ನಾನು ಭರತನಾಟ್ಯ ಕಲಿಯಬೇಕು ಎಂದು ಮನಸ್ಸು ಮಾಡಿದ್ದೇ ತುಂಬ ತಡವಾಗಿ. ಆದರೆ ನನ್ನ ವಯಸ್ಸು ನನ್ನ ಕಲಾಪ್ರೀತಿಯನ್ನು ಸೋಲಿಸಲಾರದು ಎಂಬುದು ನನಗೆ ಗೊತ್ತಿತ್ತು’ ಎನ್ನುವ 65ರ ಹರೆಯದ ದೇವಾ ನಹತಾ, ವಿಶ್ರಾಂತಿ ಬಯಸುವ ಈ ವಯಸ್ಸಿನಲ್ಲಿ ವೇದಿಕೆ ಏರಿ ಸತತ ಒಂದೂವರೆ ಗಂಟೆ ನೃತ್ಯ ಪ್ರದರ್ಶನ ಮಾಡಿ ವಿಸ್ಮಯ ಮೂಡಿಸಲು ಮುಂದಾಗಿದ್ದಾರೆ.

38 ವರ್ಷದವರಿದ್ದಾಗ ಅವರಿಗೆ ನೃತ್ಯ ಕಲಿಯಬೇಕು ಎಂದು ಅನಿಸಿತು. ವೇದಿಕೆ ಮೇಲೆ ಪ್ರದರ್ಶನ ನೀಡಲು ಆರಂಭಿಸಿ ಇದೇ 4–5 ವರ್ಷಗಳಾಗಿವೆ. ಈವರೆಗೆ ನಾಲ್ಕು ಪ್ರದರ್ಶನ ನೀಡಿದ್ದಾರೆ. ಇದೀಗ ತಮ್ಮ 65ನೇ ವಯಸ್ಸಿನಲ್ಲಿ 5ನೇ ಪ್ರದರ್ಶನ ನೀಡಲು ಹೊರಟಿರುವ ಅವರು, ಸತತ ಒಂದೂವರೆ ಗಂಟೆ ನರ್ತಿಸಿ ನೋಡುವವರನ್ನು ಚಕಿತಗೊಳಿಸಲಿದ್ದಾರೆ.

‘ಹೇಮಾಮಾಲಿನಿ ಅವರು ಕಿನಾರಾ ಚಿತ್ರದಲ್ಲಿ ಕೂಚ್ಚಿಪುಡಿ ನೃತ್ಯವನ್ನು ಪ್ರದರ್ಶಿಸಿದ್ದನ್ನು ನೋಡಿ ನಾನು ಬೆರಗಾದೆ. ನನಗೂ ನೃತ್ಯವನ್ನು ಕಲಿಯಬೇಕು ಎಂಬ ಆಸೆ ಮೂಡಿದ್ದು ಆಗಲೇ. ಆಗ ನನಗೆ 38 ವರ್ಷವಾಗಿತ್ತು. ಆದರೆ ಹೇಮಾ ಕೂಡ ಚಿಕ್ಕ ವಯಸ್ಸಿನವರೇನೂ ಆಗಿರಲಿಲ್ಲ. ಅವರು ಅಷ್ಟೊಂದು ಮನೋಜ್ಞವಾಗಿ ನೃತ್ಯವನ್ನು ಮಾಡುತ್ತಾರೆ ಎಂದರೆ ನನ್ನಿಂದ ಏಕಾಗಬಾರದು ಎಂದು ಈ ನಿರ್ಧಾರ ತೆಗೆದುಕೊಂಡೆ’ ಎಂದು ತಮ್ಮ ನೃತ್ಯಕ್ಕೆ ಸ್ಫೂರ್ತಿಯಾದ ಬಗ್ಗೆ ಹೇಳಿಕೊಳ್ಳುತ್ತಾರೆ ದೇವಾ.

‘ನಮ್ಮೂರು ರಾಜಸ್ತಾನದ ಮಾರ್ವಾಡಿ. ಓದಿರುವುದೆಲ್ಲಾ ಮುಂಬೈನಲ್ಲಿ. ಮದುವೆಯಾಗಿ ಬೆಂಗಳೂರಿಗೆ ಬಂದು 44 ವರ್ಷಗಳೇ ಕಳೆದಿವೆ. ಆದರೆ ಮೊದಲಿನ ಬೆಂಗಳೂರಿಗೂ ಇಂದಿನ ಬೆಂಗಳೂರಿಗೂ ಬಹಳ ವ್ಯತ್ಯಾಸವಿದೆ. ಮೊದಲು ತಂತ್ರಜ್ಞಾನ ಇರಲಿಲ್ಲ. ಆದರೆ, ಈಗ ತಂತ್ರಜ್ಞಾನ ಬೆಳೆದಷ್ಟೂ ಜನರು ಯಾಂತ್ರಿಕವಾಗುತ್ತಿದ್ದಾರೆ’ ಎನ್ನುವ ಬೇಸರ ಅವರದು.

‘ನನಗೆ ಮೊದಲಿನಿಂದಲೂ ಫಾಸ್ಟ್ಫುಡ್ ಬಗ್ಗೆ ಹೆಚ್ಚಿನ ಒಲವಿಲ್ಲ. ರೋಟಿ, ದಾಲ್, ಹಣ್ಣು ಮಿತ ಆಹಾರ ನನಗಿಷ್ಟ. ಈ ವಯಸ್ಸಿನಲ್ಲಿಯೂ ಹೀಗೆ ದಣಿಯದೇ ಕುಣಿಯುವ ಚೈತನ್ಯ ಉಳಿಸಿಕೊಳ್ಳಲು ಈ ನನ್ನ ಆಹಾರ ಪದ್ಧತಿಯೂ ಒಂದು ಕಾರಣ. ಆರೋಗ್ಯಕ್ಕಾಗಿ ಯೋಗ ಮಾಡುತ್ತೇನೆ. ದಿನಾ ಬೆಳಿಗ್ಗೆ ಹಾಗೂ ಸಂಜೆ ವಾಯು ವಿಹಾರ ತಪ್ಪುವುದಿಲ್ಲ’ ಎನ್ನುವುದು ಅವರ ಜೀವನಶೈಲಿಗೆ ಹಿಡಿದ ಕೈಗನ್ನಡಿ.

ಗುರು ಕೆ.ಎಂ.ರಾಮನ್ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಕಲಿಯಲು ಮುಂದಾದಾಗ ಪತಿ ಜೀತೇಂದ್ರ ಹಾಗೂ ಮನೆಯವರೆಲ್ಲ ಪ್ರೋತ್ಸಾಹ ನೀಡದೇ ಇದ್ದರೆ ನಾನು ಏನೂ ಮಾಡಲು ಆಗುತ್ತಿರಲಿಲ್ಲ ಎನ್ನುತ್ತಾರೆ ದೇವಾ. ಇದುವರೆಗೂ ಒಟ್ಟು ನಾಲ್ಕು ನೃತ್ಯ ಪ್ರದರ್ಶನಗಳನ್ನು ನೀಡಿರುವ ಅವರು, ಒಂದೊಂದು ಕಾರ್ಯಕ್ರಮವೂ ಒಂದೊಂದು ರೀತಿಯಲ್ಲಿ ವಿಭಿನ್ನವಾಗಿರುವಂತೆ ನೋಡಿಕೊಳ್ಳುವುದಕ್ಕೆ ಮೊದಲ ಆದ್ಯತೆ ನೀಡಿದ್ದಾರೆ.

ಕೇವಲ ನೃತ್ಯಪ್ರೀತಿಯಷ್ಟೇ ಅಲ್ಲ. ಅದರ ಜೊತೆಗೆ ಇನ್ನೂ ಹಲವಾರು ಆಸಕ್ತಿಗಳೆಡೆಗೆ ದೇವಾ ಅವರ ಒಲವಿದೆ. ಅವರು ಕೆಲವು ಕವನಗಳನ್ನೂ ಬರೆದಿದ್ದಾರೆ. ಅಲ್ಲದೇ, ಮನೆಯ ಅಲಂಕಾರಿಕ ವಸ್ತುಗಳನ್ನು ತಾವೇ ತಯಾರಿಸಿ ಮನೆಯನ್ನು ಓರಣವಾಗಿಡುವುದು ಅವರ ಮತ್ತೊಂದು ಹವ್ಯಾಸ.

ಭಾವಾಭಿನಯ...
ಮಾರ್ಚ್ 18ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ದೇವಾ ನಹತಾ ಅಪರೂಪದ ಪ್ರದರ್ಶನ ನೀಡಲಿದ್ದಾರೆ. ಈ ನೃತ್ಯದಲ್ಲಿ ಭಾವಾಭಿನಯವೇ ಪ್ರಮುಖವಾಗಿರುತ್ತದೆ. ಇಲ್ಲಿ ಪದಗಳು ಮತ್ತು ಭಾವನೆಗಳು ಒಗ್ಗೂಡಲು ವೇದಿಕೆ ಸೃಷ್ಟಿಯಾಗಲಿದೆ ಎನ್ನುವ ಅವರು, ಒಂದೂವರೆ ಗಂಟೆ ನಿರಂತರ ನೃತ್ಯ ಪ್ರದರ್ಶನ ನೀಡಲಿರುವುದು ನನ್ನ ಪಾಲಿಗಂತೂ ಒಂದು ಅವಿಸ್ಮರಣೀಯ ಕ್ಷಣವಾಗಲಿದೆ ಎನ್ನುತ್ತಾರೆ.

ಈ ಭರತನಾಟ್ಯ ಪ್ರದರ್ಶನವು ಹಿಂದಿ ಕವನಗಳ ವಿಶಿಷ್ಟ ಸಂಯೋಜನೆಗಳೊಂದಿಗೆ ಮೆರುಗು ನೀಡುವುದು ವಿಶೇಷ. ಇವುಗಳಲ್ಲಿ ಕೆಲವನ್ನು ಅವರೇ ರಚಿಸಿದ್ದು, ಇನ್ನೂ ಹಿಂದಿ ಕವಿಗಳ ವಿಶಿಷ್ಟ ಕವನಗಳಿಗೆ ಅವರು ಹೆಜ್ಜೆ ಹಾಕಲಿದ್ದಾರೆ.

ಅಮ್ಮ ನೋಡಿ ಸಂತಸಪಟ್ಟಿದ್ದು...
ನಾನು ನೀಡಿದ ಭರತನಾಟ್ಯದ ನಾಲ್ಕನೇ ಪ್ರದರ್ಶನವನ್ನು ನನ್ನ ಅಮ್ಮ ತಮ್ಮ 90 ನೇ ವರ್ಷದಲ್ಲಿ ನೋಡಿ, ಸಂತಸಪಟ್ಟಿದ್ದು ಈಗಲೂ ನೆನಪಿದೆ. ನನ್ನ ಈ ಪ್ರದರ್ಶನವನ್ನೂ ಅವರು ಅಲ್ಲಿಂದಲೇ ನೋಡಿ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ನನ್ನದು.
ದೇವಾ ನಹತಾ

ಸಂತಸ, ಅಭಿಮಾನ...
ದೇವಾ ಮೊದಲಿನಿಂದಲೂ ಚುರುಕು, ಚಟುವಟಿಕೆಯ ಪ್ರವೃತ್ತಿ. ಹೊಸದೇನನ್ನಾದರೂ ಕಲಿಯಬೇಕೆಂಬ ಹಂಬಲ ಯಾವಾಗಿನಿಂದಲೂ ಇತ್ತು. ಭರತನಾಟ್ಯವನ್ನು ಕಲಿಯಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದಾಗ ನಾನೂ ಬೇಡ ಅನ್ನಲಿಲ್ಲ. ಈಗ ಕಾಲ ಬದಲಾಗಿದೆ. ಹೆಣ್ಣು ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ.

ಸಾಧಿಸುವ ಛಲ ಇರುವ ದೇವಾಳನ್ನು ನಾನೇಕೆ ಹಿಂದೆಳೆಯಬೇಕು ಎಂದು ಆಗಲಿ ಅಂದೆ. ಆಗಿನ ಕಾಲದಲ್ಲಿ ನೃತ್ಯ ಕಲಿಯುವುದು ಕೀಳು ಎಂಬ ಭಾವನೆ ಇತ್ತು. ನಮ್ಮ ಮನೆಯಲ್ಲಿ ಯಾರೂ ನೃತ್ಯವನ್ನು ಕಲಿಯುತ್ತಿರಲಿಲ್ಲ. ಆದರೆ, ಇವಳ ಆಸೆಗೆ ನಾನು ಮತ್ತು ಕುಟುಂಬದವರು ಅಡ್ಡಿ ವ್ಯಕ್ತಪಡಿಸಲಿಲ್ಲ. ಈಗ ಅವಳ ಸಾಧನೆಯನ್ನು ನೋಡಿ ಸಂತಸವಾಗುತ್ತದೆ.
ಜೀತೆಂದ್ರ ನಹತಾ, ಪತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.