ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಚಿತ್ರವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅದು ವಯನಾಡ್‌ನ ಭೂಕುಸಿತದ ಚಿತ್ರ ಎಂದು ಪೋಸ್ಟ್ ಮಾಡಲಾಗುತ್ತಿದೆ. ಗಿರಿಶ್ರೇಣಿಯ ನಡುವೆ ಭೂಕುಸಿತ ಉಂಟಾಗಿ, ಕೆಳಭಾಗದಲ್ಲಿದ್ದ ನಗರ ಕೊಚ್ಚಿಕೊಂಡು ಹೋಗಿರುವುದು ಚಿತ್ರದಲ್ಲಿ ಕಾಣುತ್ತದೆ. ಕೆಲವರು ತಮ್ಮ ಪೋಸ್ಟ್‌ನಲ್ಲಿ ‘ಇಂದು ವಯನಾಡ್, ನಾಳೆ ತಮಿಳುನಾಡಿನ ನೀಲಗಿರೀಸ್’ ಎಂದು ಉಲ್ಲೇಖಿಸಿದ್ದಾರೆ. ಆದರೆ, ಇದು ವಯನಾಡ್‌ನ ಭೂಕುಸಿತದ ಚಿತ್ರ ಅಲ್ಲ.

ಗೂಗಲ್ ಲೆನ್ಸ್ ಮೂಲಕ ಚಿತ್ರವನ್ನು ಪರಿಶೀಲನೆ ನಡೆಸಿದಾಗ, ಆ ಚಿತ್ರವನ್ನು ಹಲವರು ಹಂಚಿಕೊಂಡು ಇದೇ ರೀತಿಯ ಪ್ರತಿಪಾದನೆಗಳನ್ನು ಮಾಡಿರುವುದು ಕಂಡುಬಂತು. ಈ ಬಗ್ಗೆ ಹುಡುಕಾಟ ಮುಂದುವರೆಸಿದಾಗ, ನಾಸಾದಲ್ಲಿ ಫೆಬ್ರುವರಿ 13, 2026ರಲ್ಲಿ ಪ್ರಕಟವಾಗಿದ್ದ ಚಿತ್ರ ಅದು ಎಂದು ತಿಳಿಯಿತು. ಚಿತ್ರದ ಕೆಳಗೆ, 2001ರಲ್ಲಿ ಎಲ್ ಸಾಲ್ವಡಾರ್‌ನ ಸಾಂಟಾ ಟೆಕ್ಲಾ ನಗರದಲ್ಲಿ ಭೂಕುಸಿತ ಉಂಟಾಗಿ ಅನೇಕ ಮನೆಗಳು ಮಣ್ಣಿನ ಅಡಿ ಹೂತುಹೋಗಿವೆ ಎಂದು ಉಲ್ಲೇಖಿಸಲಾಗಿತ್ತು. ಎಲ್ ಸಾಲ್ವಡಾರ್‌ನ ಭೂಕುಸಿತದ ಹಳೆಯ ಚಿತ್ರವನ್ನು ವಯನಾಡ್‌ನ ಚಿತ್ರ ಎಂದು ಈಗ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಪಿಟಿಐ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.