ಬೆಂಗಳೂರು: ಕಾಂಗ್ರೆಸ್ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆರಮ್ಯಾ ಫೋಟೊಶಾಪ್ ಮಾಡಿದ ಫೋಟೊವೊಂದನ್ನು ಟ್ವೀಟ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.

ಮೋದಿಯನ್ನು ಸರ್ವಾಧಿಕಾರಿ ಅಡೋಲ್ಫ್ ಹಿಟ್ಲರ್ಗೆ ಹೋಲಿಕೆ ಮಾಡುವ ಸಲುವಾಗಿ ಹಿಟ್ಲರ್ ಬಾಲಕಿಯೊಬ್ಬಳ ಕಿವಿ ಹಿಡಿದಿರುವ ಮತ್ತು ಮೋದಿ ಬಾಲಕನೊಬ್ಬನ ಕಿವಿ ಹಿಡಿದಿರುವ ಚಿತ್ರವನ್ನು ಟ್ವೀಟ್ ಮಾಡಿ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ್ದಾರೆ ರಮ್ಯಾ.

ಈ ಸುದ್ದಿ ಪ್ರಕಟವಾಗುವ ಹೊತ್ತಿಗೆ ರಮ್ಯಾ ಮಾಡಿದ ಟ್ವೀಟ್ 913 ಬಾರಿ ಟ್ವೀಟ್ ಆಗಿದ್ದು ಮೂರು ಸಾವಿರಕ್ಕಿಂತ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

ಫೋಟೊಶಾಪ್ ಮಾಡಿದ ಫೋಟೊ!
ಮೋದಿ ಬಾಲಕನ ಕಿವಿ ಹಿಡಿದಿರುವ ಮತ್ತು ಹಿಟ್ಲರ್ ಬಾಲಕಿಯ ಕಿವಿ ಹಿಡಿದಿರುವ ಇದೇ ಫೋಟೊ 2018ರಲ್ಲಿಯೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.ಇದರಲ್ಲಿ ಹಿಟ್ಲರ್ ಬಾಲಕಿಯ ಕಿವಿ ಹಿಡಿದಿರುವ ಚಿತ್ರ ಫೋಟೊಶಾಪ್ ಮಾಡಿದ ಚಿತ್ರ ಎಂದು ಆಲ್ಟ್ ನ್ಯೂಸ್ ಫ್ಯಾಕ್ಟ್ಚೆಕ್ ಮಾಡಿತ್ತು.

ಫ್ಯಾಕ್ಟ್ಚೆಕ್
ಹಿಟ್ಲರ್ ಬಾಲಕಿಯ ಕಿವಿ ಹಿಡಿದಿರುವ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟ ಮಾಡಿದಾಗ ಅದೇ ಫೋಟೊ ಲಭ್ಯವಾಗಿಲ್ಲ. ಆದರೆ ಬಾಲಕಿಯ ತೋಳನ್ನು ಹಿಟ್ಲರ್ ಹಿಡಿದರುವ ಫೋಟೊ ಸಿಕ್ಕಿದೆ.ಈ ಚಿತ್ರವನ್ನು ದಿ ಸನ್ ಪತ್ರಿಕೆ ಪ್ರಕಟಿಸಿತ್ತು.

ಈ ಚಿತ್ರವನ್ನು ಬಹಳ ಸೂಕ್ಷ್ಮವಾಗಿ ನೋಡಿದರೆ ಫೋಟೊಶಾಪ್ ಮಾಡಿದ್ದು ಗೊತ್ತಾಗುತ್ತದೆ.ಮೋದಿಯವರು ಬಾಲಕನ ಕಿವಿ ಹಿಡಿದಿರುವ ಚಿತ್ರದಲ್ಲಿ ಮೋದಿಯವರ ಕೈಯನ್ನುಫೋಟೊಶಾಪ್ ಮಾಡಿ ಹಿಟ್ಲರ್ ಚಿತ್ರಕ್ಕೆ ಇಟ್ಟು ಎಡಿಟ್ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.