ನವದೆಹಲಿ: 1984ರ ಸಿಖ್ ವಿರೋಧಿ ಗಲಭೆ ಪ್ರಕರಣ ಸಂಬಂಧ ಸಜ್ಜನ್ ಕುಮಾರ್ ಅವರನ್ನು ಜನವರಿ 28ರಂದು ಹಾಜರುಪಡಿಸುವಂತೆ ದೆಹಲಿ ಕೋರ್ಟ್ ನ್ಯಾಯಾಧೀಶೆ ಪೂನಂ ಎ.ಬಂಬಾ ಅವರು ನೋಟಿಸ್ ನೀಡಿದ್ದಾರೆ.

ಗಲಭೆಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿಸಜ್ಜನ್ ಕುಮಾರ್ ತಿಹಾರ್ ಜೈಲಿನಲ್ಲಿದ್ದು, ಮಂಗಳವಾರ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿರಲಿಲ್ಲ.

ಸಜ್ಜನ್ ಕುಮಾರ್ ಜೊತೆ ಬ್ರಹ್ಮಾನಂದ ಗುಪ್ತಾ ಮತ್ತು ವೇದ್ ಪ್ರಕಾಶ್ ಅವರು ವಿಚಾರಣೆ ಎದುರಿಸುತ್ತಿದ್ದಾರೆ. ಸುಲ್ತಾನ್‌ಪುರಿಯಲ್ಲಿ ಸುರ್ಜಿತ್ ಸಿಂಗ್ ಅವರ ಹತ್ಯೆ ಹಾಗೂ ಗಲಭೆಗೆ ಪ್ರಚೋದನೆ ನೀಡಿದ ಆರೋಪ ಇವರ ಮೇಲಿದೆ.

1984ರ ಅಕ್ಟೋಬರ್ 31ರಂದು ತಮ್ಮ ಸಿಖ್ ಅಂಗರಕ್ಷಕರಿಂದ ಇಂದಿರಾಗಾಂಧಿ ಹತ್ಯೆಯಾಗಿದ್ಧರು.

ಆ ಬಳಿಕ ಸಿಖ್ಖರ ಹತ್ಯೆಗೆ ಪ್ರಚೋದಿಸಿದವರಲ್ಲಿ ಸಜ್ಜನ್ ಕುಮಾರ್ ಕೂಡಾ ಒಬ್ಬರು ಎಂದುಪ್ರತ್ಯಕ್ಷದರ್ಶಿ ಚಾಮ್ ಕೌರ್ ಅವರುಕಳೆದ ನವೆಂಬರ್ 16ರಂದು ಕೋರ್ಟ್‌ನಲ್ಲಿ ಹೇಳಿಕೆ ನೀಡಿದ್ದರು. ಚಾಮ್ ಅವರಿಗಿಂತ ಮೊದಲು ಶೀಲಾ ಕೌರ್ ಎಂಬುವರು ಕೂಡಾ ಸಜ್ಜನ್ ವಿರುದ್ಧ ಸಾಕ್ಷ್ಯ ನುಡಿದಿದ್ದರು. ಡಿಸೆಂಬರ್ 17ರಂದು ಸಜ್ಜನ್ ಕುಮಾರ್ ದೋಷಿ ಎಂದು ದೆಹಲಿ ಕೋರ್ಟ್ ತೀರ್ಪು ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.