ಕರ್ನಾಟಕ ಪ್ರದೇಶ ಕಾಂಗ್ರೆಸ್ನ ಸದಸ್ಯೆ ಅನುಷಾ ಪುಲ್ಲಯ್ಯ ಅವರು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಇರುವ ಚಿತ್ರವನ್ನು ‘ಎಕ್ಸ್’ನಲ್ಲಿ ಹಂಚಿಕೊಳ್ಳಲಾಗಿದ್ದು, ಅನುಷಾ ಅವರು ಅಮೆರಿಕದ ಕ್ರಿಶ್ಷಿಯನ್ ಧರ್ಮ ಬೋಧಕ ಡೇನಿಯಲ್ ಸ್ಟೀಫನ್ ಕೌರ್ನಿ ಪತ್ನಿ ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ. ‘ರಾಹುಲ್ ಗಾಂಧಿ ಅವರು ಡೇನಿಯಲ್ ಅವರನ್ನು ಭೇಟಿ ಮಾಡಿದ್ದಾರೆ. ಹಿಂದೂಗಳನ್ನು ಮತಾಂತರ ಮಾಡುತ್ತಿರುವ ಕ್ರಿಶ್ಚಿಯನ್ ಧರ್ಮಬೋಧಕ ಗುಂಪುಗಳೊಂದಿಗೆ ಕಾಂಗ್ರೆಸ್ ಸಂಬಂಧ ಹೊಂದಿದೆ’ ಎಂದೂ ಪೋಸ್ಟ್ನಲ್ಲಿ ಬರೆಯಲಾಗಿದೆ. ಸಲಾಹ್ ಉದ್ದೀನ್ ಶೋಯೇಬ್ ಚೌಧುರಿ ಎನ್ನುವವರು ಈ ಪೋಸ್ಟ್ ಮಾಡಿದ್ದರು. ಇದನ್ನು ಹಲವರು ಹಂಚಿಕೊಂಡಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ರಾಹುಲ್ ಗಾಂಧಿ ಅವರೊಂದಿಗೆ ಚಿತ್ರದಲ್ಲಿ ಕಾಣಿಸಿಕೊಂಡಿರುವ ಅನುಷಾ ಅವರು ಡೇನಿಯಲ್ ಅವರ ಪತ್ನಿ ಅಲ್ಲ. ಕರ್ನಾಟಕದ ಕಾಂಗ್ರೆಸ್ನ ಸಕ್ರಿಯ ಸದಸ್ಯೆ ಆಗಿರುವ ಅವರು ಈ ಬಗ್ಗೆ ‘ಎಕ್ಸ್’ನಲ್ಲಿ ನ.22ರಂದು ಸ್ಪಷ್ಟನೆಯನ್ನೂ ನೀಡಿದ್ದಾರೆ. ಅವರನ್ನು ಸಂಪರ್ಕಿಸಿದಾಗ ಪೋಸ್ಟ್ನಲ್ಲಿರುವ ಅಂಶಗಳನ್ನು ತಳ್ಳಿಹಾಕಿದ್ದಾರೆ. ‘ನನಗಿನ್ನೂ ಮದುವೆಯಾಗಿಲ್ಲ, ಧರ್ಮಬೋಧಕ ಡೇನಿಯಲ್ಗೂ ನನಗೂ ಸಂಬಂಧ ಇಲ್ಲ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎಐಸಿಸಿ ಪರವಾಗಿ ಕೆಲಸ ಮಾಡುತ್ತಿರುವಾಗ ಜೂನ್ 2ರಂದು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದೆ. ಅಂದು ತೆಗೆದ ಫೋಟೊ ಅದು. ಪೋಸ್ಟ್ನಲ್ಲಿ ಕಾಣಿಸುತ್ತಿರುವ ಮತ್ತೊಂದು ಫೋಟೊ ಲಕ್ಷದ್ವೀಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ತರಬೇತಿ ನೀಡುವ ಕಾರ್ಯಕ್ರಮದ್ದು. ಮಾನಹಾನಿ ಮಾಡುವಂತಹ ಪೋಸ್ಟ್ ಮಾಡಿರುವ ಸಲಾಹ್ ಶೊಯೇಬ್ ವಿರುದ್ಧ ಎಫ್ಐಆರ್ ದಾಖಲಿಸಿದ್ದೇನೆ’ ಎಂದು ಅವರು ಹೇಳಿರುವುದಾಗಿ ಬೂಮ್ ಫ್ಯಾಕ್ಟ್ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.