‘ಚಕ್ಕೆ–ಮೊಗ್ಗು’– ಬ್ಲಾಗ್‌ನ ಹೆಸರು ಎಷ್ಟು ಸೊಗಸಾಗಿದೆಯಲ್ಲವೇ? ಚಕ್ಕೆಯ ಮಸಾಲ ಘಮ ಹಾಗೂ ಮೊಗ್ಗಿನ ನವಿರು ಘಮಗಳು ಒಂದರಲ್ಲೊಂದು ಬೆರೆತು, ವಿಶಿಷ್ಟವಾದೊಂದು ಘಮದ ಕಲ್ಪನೆ ಮೂಗಿಗೆ ಹೊಳೆಯುತ್ತಿರಬಹುದು. ಈ ಬ್ಲಾಗಿನಲ್ಲಿ ವಿಶಿಷ್ಟ ಬರಹಗಳಂತೂ ಇವೆ.

‘‘ಮಸಾಲೆ ಅಲ್ರೀ ಇದು ಗಂಧದ ಚಕ್ಕೆ – ಮಲ್ಲಿಗೆ ಮೊಗ್ಗು! ಬ್ಲಾಗ್ ಕನ್ನಡಿಗರಿಗಾಗಿ ಆಸ್ಟ್ರೇಲಿಯಾ ಮತ್ತು ಕರ್ನಾಟಕಕ್ಕೆ ಹಿಡಿದ ಕನ್ನಡಿ. ಅಲ್ಲೂ – ಇಲ್ಲೂ ಕಂಡದ್ದು, ಅನಿಸಿದ್ದು, ಅನುಭವಿಸಿದ್ದು ನಮ್ಮವರೊಡನೆ ಹಂಚಿಕೊಳ್ಳುವ ಪ್ರಯತ್ನ’’ ಎನ್ನುವುದು ನಮ್ಮ ಘಮ ಮೀಮಾಂಸೆಗೆ ಪ್ರತಿಕ್ರಿಯೆ ರೂಪದಲ್ಲಿ ಬ್ಲಾಗಿಗರು ನೀಡಿರುವ ಸ್ಪಷ್ಟನೆ.

ಕನಕಾಪುರ ನಾಣಿ, ಇದು ಬ್ಲಾಗಿಗರ ಹೆಸರು. ಪೂರ್ಣ ಹೆಸರು ಬೇರೆ ಇರಬಹುದೇನೋ? ಇರಲಿ, ನಾಣಿ ಎನ್ನುವ ಹೆಸರೇ ಚೆನ್ನಾಗಿದೆ, ಕರೆಯಲಿಕ್ಕೆ ಮುದ್ದಾಗಿಯೂ ಇದೆ. ಅಂದಹಾಗೆ, ಈ ನಾಣಿ ಅವರ ಹವ್ಯಾಸಗಳ ಪಟ್ಟಿ ದೊಡ್ಡದಿದೆ. ‘ಸಂಗೀತ, ನಾಟಕ, ಕರಕುಶಲ ಕಲೆ, ಜಾನಪದ ಕಲೆ, ಅಡುಗೆ, ಹಾಸ್ಯ, ಚಾರಣ ನನ್ನ ಮುಖ್ಯ ಹವ್ಯಾಸಗಳು’ ಎಂದವರು ಹೇಳಿಕೊಂಡಿದ್ದಾರೆ.

ಉಪ ಹವ್ಯಾಸಗಳ ಪಟ್ಟಿ ಇನ್ನೆಷ್ಟು ದೊಡ್ಡದಿರಬಹುದು. ಇಷ್ಟು ಮಾತ್ರವಲ್ಲ, ಈ ನಾಣಿ ಆಸ್ಟ್ರೇಲಿಯಾದಲ್ಲಿ ಕನ್ನಡ ಕಲಿಸುವ ಕೆಲಸದಲ್ಲೂ ತೊಡಗಿಕೊಂಡಿದ್ದಾರಂತೆ. ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವವೂ ಅವರ ಪರಿಚಯದ ವಿಶೇಷಗಳಾಗಿವೆ. ಬ್ಲಾಗಿಗರು ಎಂದಮೇಲೆ ಓದು–ಬರವಣಿಗೆಯ ಸಖ್ಯ ಇರಲೇಬೇಕು, ಇವೆ.

ಇದೆಲ್ಲದರ ಜೊತೆಗೆ ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿಯನ್ನೂ ಅವರು ನಿರ್ವಹಿಸುತ್ತಿದ್ದಾರಂತೆ. ಭಲೇ ಎನ್ನುತ್ತಲೇ, ‘ಚಕ್ಕೆ–ಮೊಗ್ಗು’ (chakkemoggu.wordpress.com) ಬ್ಲಾಗಿನಲ್ಲೊಮ್ಮೆ ಇಣುಕೋಣ. ಒಂದು ಬರಹದ ಮೂಲಕವೇ ಬ್ಲಾಗಿನ ಅಗುಳನ್ನು ಹಿಚುಕೋಣ:

‘‘ಸರಿ ಅಲ್ಲೇ ಪಕ್ಕದಲ್ಲಿ ಪುಟ್ಟ ಹಳ್ಳಿ ಕಂಡಿತು. ನನ್ನ ಅದೃಷ್ಟಕ್ಕೆ ಒಬ್ಬ ಹುಡುಗ ಅವನ ಚಿಕ್ಕ ಮನೆಯ ಬಾಗಿಲಿಗೆ ಒರಗಿ ನಿಂತಿದ್ದ. ಸೈಕಲ್ ನಿಲ್ಲಿಸಿ, ‘ಒಂದ್ ಲೋಟ ನೀರು ಕೊಡ್ತೀಯಾ?’ ಅಂತ ಕೇಳಿದೆ, ಅರೆ ಕ್ಷಣ ಸುಮ್ಮನಿದ್ದು ನಂತರ ಒಳಗೆ ಹೋಗಿ ನೀರು ತಂದ, ಪುಟ್ಟ ಮಡಕೆ. ಮಡಕೆಯಲ್ಲಿ ಕುಡಿಯುವ ಲಕ್ ಇವತ್ತು ಅಂತ ನಾನೂ ಅವನ ಮನೆಯಕಡೆಗೆ ಹೆಜ್ಜೆ ಹಾಕಿದೆ, ಅವನೂ ನನ್ನಕಡೆ ಬರುತ್ತಿದ್ದ.

ಅಷ್ಟರಲ್ಲಿ ಎಲ್ಲಿಂದಲೋ ಒಬ್ಬ ಹಿರಿಯ ಗಂಡಸು ಓಡಿಬರುತ್ತಾ ‘ಏಯ್ ಏಯ್ ಓಗಾ ಓಗಾ. ಓಗಾಲೈ’ ಅಂತ ಗಟ್ಟಿಯಾಗಿ ಪ್ರಾಣಿಯನ್ನು ಅಟ್ಟುವಂತೆ ಅರಚಿದ. ನನಗೆ ಭಯವಾಯಿತು. ಆತ ಗದರಿದ್ದು ಆ ಪುಟ್ಟ ಹುಡುಗನ್ನ. ‘ಸ್ವಾಮೀ, ನನಗೆ ಬಾಯಾರಿಕೆ...’ ಅಂತ ಹೇಳುವಷ್ಟರಲ್ಲಿ ಆತ ಹೇಳಿದ್ದು ಒಂದೇ ಮಾತು– ‘ಅವ್ರು ಕಮ್ ಜಾತಿ ಸಾಮೀ, ಓಗಿ’. ಬೆಪ್ಪಾಗಿ ನಿಂತೆ. ಅವನು ದೂರಕ್ಕೆ ಹೋಗುವ ಮೊದಲೇ ಭಿಕ್ಷದೋರ್ ಥರ– ‘ಸ್ವಾಮೀ ನೀರು?’ ಅಂತ ಆಶ್ಚರ್ಯದಿಂದ ಕೇಳಿದೆ. ಅದಕ್ಕೆ ಆತ ಉತ್ತರಿಸಲೇ ಇಲ್ಲ. ಕಡೆಗೆ ಮುಂದಿನ ಊರಲ್ಲಿ ನಾನೇ ಬೋರ್ ವೆಲ್ ಪಂಪ್ ಒತ್ತಿ ಬೊಗಸೆ ಹಿಡಿದು ಕುಡಿದಿದ್ದಾಯ್ತು’’.

ಭಾರತೀಯ ಸಮಾಜದಲ್ಲಿ ಬೇರೂರಿರುವ ಜಾತಿ ಸಮಸ್ಯೆಯನ್ನು ನಾಣಿ ಅವರು ಹಿಡಿದಿಡುವುದು ಹೀಗೆ. ತಮ್ಮ ಅನುಭವವನ್ನು ಅವರು ಕಥನದ ರೂಪದಲ್ಲಿ, ಸಂಯಮದಲ್ಲಿ, ನಿರೂಪಿಸಿರುವುದು ವಿಶೇಷ. ಇಂಥ ಅನುಭವ ಕಥನಗಳು, ಸಮಾಜದ ಬಗೆಗಿನ ಕಾಮೆಂಟರಿಗಳು ಬ್ಲಾಗ್‌ನಲ್ಲಿ ಸಾಕಷ್ಟಿವೆ. ಅವುಗಳಲ್ಲೊಂದು– ‘ಶಾಲೆ ಕಲಿಸದ ಪಾಠ – ಕಚಕ್ ಪಿಚಕ್’. ಈ ಕಚಕ್ ಪಿಚಕ್ ನಮ್ಮ ನಡುವಣ ಸಮಸ್ಯೆಯೂ ಹೌದಲ್ಲವೇ? ಆದರೆ ಇದು ಉಗುಳಿನ ಕಚಕ್ ಪಿಚಕ್ ಅಲ್ಲ.

ಪಕ್ಕದಲ್ಲಿ ಕೂತವರು ಅಸಹ್ಯ ಪಟ್ಟುಕೊಳ್ಳದಂತೆ ಊಟ ಮಾಡುವ ಸಭ್ಯತೆಯ ಕುರಿತಾದುದು. ಊಟದ ಕುರಿತ ತಮ್ಮ ಬಾಲ್ಯಕಾಲದ ಸವಿನೆನಪುಗಳನ್ನು ಚಪ್ಪರಿಸುವ ಲೇಖಕರು, ‘ಕಚಕ್ ಪಚಕ್’ ಮುಗಿಸುವುದು ಹೀಗೆ: ‘‘ಇಲ್ಲೊಂದ್ ನ್ಯೂಸ್ ನೋಡಿ– ಸಿನಿಮಾದಲ್ಲಿ ಕುಳಿತು ಪಾಪ್ ಕಾರ್ನ್ ತಿಂತಾ ಹೀಗೇ ಪಕ್ಕದವರಿಗೆ ತಡೆಯಲಾರದಷ್ಟು ಜೋರಾಗಿ ಜೋಳ ಜಗೀತಿದ್ದವನ ಶಬ್ದ ತಾಳಲಾರದೆ ಮತ್ತೊಬ್ಬ ತನ್ನ ಪಿಸ್ತೂಲಿನಿಂದ ಢಂ ಅನ್ನಿಸೇ ಬಿಟ್ಟನಂತೆ. ಭರಭರ, ಸರಸರ ತಿನ್ನುವುದರಂತೆ, ತಾಳ್ಮೆ ಕೂಡಾ ಶಾಲೆ ಕಲಿಸದ ಪಾಠವೇ’’.

ನಾಣಿ ಅವರಿಗೆ ಡಿ.ವಿ. ಗುಂಡಪ್ಪನವರ ಬಗ್ಗೆಯೂ ಅವರ ‘ಮಂಕುತಿಮ್ಮನ ಕಗ್ಗ’ದ ಬಗ್ಗೆಯೂ ಇನ್ನಿಲ್ಲದ ಅಭಿಮಾನ. ತಮ್ಮ ಮಾತುಗಳಿಗೆ ಶಕ್ತಿಮದ್ದು ಎನ್ನುವಂತೆ ಅವರು ಬ್ಲಾಗಿನುದ್ದಕ್ಕೂ ಡಿವಿಜಿ ನಾಮಬಲ ಹಾಗೂ ಕಗ್ಗದ ಉಕ್ತಿಗಳನ್ನು ಬಳಸಿಕೊಂಡಿದ್ದಾರೆ. ಹಾಗಾಗಿ, ‘ಚಕ್ಕೆ–ಮೊಗ್ಗು’ ಒಂದರ್ಥದಲ್ಲಿ ಡಿವಿಜಿ ಅವರನ್ನು ನೆನಪಿಸುವ ಬ್ಲಾಗು ಕೂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.