ಉತ್ತರ ಪ್ರದೇಶದಲ್ಲಿ ಕಳೆದ ಭಾನುವಾರ ನಿಗದಿಯಾಗಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆಯು ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದಕ್ಕೆ ರದ್ದುಗೊಂಡಿತ್ತು. ಈ ಮಾಹಿತಿ ಇಲ್ಲದೇ, ಪರೀಕ್ಷೆ ಬರೆಯಲು ಹಿಂದಿನ ದಿನ ಲಖನೌಗೆ ಬಂದಿದ್ದ ವಿದ್ಯಾರ್ಥಿಗಳು ರಸ್ತೆಬದಿ ಮಲಗಿ ರಾತ್ರಿ ಕಳೆದಿದ್ದರು. ವಿದ್ಯಾರ್ಥಿಗಳು ಕೊರೆಯುವ ಚಳಿಯಲ್ಲಿ ರಸ್ತೆ ಬದಿ ಮಲಗಿರುವ ಚಿತ್ರ ವೈರಲ್ ಆಗಿದೆ. ಟ್ವಿಟರ್ ಹಾಗೂ ಫೇಸ್ಬುಕ್ ಬಳಕೆದಾರರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಈ ಚಿತ್ರ ರಾಜಸ್ಥಾನಕ್ಕೆ ಸಂಬಂಧಿಸಿದ್ದು ಎಂದು ಆಲ್ಟ್ ನ್ಯೂಸ್ ಹಾಗೂ ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆಗಳು ಸ್ಪಷ್ಟಪಡಿಸಿವೆ. ನೇಮಕಾತಿಗೆ ಆಗ್ರಹಿಸಿ 45 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರಾಜಸ್ಥಾನದ ನಿರುದ್ಯೋಗಿಗಳು ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಲು ಲಖನೌಗೆ ಬಂದಿದ್ದ ಚಿತ್ರ ಇದು. ಆದರೆ ಈ ಚಿತ್ರವು ಟಿಇಟಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದ್ದು ಎಂದು ತಪ್ಪಾಗಿ ಬಿಂಬಿತವಾಗಿದೆ. ಪರೀಕ್ಷೆ ಕುರಿತಂತೆ ದಾರಿತಪ್ಪಿಸುವ ಸುದ್ದಿ, ಮಾಹಿತಿ ಹಂಚಿಕೊಂಡ ಪ್ರಿನ್ಸ್ ಯಾದವ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಇಲಾಖೆ ಟ್ವೀಟ್ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.