ಬೆಂಗಳೂರು:ಕೋಲ್ಹಾಪುರ, ಮಹಾರಾಷ್ಟ್ರಕ್ಕೆ ಹೋಗುವ ವಾಹನಗಳನ್ನು ಕರ್ನಾಟಕದ ನಿಪ್ಪಾಣಿಯಲ್ಲಿ ನಿಲ್ಲಿಸಲಾಗಿದೆ ಎಂದು ಕೆಎಸ್ಆರ್ಟಿಸಿ ಹೇಳಿರುವುದಾಗಿ ವರದಿ ಮಾಡಿದ ಬೆಂಗಳೂರು ಮಿರರ್, ರಸ್ತೆ ಒಡೆದಿರುವ ಫೋಟೊವೊಂದನ್ನು ಟ್ವೀಟ್ ಮಾಡಿತ್ತು.ರಾತ್ರಿ 11.44ಕ್ಕೆ ಮಾಡಿದ ಈ ಟ್ವೀಟ್ ಈಗ ಡಿಲೀಟ್ ಆಗಿದೆ.

ಬೆಂಗಳೂರು ಮಿರರ್ ಟ್ವೀಟ್ಗೆ ಮುನ್ನ ಮಿರರ್ ಪತ್ರಿಕೆಯಮೆಟ್ರೊ ವಿಭಾಗದಸಂಪಾದಕ ಶ್ರೀಧರ್ ವಿವಾನ್ ಅವರು ಇದೇ ಫೋಟೊ ಟ್ವೀಟಿಸಿದ್ದರು. ಈ ಟ್ವೀಟ್ ಕೂಡಾ ಈಗ ಡಿಲೀಟ್ ಆಗಿದೆ.

ಮರುದಿನ ಬೆಳಗ್ಗೆ 8.18ಕ್ಕೆ ಎಎನ್ಐ ಸುದ್ದಿ ಸಂಸ್ಥೆ ಕರ್ನಾಟಕದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಬಳಿ ರಾಷ್ಟ್ರೀಯ ಹೆದ್ದಾರಿ 4 ಒಡೆದಿರುವುದು ಎಂದು ಇದೇ ಚಿತ್ರವನ್ನು ಟ್ವೀಟಿಸಿದೆ.ಬೆಳಗಾವಿಯಲ್ಲೀಗ ಭಾರೀ ಮಳೆಯಾಗುತ್ತಿರುವುದು ಇಲ್ಲಿ ಗಮನಾರ್ಹ ಸಂಗತಿ.

ಎಎನ್ಐ ಸುದ್ದಿಸಂಸ್ಧೆಯ ಟ್ಪೀಟ್ನಲ್ಲಿರುವ ಅದೇ ಚಿತ್ರವನ್ನು ಜೀ ಸಲಾಂ, ಟೈಮ್ಸ್ ಆಫ್ ಇಂಡಿಯಾ ಮತ್ತು ನ್ಯೂಸ್ 9 ಬಳಸಿಕೊಂಡಿದೆ. ನಿಪ್ಪಾಣಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭಾರೀ ಬಿರುಕು ಬಿಟ್ಟಿದೆ ಎಂದು ಮಿರರ್ ನೌ ಕೂಡಾ ಇದೇ ರೀತಿಯ ಚಿತ್ರವನ್ನು ಪ್ರಕಟಿಸಿದೆ.

ಅಂದಹಾಗೆ ರಸ್ತೆ ಒಡೆದು ಇಬ್ಭಾಗವಾಗಿರುವ ಈ ಚಿತ್ರ ನಿಪ್ಪಾಣಿಯದ್ದು ಅಲ್ಲ.ಮಹಾರಾಷ್ಟ್ರದ್ದು ಎಂದು ಆಲ್ಟ್ ನ್ಯೂಸ್ ಫ್ಯಾಕ್ಟ್ಚೆಕ್ ಮಾಡಿದೆ.ಮಹಾರಾಷ್ಟ್ರದಲ್ಲಿನ ರಸ್ತೆಯೊಂದು ಬಿರುಕು ಬಿಟ್ಟಿರುವ ಚಿತ್ರವನ್ನು ಮುಖ್ಯವಾಹಿನಿಯ ಮಾಧ್ಯಮಗಳು ಕರ್ನಾಟಕದ ನಿಪ್ಪಾಣಿಯ ಚಿತ್ರ ಎಂದು ತಪ್ಪಾಗಿ ಪ್ರಕಟಿಸಿವೆ.

ಫ್ಯಾಕ್ಟ್ಚೆಕ್
ಈ ಚಿತ್ರವನ್ನು ನೋಡಿದ ಹಲವಾರು ನೆಟ್ಟಿಗರು ಈ ಫೋಟೊ ನಿಪ್ಪಾಣಿಯದ್ದು ಅಲ್ಲ, ಮುಂಬೈ-ನಾಶಿಕ್ ಎಕ್ಸ್ಪ್ರೆಸ್ ವೇ ಕಸಾರದಲ್ಲಿಯದ್ದು ಎಂದು ಹೇಳಿದ್ದಾರೆ. ಇದರಲ್ಲೊಬ್ಬರು ಚಿತ್ರದಲ್ಲಿ ಕಾಣುತ್ತಿರುವ ರೆಸ್ಟೊರೆಂಟ್ನ ಜಾಹೀರಾತನ್ನು ಗುರುತಿಸಿ, ಅದು ಗ್ರೀನ ಲ್ಯಾಂಡ್ ಪ್ಯೂರ್ ವೆಜ್ ರೆಸ್ಟೊರೆಂಟ್ನ ಜಾಹೀರಾತು, ಈ ರೆಸ್ಟೊರೆಂಟ್ ಮುಂಬೈ- ನಾಶಿಕ್ ಹೈನೇ ಇಗಾಟ್ಪುರಿಯಲ್ಲಿದೆ ಎಂದಿದ್ದಾರೆ.

ಇದೇ ಸ್ಥಳದಲ್ಲಿ, ಬೇರೆ ಕೋನದಲ್ಲಿ ತೆಗೆದ ಫೋಟೊವೊಂದನ್ನು ಜೀ ನ್ಯೂಸ್ ಹಿಂದಿ ಪ್ರಕಟಿಸಿತ್ತು.

ಆ ಫೋಟೊದಲ್ಲಿಯೂ ರೆಸ್ಟೊರೆಂಟ್ನ ಜಾಹೀರಾತು ಕಾಣಿಸುತ್ತದೆ. ಹಾಗಾಗಿ ಇದು ನಿಪ್ಪಾಣಿಯ ಫೋಟೊ ಅಲ್ಲ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.