‘ತಮಿಳುನಾಡಿನಲ್ಲಿ ಕಮಲ ಅರಳುತ್ತಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಇದೇ ಮಂಗಳವಾರ (ಜೂನ್ 7) ಟ್ವೀಟ್ ಮಾಡಿದ್ದಾರೆ. ನಾಲ್ವರು ಯುವಕರು ಒಬ್ಬರ ಹೆಗಲ ಮೇಲೆ ಒಬ್ಬರು ನಿಂತು, ವಿದ್ಯುತ್ ಕಂಬದ ಮೇಲೆ ಬಿಜೆಪಿ ಧ್ವಜ ಹಾರಿಸುತ್ತಿರುವ ಚಿತ್ರವನ್ನು ಅವರು ಟ್ವೀಟ್ ಮಾಡಿದ್ದಾರೆ. ಬಿಜೆಪಿಯ ಹಲವು ನಾಯಕರು ಇದನ್ನು ಮರುಟ್ವೀಟ್ ಮಾಡಿದ್ದಾರೆ. ಈ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದು ತಿರುಚಲಾದ ಚಿತ್ರ ಎಂದು ಆಲ್ಟ್ ನ್ಯೂಸ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ‘2022ರ ಮೇ 31ರಂದು ತೆಲಂಗಾಣ ಬಿಎಸ್‌ಪಿ ಮುಖಂಡರು ಮೂಲ ಚಿತ್ರವನ್ನು ಟ್ವೀಟ್ ಮಾಡಿದ್ದರು. ನಾಲ್ವರು ಯುವಕರು ಒಬ್ಬರ ಹೆಗಲ ಮೇಲೆ ಒಬ್ಬರು ನಿಂತು, ವಿದ್ಯುತ್ ಕಂಬದ ಮೇಲೆ ಬಿಎಸ್‌ಪಿ ಧ್ವಜ ಹಾರಿಸುತ್ತಿರುವ ಚಿತ್ರವದು. ಮೂಲ ಚಿತ್ರದಲ್ಲಿದ್ದ ಬಿಎಸ್‌ಪಿ ಧ್ವಜವನ್ನು ತೆಗೆದುಹಾಕಿ, ಆ ಜಾಗದಲ್ಲಿ ಬಿಜೆಪಿ ಧ್ವಜವನ್ನು ಸೇರಿಸಲಾಗಿದೆ. ಹೀಗೆ ತಿರುಚಲಾದ ಚಿತ್ರವನ್ನು ಬಿಜೆಪಿ ನಾಯಕರು ಹಂಚಿಕೊಂಡಿದ್ದಾರೆ’ ಎಂದು ಆಲ್ಟ್‌ನ್ಯೂಸ್ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.