ತಮಿಳುನಾಡಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಸೇನಾಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಮೃತಪಟ್ಟ ಬಳಿಕ, ಎನ್ಡಿ ಟಿ.ವಿ.ಯ ಪತ್ರಕರ್ತ ರವೀಶ್ ಕುಮಾರ್ ನೀಡಿದ್ದಾರೆ ಎನ್ನಲಾದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲದೇ, ಈ ಹೇಳಿಕೆಗೆ ಖಂಡನೆ ಕೂಡಾ ವ್ಯಕ್ತವಾಗುತ್ತಿದೆ. ‘ಬಿಪಿನ್ ರಾವತ್ ಅವರಪತ್ನಿ ಏಕೆ ಸೇನಾ ವಿಮಾನದಲ್ಲಿ ಇದ್ದರು’ ಎಂದು ರವೀಶ್ ಕುಮಾರ್ ಪ್ರಶ್ನಿಸಿದ್ದಾರೆ ಎಂದು ವೈರಲ್ ಆಗಿರುವ ಟ್ವೀಟ್ಗಳಲ್ಲಿ ಹೇಳಲಾಗಿದೆ.

ತಾವು ಈ ಹೇಳಿಕೆ ನೀಡಿಲ್ಲ ಎಂದು ಸ್ವತಃ ರವೀಶ್ ಕುಮಾರ್ ಅವರೇ ಆಲ್ಟ್ನ್ಯೂಸ್ಗೆ ಮಾಹಿತಿ ನೀಡಿದ್ದಾರೆ. ಹೆಲಿಕಾಪ್ಟರ್ ದುರಂತದ ಕುರಿತುಡಿ.8ರಂದು ರವೀಶ್ ಕುಮಾರ್ ಅವರು ಫೇಸ್ಬುಕ್ನಲ್ಲಿ ಕಿರುಬರಹ ಬರೆದಿದ್ದರು ಮತ್ತು ಈ ಘಟನೆಯ ಕುರಿತು ಎನ್ಡಿ ಟಿ.ವಿ. ಪ್ರೈಮ್ಟೈಮ್ ಕಾರ್ಯಕ್ರಮದಲ್ಲಿ ಮಾತನಾಡಿದ್ದರು. ಆದರೆ ಈ ರೀತಿಯ ಹೇಳಿಕೆಯನ್ನು ಅವರು ಎಲ್ಲಿಯೂ ನೀಡಿಲ್ಲ. ಅಲ್ಲದೇ, ತಮ್ಮ ಹೆಸರಿನಲ್ಲಿ ಸುಳ್ಳು ಹೇಳಿಕೆ ಹರಿದಾಡುತ್ತಿರುವ ಕುರಿತು ಇದೇ 10ರಂದು ಸ್ವತಃ ಅವರೇ ಪ್ರೈಮ್ಟೈಮ್ನಲ್ಲಿ ಮಾತನಾಡಿದ್ದರು ಎಂದು ಆಲ್ಟ್ನ್ಯೂಸ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.