ಭಾರತೀಯ ಸಂಸ್ಕೃತಿಯಲ್ಲಿ ಹಾಡುಗಳಿಗೆ ವಿಶೇಷ ಸ್ಥಾನವಿದೆ. ಹಾಡು ಹಬ್ಬದ ಆಚರಣೆಗಳ ಅವಿಭಾಜ್ಯ ಅಂಗ.ಈ ನಿಟ್ಟಿನಲ್ಲಿ ಪ್ರತಿಯೊಂದು ಹಬ್ಬಕ್ಕೂ ಒಂದು ಹಾಡು ಬರಲಿದೆ. ಬಂತು ಯುಗಾದಿ ಗೀತೆ ಎಲ್ಲರೂ ಜೊತೆಗೂಡಿ ಹಬ್ಬವನ್ನು ಸಂಭ್ರಮಿಸುವ, ನಗರದಿಂದ ಹೊರ ಬಂದು ಹಳ್ಳಿಯ ಸೊಗಡನ್ನು ಸವಿಯುವ ವಿಚಾರವನ್ನು ಸಾರುತ್ತದೆ.

ಯುಗ ಯುಗಗಳಿಂದ ಮರಳಿ ಬರುತಿರುವ ಯುಗಾದಿಗೊಂದು ಹೊಚ್ಚಹೊಸ ಹಾಡು ‘ಬಂತು ಯುಗಾದಿ..!’ ಕನ್ನಡ ಚಲನಚಿತ್ರ ರಂಗದ ಹೆಸರಾಂತ ಗೀತರಚನಾಕಾರ ಕವಿರಾಜ್ ಅವರ ಸಾಹಿತ್ಯಕ್ಕೆ, ಚಿತ್ರ ನಿರ್ದೇಶಕ ಎಸ್.ಡಿ. ಅರವಿಂದ್ ರಾಗಸಂಯೋಜನೆ ಮಾಡಿದ್ದಾರೆ.

ಅನನ್ಯ ಭಟ್, ಉಷಾ ಪ್ರಕಾಶ್ ಹಾಡಿದ್ದಾರೆ. ವಾಕಿಂಗ್ ವಯೊಲಿನಿಸ್ಟ್ ಅನೀಶ್ ವಿದ್ಯಾಶಂಕರ್ ವಾದ್ಯ ಸಾಥ್ ನೀಡಿದ್ದಾರೆ. ಗೋಲ್ಸ್ ಅಂಡ್ ಡ್ರೀಮ್ಸ್ ಆಡಿಯೊ ಕಂಪೆನಿ ರೂಪಿಸಿದ ಈ ಹಾಡು ಯೂಟ್ಯೂಬ್, ಜಿಯೊ ಮ್ಯುಸಿಕ್ ಮತ್ತಿತರ ಜಾಲತಾಣಗಳಲ್ಲಿ ಯುಗಾದಿಯಂದು ಪ್ರಸಾರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.