ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಅವರು ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂಬ ವಿವರ ಇರುವ ಹಲವು ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕೊಹ್ಲಿ ಅವರು ಕಪ್ಪು ದಿರಿಸು ತೊಟ್ಟಿರುವ ಚಿತ್ರ, ಅವರು ಮತ್ತು ಅವರ ಪತ್ನಿ ಸನ್ಯಾಸಿಯೊಬ್ಬರ ಜತೆಗೆ ನಿಂತಿರುವ ಚಿತ್ರಗಳನ್ನೂ ಈ ಪೋಸ್ಟ್‌ಗಳ ಒಟ್ಟಿಗೆ ಹಂಚಿಕೊಳ್ಳಲಾಗುತ್ತಿದೆ. ಆದರೆ ಈ ಚಿತ್ರಗಳೊಟ್ಟಿಗೆ ಹಂಚಿಕೊಳ್ಳಲಾಗುತ್ತಿರುವ ಮಾಹಿತಿ ತಪ್ಪು.

‘ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಇದೇ ಜನವರಿ 22ರಂದು ನಡೆದಿದ್ದ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಹೋಗಿರಲಿಲ್ಲ. ಅಂತಹ ಮಾಹಿತಿಯೊಟ್ಟಿಗೆ ಹಂಚಿಕೊಳ್ಳಲಾಗುತ್ತಿರುವ ಎರಡೂ ಚಿತ್ರಗಳು ಹಳೆಯವು. ವಿರಾಟ್ ಅವರು ಕಪ್ಪು ಬಟ್ಟೆ ಹಾಕಿರುವ ಚಿತ್ರವು 2023ರ ಸೆಪ್ಟೆಂಬರ್‌ನಲ್ಲಿ ತೆಗೆದದ್ದು. ಆಗ ಅವರು ಮುಂಬೈನ ಗಣೇಶ ಪೆಂಡಾಲ್ ಒಂದಕ್ಕೆ ಭೇಟಿ ನೀಡಿದ್ದಾಗ ಆ ಚಿತ್ರವನ್ನು ತೆಗೆಯಲಾಗಿತ್ತು. ದಂಪತಿಯು ಸನ್ಯಾಸಿ ಒಟ್ಟಿಗೆ ನಿಂತಿರುವ ಚಿತ್ರವು ಋಷಿಕೇಶದಲ್ಲಿ ತೆಗೆದದ್ದು. ಈ ಎರಡು ಚಿತ್ರಗಳಿಗೂ, ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೂ ಸಂಬಂಧವಿಲ್ಲ’ ಎಂದು ದಿ ಕ್ವಿಂಟ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.