‘ಭಾರತದಲ್ಲಿ ಎತ್ತರಕ್ಕೆ ತಕ್ಕ ತೂಕವಿಲ್ಲದೇ ಇರುವ ಮಕ್ಕಳ ಪ್ರಮಾಣ ಶೇ 18.7ರಷ್ಟು ಎಂದು ಜಾಗತಿಕ ಹಸಿವು ಸೂಚ್ಯಂಕ (ಜಿಎಚ್‌ಐ) ಹೇಳಿದೆ. ಆದರೆ ಇದು ದೋಷಪೂರಿತ ಮಾಹಿತಿ. ಪೋಷನ್ ಟ್ರ್ಯಾಕರ್‌ನಲ್ಲಿ 7.24 ಕೋಟಿಯಷ್ಟು ಮಕ್ಕಳ ನೋಂದಣಿಯಾಗಿದ್ದು, ಅವರಲ್ಲಿ ಎತ್ತರಕ್ಕೆ ತಕ್ಕ ತೂಕವಿಲ್ಲದೇ ಇರುವ ಮಕ್ಕಳ ಪ್ರಮಾಣ 7.2ರಷ್ಟು. ಹೀಗಾಗಿ ಜಿಎಚ್‌ಐ ನೀಡಿರುವ ಮಾಹಿತಿ ತಪ್ಪು’ ಎಂದು ಕೇಂದ್ರ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಸಚಿವಾಲಯವು ಇದೇ 12ರಂದು ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು. ಆದರೆ ಸಚಿವಾಲಯ ನೀಡಿರುವ ಮಾಹಿತಿ, ಪೂರ್ಣ ಪ್ರಮಾಣದಲ್ಲ.

ಪೋಷಣ್ ಟ್ರ್ಯಾಕರ್‌ನಲ್ಲಿ 7.24 ಕೋಟಿ ಮಕ್ಕಳ ಪೌಷ್ಟಿಕಾಂಶದ ಸ್ಥಿತಿಯನ್ನಷ್ಟೇ ಅಪ್‌ಲೋಡ್ ಮಾಡಲಾಗಿದೆ. ಈ 7.24 ಕೋಟಿ ಮಕ್ಕಳಲ್ಲಿ ಶೇ 7.2ರಷ್ಟು ಮಕ್ಕಳು ಎತ್ತರಕ್ಕೆ ತಕ್ಕ ತೂಕವಿಲ್ಲದೇ ಇರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಪೋಷಣ್ ಟ್ರ್ಯಾಕರ್ ಹೇಳುತ್ತದೆ. ಜತೆಗೆ ಇತ್ತೀಚಿನ ಜನಗಣತಿ ನಡೆಯದೇ ಇರುವ ಕಾರಣ, ಈ ವಯಸ್ಸಿನ ಮಕ್ಕಳ ನೈಜ ಸಂಖ್ಯೆ ಎಷ್ಟು ಎಂಬ ಮಾಹಿತಿ ಲಭ್ಯವಿಲ್ಲ. ವಿಶ್ವ ಸಂಸ್ಥೆಯ ಅಂದಾಜಿ ಪ್ರಕಾರ ಭಾರತದಲ್ಲಿ ಈ ವಯಸ್ಸಿನ ಮಕ್ಕಳ ಸಂಖ್ಯೆ 11.3 ಕೋಟಿಯಷ್ಟು. ಹೀಗಾಗಿ ಪೋಷಣ್ ಟ್ರ್ಯಾಕರ್‌ನಲ್ಲಿನ ದತ್ತಾಂಶಗಳು ಭಾರತದಲ್ಲಿರುವ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮಕ್ಕಳಿಗೆ ಅನ್ವಯವಾಗುವುದಿಲ್ಲ. ಅಲ್ಲದೆ, ಎನ್‌ಎಫ್‌ಎಚ್‌ಎಸ್–5 ದತ್ತಾಂಶ ಪ್ರಕಾರ ಭಾರತದಲ್ಲಿ ಎತ್ತರಕ್ಕೆ ತಕ್ಕ ತೂಕವಿಲ್ಲದೇ ಇರುವ ಮಕ್ಕಳ ಪ್ರಮಾಣ ಶೇ 19.3ರಷ್ಟು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.