ಬೆಂಗಳೂರು: ಮನೆಯಲ್ಲಿ ಸಂಗ್ರಹವಾಗುವ ಹಸಿ ಕಸದಿಂದ ಜೈವಿಕ ಅನಿಲ ಉತ್ಪಾದಿಸುವ ಹಾಗೂ ಅದನ್ನು ಅಡುಗೆ ಅನಿಲವಾಗಿ ಬಳಸುವ ‘ನಗರ ತ್ಯಾಜ್ಯ ನಿರ್ವಹಣೆ’ ಎನ್ನುವ ಹೊಸ ತಂತ್ರಜ್ಞಾನ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಜನರನ್ನು ಆಕರ್ಷಿಸಿತು.

ಮೇಳದಲ್ಲಿದ್ದ ಈ ತಾಂತ್ರಿಕತೆಯ ಮಳಿಗೆ ಎದುರು ಮಾಹಿತಿ ಪಡೆಯಲು ಜನ ಮುಗಿಬಿದ್ದರು.

‘ಎಲ್ಲ ಮನೆಗಳಲ್ಲಿ ಹಸಿ ಕಸ ಪ್ರತಿದಿನ ಉತ್ಪಾದನೆಯಾಗುತ್ತದೆ. ಅದನ್ನೇ ಮತ್ತೆ ಮನೆಯ ಉಪಯೋಗಕ್ಕೆ ಬಳಸಿಕೊಳ್ಳುವ ವಿಧಾನವೇನಗರ ತ್ಯಾಜ್ಯ ನಿರ್ವಹಣೆ. ಹಸಿ ಕಸದಿಂದ ಮನೆಗೆ ಹೆಚ್ಚುವರಿಯಾಗಿ ಗ್ಯಾಸ್ ಪಡೆಯಬಹುದು’ ಎಂದು ಪೀಣ್ಯ ಮೂಲದ ಹರಿತ್ ಅವನಿ ಟೆಕ್ನಾಲಜೀಸ್ನವ್ಯವಹಾರ ಅಭಿವೃದ್ಧಿ ಮುಖ್ಯಸ್ಥ ಕಿರಣ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ನೂತನ ತಂತ್ರಜ್ಞಾನದಡಿ ಪ್ರತಿ 2 ಕೆ.ಜಿಯಷ್ಟು ಹಸಿ ಕಸದಿಂದ 250 ಲೀಟರ್ಗಳಷ್ಟು ಮೀಥೇನ್ ಗ್ಯಾಸ್ ಹಾಗೂ ಒಂದೂವರೆ ಲೀಟರ್ನಷ್ಟು ದ್ರಾವಣ ಮಾದರಿಯ ಜೈವಿಕ ಗೊಬ್ಬರ ಉತ್ಪಾದಿಸಬಹುದು. ಈ ತಂತ್ರಜ್ಞಾನವನ್ನು ಮನೆಗೆ ಅಳವಡಿಸಲು ₹25 ಸಾವಿರ ಖರ್ಚಾಗಬಹುದು. ಸಂಸ್ಥೆಯಿಂದಲೇ ಈ ವ್ಯವಸ್ಥೆ ಇದೆ’ ಎಂದು ವಿವರಿಸಿದರು.

ಪ್ರಕ್ರಿಯೆ ಹೇಗೆ?: ‘ನಗರ ತ್ಯಾಜ್ಯ ನಿರ್ವಹಣೆಗೆ ಮನೆಯಲ್ಲಿ ಒಂದು ಡ್ರಮ್ ಅಳವಡಿಸಬೇಕು. ಇದಕ್ಕೆ ಮನೆಯಲ್ಲಿ ಸಂಗ್ರಹವಾಗುವ ಹಸಿ ಕಸ ಹಾಕಬೇಕು. ಬ್ಯಾಕ್ಟೀರಿಯಾ ಮಾದರಿಯ ಮೈಕ್ರೋಬ್ಸ್ಗಳನ್ನು ಡ್ರಮ್ ಒಳಗೆ ಹಾಕಲಾಗುವುದು. ಅದು ಕಸದಿಂದ ಅನಿಲ ಉತ್ಪಾದಿಸುತ್ತದೆ. ಅನಿಲ ಸಂಗ್ರಹಣೆಗೆ ಪ್ರತ್ಯೇಕ ಡ್ರಮ್ ಅಳವಡಿಸಬೇಕು. ಅಲ್ಲಿಂದ ನೇರವಾಗಿ ಒಂದು ಪಾತ್ರೆ ಇಡಬಹುದಾದಂತಹ ಗ್ಯಾಸ್ಗೆ ಸಂಪರ್ಕ ನೀಡಬಹುದು’ ಎಂದು ಸಂಸ್ಥೆಯ ಮಾಲೀಕ ರವಿಕುಮಾರ್ ಮಾಹಿತಿ ನೀಡಿದರು.

ಹೆಚ್ಚಿನ ಮಾಹಿತಿಗೆ ravi@harithavani.in ಅಥವಾ 8892632742 ಅನ್ನು ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.