ಸಂಗೀತ ಮಾಂತ್ರಿಕ ಇಳಯರಾಜ ಅವರ ಮೆಗಾ ಲೈಟ್ ಮ್ಯೂಸಿಕ್ ಕಾನ್ಸರ್ಟ್ 'ಸಂಗೀತ ಸಂಭ್ರಮ ಸಂಗೀತ’ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯಲಿದೆ.

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೈದಾನದಲ್ಲಿನ.16 ರಂದು ನಡೆಯಲಿರುವ ಕಛೇರಿ ನಗರದ ಸಂಗೀತ ಪ್ರೀಯರಿಗೆ ಭಾರತೀಯ ಹಲವು ಭಾಷೆಗಳ ಹಾಡುಗಳು ಮತ್ತು ಇಂಪಾದ ಸಂಗೀತದ ರಸದೌತಣ ಉಣಬಡಿಸಲಿದೆ.

ರಾಜ್ ಈವೆಂಟ್ಸ್ ಸಹಯೋಗದೊಂದಿಗೆ ಮರ್ಕ್ಯುರಿ ಇಂಟರ್‌ನ್ಯಾಷನಲ್ ಮತ್ತು ಅರುಣ್ ಮೀಡಿಯಾಸ್ ಈ ಕಾರ್ಯಕ್ರಮ ಆಯೋಜಿಸಿದ್ದು ಈಚೆಗೆ ಟಿಕೆಟ್ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಬೆಂಗಳೂರಿನಲ್ಲಿ ಇಳಯರಾಜ ಅವರ ಇಷ್ಟೊಂದು ದೊಡ್ಡ ಮಟ್ಟದ ಸಂಗೀತ ಕಾರ್ಯಕ್ರಮ ನಡೆಯುತ್ತಿರುವುದು ಇದೇ ಮೊದಲು ಎಂದು ಸಂಯೋಜಕರು ಹೇಳಿದ್ದಾರೆ.

ಬಹುಭಾಷಾ ಸಂಗೀತ ಪ್ರತಿಭೆಯಾದ ಇಳಯರಾಜ ಅವರು ಸಂಗೀತ ಸಂಯೋಜಿಸಿದ ಕನ್ನಡ, ತಮಿಳು, ತೆಲುಗು, ಮಲಯಾಳ ಮತ್ತು ಹಿಂದಿ ಚಿತ್ರಗೀತೆಗಳು ಮೂಡಿಬರಲಿವೆ.

‘ಬೆಂಗಳೂರು ನನ್ನ ನೆಚ್ಚಿನ ನಗರಗಳಲ್ಲಿ ಒಂದು. ಇಲ್ಲಿ ಸಂಗೀತ ಕಛೇರಿ ನೀಡುತ್ತಿರುವುದು ಸಂತಸದ ವಿಷಯ. ಇದು ನನ್ನ ಜೀವನದ ಮೈಲುಗಲ್ಲು ಆಗಲಿದೆ’ ಎಂದು ಇಳಿಯರಾಜ ಹೇಳಿದ್ದಾರೆ.‘ಬುಕ್ ಮೈ ಷೋ’ದಲ್ಲಿ ಟಿಕೆಟ್ ಲಭ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.