ಸರಕು ಸಾಗಣೆ ರೈಲಿನಲ್ಲಿ ಜೆಸಿಬಿಗಳನ್ನು ಸಾಲಾಗಿ ಇರಿಸಿದ ಹಲವು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಜೆಸಿಬಿಗಳು ಉತ್ತರ ಪ್ರದೇಶದಿಂದ ರಾಜಸ್ಥಾನಕ್ಕೆ ಹೊರಟಿವೆ. ಉತ್ತರ ಪ್ರದೇಶದಂತೆ ರಾಜಸ್ಥಾನದಲ್ಲೂ ಬುಲ್ಡೋಜರ್ ಕಾರ್ಯಾಚರಣೆ ನಡೆಯಲಿದೆ ಎಂದು ಈ ಫೋಟೊಗಳೊಂದಿಗೆ ವಿವರಣೆ ಹಂಚಿಕೊಳ್ಳಲಾಗಿದೆ. ‘ಉತ್ತರ ಪ್ರದೇಶದಿಂದ ರೈಲೊಂದು ಜೆಸಿಬಿಗಳನ್ನು ತುಂಬಿಕೊಂಡು ರಾಜಸ್ಥಾನಕ್ಕೆ ಹೊರಟಿದೆ. ಇದು ಬಿಜೆಪಿ ಸರ್ಕಾರದ ಶಕ್ತಿ. ಜೈ ಶ್ರೀರಾಮ್, ಭಾರತ್ ಮಾತಾಕಿ ಜೈ’ ಎನ್ನುವಂಥ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಇತ್ತೀಚೆಗಷ್ಟೇ ರಾಜಸ್ಥಾನ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಬಿಜೆಪಿಯು 115 ಸ್ಥಾನಗಳನ್ನು ಪಡೆದು ಅಧಿಕಾರ ಪಡೆದುಕೊಂಡಿದೆ. ಈ ಕಾರಣಕ್ಕಾಗಿ ಈ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ, ಇದು ಸುಳ್ಳು ಸುದ್ದಿ.

ಫೋಟೊಗಳಲ್ಲಿ ಕಂಡುಬಂದ ಕೆಲವು ಪದಗಳನ್ನು ಗೂಗಲ್ ಸರ್ಚ್‌ನಲ್ಲಿ ಹುಡುಕಿದಾಗ 2021ರ ನವೆಂಬರ್ 26ರಂದು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆದ ವಿಡಿಯೊವೊಂದು ದೊರಕಿತು. ಈ ವಿಡಿಯೊವನ್ನು ‘ಗೋಪಿರೈಲ್‌ವರ್ಲ್ಡ್’ ಎನ್ನುವ ಖಾತೆಯ ಮೂಲಕ ಅಪ್‌ಲೋಡ್ ಮಾಡಲಾಗಿತ್ತು. ಈ ವಿಡಿಯೊದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾದ ಫೋಟೊಗಳಿಗೆ ಹೊಂದಿಕೆಯಾಗುತ್ತವೆ. ಈ ಖಾತೆಯು ರೈಲುಗಳ ಬಗ್ಗೆ ಮಾಹಿತಿಗಳನ್ನು ಹಂಚಿಕೊಳ್ಳುತ್ತದೆ. ಈ ವಿಡಿಯೊವನ್ನು ಆಂಧ್ರ ಪ್ರದೇಶದ ತಾನಾಜಿ ಜಂಕ್ಷನ್‌ನಲ್ಲಿ ಚಿತ್ರೀಕರಿಸಲಾಗಿದೆ. ಆದರೆ ಈಗ ಫೋಟೊಗಳನ್ನು ತಪ್ಪು ಮಾಹಿತಿಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಬೂಮ್‌ಲೈವ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.