.

ನಿಮ್ಮ ಪ್ರೀತಿ ಪಾತ್ರರಿಗೆ, ಆಪ್ತರಿಗೆಕ್ರಿಸ್ಮಸ್ ಉಡುಗೊರೆ ನೀಡಲು ಸುಂದರವಾದ ಗಿಫ್ಟ್ ಪ್ಯಾಕ್ನಲ್ಲಿ ಲಿಮಿಟೆಡ್ ಎಡಿಷನ್ ಚಾಕೊಲೇಟ್ ಬಿಡುಗಡೆ ಮಾಡಲಾಗಿದೆ.

ಕ್ರಿಸ್ಮಸ್ ಎಂದರೆ ಕೇಕ್ ಮತ್ತು ಚಾಕೊಲೇಟ್ ಕಾಣಿಕೆಗಳ ಹಬ್ಬ. ರಮ್ನಲ್ಲಿ ನೆನೆಸಿದ ಡ್ರೈ ಫ್ರುಟ್ಸ್, ನಟ್ಸ್, ರೆಸಿನ್ಸ್, ಕಿತ್ತಳೆ ತಿರುಳಿನಿಂದ ತಯಾರಿಸಿದ ಕೇಕ್ ಮೇಲೆ ಕ್ರಂಚಿ ಡಾರ್ಕ್ ಚಾಕೊಲೇಟ್, ಚಾಕೊಲೇಟ್ ಮಾರ್ಜಿಪಿಯನ್ ಕವರ್ ಮಾಡಲಾಗಿದೆ. ಅದೇ ರೀತಿ ಪ್ಲಮ್ ಕೇಕ್ ಮೇಲೆ ಚಾಕಲೋಟ್ ಕವರ್ ಮಾಡಿದಸಾಂಪ್ರದಾಯಿಕ ಕ್ರಿಸ್ಮಸ್ ಸ್ವಾದಿಷ್ಟ ಚಾಕಲೋಟ್ ಮತ್ತು ಕೇಕ್ ಲಭ್ಯ.

ಡಾರ್ಕ್ ಚಾಕೊಲೇಟ್ ಬೇಸ್ ಮೇಲೆ ಕೇಕ್ ಮತ್ತು ಚಾಕೊಲೇಟ್ನಿಂದ ಸ್ವಾದಿಷ್ಟ ಕ್ರಿಸ್ಮಸ್ ಟ್ರೀ ತಯಾರಿಸಲಾಗಿದೆ. ಕ್ರಿಸ್ಮಸ್ ಟ್ರೀ ಒಳಗಿರುವ ಜಿಂಜರ್ ಬ್ರೆಡ್, ಚೆರಿ ಜೆಲ್ಲಿ, ಹ್ಯಾಜೆಲ್ ನಟ್, ಗನಾಚೆ, ಆರೆಂಜ್ ಕೆರಾಮಲ್, ಟೀ ಗ್ಲೇಜ್, ಮಡಗಾಸ್ಕರ್ ಕೋಕಾ ಸವಿಯಲು ಮಜವಾಗಿವೆ.

ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿರುವ ಐಟಿಸಿ ಗಾರ್ಡೇನಿಯಾ ಮತ್ತು ಸ್ಯಾಂಕಿ ರಸ್ತೆಯಲ್ಲಿರುವ ಐಟಿಸಿ ವಿಂಡ್ಸರ್ ಹೋಟೆಲ್ ಫ್ಯಾಬೆಲ್ ಕೌಂಟರ್ಗಳಲ್ಲಿ ಡಿಸೆಂಬರ್ 31ರವರೆಗೆನಿಮಗೆ ಇಷ್ಟದ ಸುಂದರ ಉಡುಗೊರೆ ಪ್ಯಾಕ್ ಖರೀದಿಸಬಹುದು. ಬೆಲೆ ₹800ರಿಂದ ₹1200.

ಕೇಕ್ ವಿಶೇಷ ಆಫರ್

ಕ್ರಿಸ್ಮಸ್ ಖುಷಿಯನ್ನು ಇನ್ನಷ್ಟು ಹೆಚ್ಚಿಸಲು ರುಚಿ–ರುಚಿಯಾದ ಕುಕ್ಕೀಸ್ ಮತ್ತು ಕೇಕ್ಗಳ ಮೇಲೆ ಸ್ಮೂರ್ ಹೊಸ ಆಫರ್ ಘೋಷಿಸಿದೆ.

ಕೇಕ್, ಬಿಸ್ಕೇಟ್ ಮತ್ತು ಸಣ್ಣ–ಸಣ್ಣ ಗೂಡಿಸ್ ಬುಟ್ಟಿಗಳ ಮೇಲೆ ವಿಶೇಷ ವಿನಾಯಿತಿ ನೀಡಿದೆ. ಈ ಬುಟ್ಟಿಯಲ್ಲಿ ರುಚಿ–ರುಚಿಯಾದ ಕ್ರಿಸ್ಮಸ್ ತಿನಿಸುಗಳಾದ ಟ್ರಫಲ್ಸ್, ಪಿನ್ವೀಲ್ ಕುಕ್ಕೀಸ್, ಮಲ್ಮೀರ್ಸ್, ಮಿನ್ಸ್ ಪೈಗಳನ್ನ ಪಡೆಯಬಹುದು. ಇದರ ಬೆಲೆ 150 ರಿಂದ ಆರಂಭವಾಗುತ್ತಿದ್ದು, ಈ ಆಫರ್ ಡಿ.31 ರವಗೆ ಮಾತ್ರ ಸೀಮಿತ.ಇಷ್ಟೇ ಮಾತ್ರವಲ್ಲದೇ ಸ್ಮೂರ್ನಸರ್ಪ್ರೈಸ್ ಗಿಫ್ಟ್ ಬಾಕ್ಸ್ಗಳು ಗ್ರಾಹಕರ ಮುಖದಲ್ಲಿ ನಗೆ ಬೀರುವಂತೆ ಮಾಡಲಿವೆ ಎಂದು ಸಂಸ್ಥೆ ತಿಳಿಸಿದೆ.

ಸಂಪರ್ಕ: 07899903069

ಸ್ಮೂರ್ ಶಾಖೆಗಳು: 100 ಅಡಿ ರಸ್ತೆ– ಇಂದಿರಾನಗರ, ಫೋರಂ ಮಾಲ್– ಕೋರಮಂಗಲ, ಒರಾಯನ್ ಮಾಲ್– ಮಲ್ಲೇಶ್ವರಂ,ಎಂಜಿ ಮಾಲ್– ಟ್ರಿನಿಟಿ ಸರ್ಕಲ್, ಯುಬಿ ಸಿಟಿ, 1ಎಂಜಿ ಮಾಲ್–ಹಲಸೂರು, ಆರ್ಎಂಝಡ್ ಇಕೋವರ್ಲ್ಡ್.

ಹೌಟಾ ಡೆಸರ್ಟ್

ಚೀನಾದ ಪ್ರಸಿದ್ಧ ‘ಯವುಚಾ’ರೆಸ್ಟೋರೆಂಟ್ ವಿಶೇಷ ವಿನ್ಯಾಸದ ಡೆಸರ್ಟ್ನೊಂದಿಗೆ ಭಾರತದ ಮಾರುಕಟ್ಟೆಗೆ ಆಗಮಿಸಿದೆ. ಖ್ಯಾತ ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ಜೊತೆ ಈ ಹೌಟ್ ಡೆಸರ್ಟ್ ಸಿದ್ಧಪಡಿಸಿದ್ದಾರೆ.

ಹೌಟ್ ಡೆಸರ್ಟ್ನ ವಿಶೇಷವೆಂದರೆ ಮ್ಯಾಕ್ರೋನಿ ಮತ್ತು ಮನೀಶ್ ಮಲೋತ್ರಾ ವಿನ್ಯಾಸದ ಬಾಕ್ಸ್. ಮನೀಶ್ ಡಿಸೈನ್ ಮಾಡಿರುವ ಬಾಕ್ಸ್ನಲ್ಲಿ ‘ಯವುಚಾ’ದ ವಿಶೇಷ ಡೆಸರ್ಟ್ಗಳನ್ನು ಇರಿಸಲಾಗಿದೆ. ಇದನ್ನು ಬರ್ತ್ಡೇ, ಮದುವೆ ಸಮಾರಂಭದಲ್ಲಿ ಉಡುಗೊರೆಯಾಗಿಯೂ ನೀಡಬಹುದು.

ಈ ಹೌಟ್ ಡೆಸರ್ಟ್ ವಿಶೇಷವಾಗಿ ‘ಯವುಚಾ’ದ ಫ್ರೆಂಚ್ ಪೇಸ್ಟ್ರೀಸ್, ಮ್ಯಾಕ್ರೋನಿ ಮತ್ತುಪೆಟಿಟ್ ಗೇಟಾಕ್ಸ್ ಸ್ವಾದಿಷ್ಟ ಖಾದ್ಯಗಳಾಗಿದೆ. ‘ಯವುಚಾ’ದ ಖಾದ್ಯಗಳಿಗೆ ದೇಸಿ ಸ್ವಾದದ ಟಚ್ ನೀಡಲಾಗಿದೆ.ಹೌಟ್ ಡೆಸರ್ಟ್ ನಗರದ ಯವುಚಾ ಶಾಖೆಯಲ್ಲಿ ಮುಂದಿನ ಮಾರ್ಚ್ 31ರ ತನಕಲಭ್ಯವಿದೆ.

ಸ್ಥಳ: ಯವುಚಾ, 5ನೇ ಮಹಡಿ, 1 ಎಂಜಿ ಮಾಲ್, ಎಂ.ಜಿ ರಸ್ತೆ.

ಕ್ರಿಸ್ಮಸ್ ಮೆನು

ಈ ಬಾರಿ ಕ್ರಿಸ್ಮಸ್ ಹಬ್ಬವನ್ನು ‘ಸೋಷಿಯಲ್’ ಶೈಲಿಯಲ್ಲಿ ಸಂಭ್ರಮಿಸಬಹುದು. ಕ್ರಿಸ್ಮಸ್ ಹಬ್ಬಕ್ಕಾಗಿ ಸೋಷಿಯಲ್ ವಿಶೇಷ ಮೆನು ಸಿದ್ಧಪಡಿಸಿದ್ದು, ಡಿಸೆಂಬರ್ 31ರವರೆಗೆ ಸೋಷಿಯಲ್ ಕ್ರಿಸ್ಮಸ್ ಆಹಾರ ಉತ್ಸವ ನಡೆಯಲಿದೆ.

ಕುಂಬಳಕಾಯಿ ಪರೋಟ, ವಿಂಡಲೊ ಸಾಸೆಜ್ ಫ್ರೈ, ಸ್ಮೋಕ್ಡ್ ಕ್ಯಾನ್ಬೆರಿ, ಮಲಾಯ್ ಟಿಕ್ಕಾ... ಹೀಗೆ ವೈವಿಧ್ಯಮಯ ವಿಶೇಷ ಖಾದ್ಯಗಳು ಕ್ರಿಸ್ಮಸ್ ಮೆನುನಲ್ಲಿವೆ. ಇನ್ನು ಪ್ಲಮ್ ಕೇಕ್ ಇಲ್ಲದೇ ಕ್ರಿಸ್ಮಸ್ ಅಪೂರ್ಣ. ಕಸ್ಟರ್ಡ್, ಡ್ರೈಫ್ರುಟ್ಸ್ ಹಾಗೂ ಚಾಕೊಲೇಟ್ನಿಂದ ಮಾಡಿದ ಸ್ವಾದಿಷ್ಟ ಫ್ಲಮ್ ಕೇಕ್ ಸವಿಯಬಹುದು. ಇದಲ್ಲದೇ ಬಗೆ ಬಗೆ ಕಾಕ್ಟೇಲ್ ಹಾಗೂ ಜ್ಯೂಸ್ಗಳಿವೆ.

*ಸ್ಥಳ: ಚರ್ಚ್ಸ್ಟ್ರೀಟ್, ಕೋರಮಂಗಲ, ವೈಟ್ಫೀಲ್ಡ್, ಸರ್ಜಾಪುರದಲ್ಲಿ ಸೋಷಿಯಲ್ ರೆಸ್ಟೋರೆಂಟ್ಗಳು

*ಸಮಯ: ಮಧ್ಯಾಹ್ನ 12ರಿಂದ ರಾತ್ರಿ 12.

ಕಬ್ಬನ್ ಪಾರ್ಕ್ನಲ್ಲಿಸಾಂಟಾ ಬೌವೌ
ವಾರಾಂತ್ಯದಲ್ಲಿನಿಮ್ಮ ಖುಷಿಯನ್ನು ದುಪ್ಪಟ್ಟು ಮಾಡಲು ‘ಸಾಂಟಾ ಬೌವೌ’ ಟೀಂ ಮುಂದಾಗಿದೆ. ಕಳೆದೆರಡು ವರ್ಷಗಳಂತೆ ಈ ಬಾರಿಯೂ ಕಬ್ಬನ್ ಪಾರ್ಕ್ ಕ್ಯಾನೈನ್ಸ್ ಹಾಗೂ ಸಿ.ಜೆ ಮೆಮೋರಿಯಲ್ ಟ್ರಸ್ಟ್ ಶ್ವಾನ ಪ್ರಿಯರಿಗೆಂದು‘ಸಾಂಟಾ ಬೌವೌ’ ಕಾರ್ಯಕ್ರಮ ಆಯೋಜಿಸಿದೆ.

ಕಬ್ಬನ್ ಪಾರ್ಕ್ನ ಸೆಂಟ್ರಲ್ ಲೈಬ್ರರಿ ಬಳಿಯ ಸಂಡೇ ಡಾಗ್ ಪಾರ್ಕ್ನಲ್ಲಿ ಡಿ.22 ರಂದು ಸಾಂಟಾ ಪಾರ್ಕ್ನಲ್ಲಿ ಶ್ವಾನಗಳ ಮೇಳ ನಡೆಯಲಿದೆ.

ಪುಟಾಣಿಗಳು ಮತ್ತು ನಾಯಿಗಳು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ.ಶ್ವಾನಗಳೆಂದರೆ ಮಕ್ಕಳು ಸೇರಿದಂತೆ ಎಲ್ಲರಿಗೂ ಅಚ್ಚುಮೆಚ್ಚು. ಶ್ವಾನಗಳು ಮತ್ತು ಮಕ್ಕಳ ನಡುವಿನ ಸಂಬಂಧ ಜೊತೆಗೆ ನಾಯಿಗಳ ಆರೈಕೆ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಕ್ರಿಸ್ಮಸ್ ಹಬ್ಬವೇ ಕಾರ್ಯಕ್ರಮದ ಪ್ರಮುಖ ಥೀಮ್.

ಇದರಲ್ಲಿ ಕಿಡ್ಸ್ ಮತ್ತು ಡಾಗಿ, ಫ್ಯಾಮಿಲಿ ಆ್ಯಂಡ್ ಸೇಫ್ಟಿ ಮತ್ತು ರೆಸ್ಕ್ಯೂ ಓನ್ ರ್ಯಾಂಪ್ ಚಟುವಟಿಕೆಗಳು ನಡೆಯಲಿದೆ. ಜೊತೆಗೆ ಪ್ರಾಣಿಗಳ ಕಲ್ಯಾಣ ಹಾಗೂ ರಕ್ಷಣೆಗಾಗಿ ಶ್ರಮಿಸಿದ ವ್ಯಕ್ತಿಗಳಿಗೆ ಸಿ.ಜೆ ಮೆಮೋರೊಯಲ್ ಟ್ರಸ್ಟ್ ಅವಾರ್ಡ್ ನೀಡಿ ಗೌರವಿಸಲಾಗುವುದು.

ಮುಖ್ಯ ಅತಿಥಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ‘ನ್ಯಾಷನಲ್ ಇಂಡಿ ಡಾಗ್ ಸೆಲೆಬ್ರೆಷನ್ ಡೇ’ ಕಾರ್ಯಕ್ರಮಕ್ಕೂ ಚಾಲನೆ ದೊರೆಯಲಿದೆ. ಕೇವಲ ವಿದೇಶಿ ತಳಿಯ ಶ್ವಾನಗಳು ಮಾತ್ರವಲ್ಲದೇ ಭಾರತೀಯ ತಳಿಯ ಶ್ವಾನಗಳಿಗೂ ಆಶ್ರಯ ಹಾಗೂ ಆರೈಕೆ ನೀಡುವುದು ನಮ್ಮ ಉದ್ದೇಶ ಎಂದು ಸಿ.ಜೆ ಮೆಮೋರಿಯಲ್ ಸಂಸ್ಥೆ ತಿಳಿಸಿದೆ.

ಸ್ಥಳ: ಸೆಂಟ್ರಲ್ ಲೈಬ್ರರಿ, ಕಬ್ಬನ್ ಪಾರ್ಕ್

ದಿನಾಂಕ: ಡಿ.22 (ಭಾನುವಾರ)

ಸಮಯ: ಬೆಳಿಗ್ಗೆ 9.30 ರಿಂದ 11.30ರವರೆಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.