ನವ ದೆಹಲಿ: ನಕಲಿ ಔಷಧ ತಯಾರಿಕೆ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡ ಆರೋಪದ ಮೇಲೆ 10 ಜನರನ್ನು ದೆಹಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಕಳೆದ ನಾಲ್ಕು ವಾರಗಳಲ್ಲಿ ದಂಧೆಯಲ್ಲಿ ತೊಡಗಿರುವ ಜಾಲಗಳನ್ನು ಪೊಲೀಸರು ಭೇದಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ಸಂಜಯ್ ಭಾಟಿಯಾ ಹೇಳಿದ್ದಾರೆ ಎಂದು ಎನ್ಡಿ ಟಿವಿ ವರದಿ ಮಾಡಿದೆ.

ದೆಹಲಿಯ ಚಿಲ್ಲರೆ ಮಾರುಕಟ್ಟೆಗಳಲ್ಲಿ ನಕಲಿ ಔಷಧಿಗಳ ಪೂರೈಕೆ ತೀವ್ರವಾಗಿ ಏರಿಕೆಯಾಗಿತ್ತು. ದೆಹಲಿ-ಎನ್ಸಿಆರ್ನಲ್ಲಿ ಸಕ್ರಿಯವಾಗಿರುವ ಇಂತಹ ಅಕ್ರಮ ದಂಧೆಗಳನ್ನು ಮಟ್ಟ ಹಾಕಲು ಅಪರಾಧ ವಿಭಾಗದ ಮೂರು ತಂಡಗಳನ್ನು ನಿಯೋಜಿಸಲಾಗಿದೆ ಎಂದು ಸಂಜಯ್ ಭಾಟಿಯಾ ಹೇಳಿದ್ದಾರೆ.

ತಿಲಕ್ ಬ್ರಿಡ್ಜ್ ಸಮೀಪ ವಾಹನ ತಪಾಸಣೆ ನಡೆಸಿದಾಗ, ಅಪಾರ ಪ್ರಮಾಣದ ನಕಲಿ ಮಾತ್ರೆಗಳು ಪತ್ತೆಯಾಗಿವೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ವಿಚಾರಣೆಯ ವೇಳೆ, ಆರೋಪಿಗಳಲ್ಲಿ ಓರ್ವ ಔಷಧಗಳು ನಕಲಿ ಎಂದು ಒಪ್ಪಿಕೊಂಡಿದ್ದಾನೆ. ಅಲ್ಲದೇ ಇತರ ಇಬ್ಬರು ಪೂರೈಕೆದಾರರ ಹೆಸರನ್ನು ಹೇಳಿದ್ದು, ಅವರನ್ನು ಬಂಧಿಸಲಾಗಿದೆ.

ಆರೋಪಿಗಳಿಂದ ಅಲ್ಟ್ರಾಸೆಟ್, ಅಮರಿಲ್ 1ಎಂ, ಗ್ಲುಕೋನಾರ್ಮ್ ಮತ್ತು ಡೆಫ್ಕಾರ್ಟ್-6ನ 44,500 ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಉತ್ತಮ್ ನಗರದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆತನಿಂದ ಅದೇ ಬ್ರಾಂಡ್ಗಳ 730 ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

3ನೇ ತಂಡವು ಟ್ರಾನ್ಸ್-ಯಮುನಾ ಪ್ರದೇಶದ ವಿವಿಧ ಸ್ಥಳಗಳಲ್ಲಿ ಮೂವರನ್ನು ಬಂಧಿಸಿದೆ. ಅವರಿಂದ ಕನಿಷ್ಠ 57,000 ನಕಲಿ ಅಲ್ಟ್ರಾಸೆಟ್ ಮಾತ್ರೆಗಳನ್ನು ವಶಪಡಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.

ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ ಕಾರ್ಖಾನೆಯೊಂದರಲ್ಲಿ ನಕಲಿ ಅಲ್ಟ್ರಾಸೆಟ್ ಮಾತ್ರೆಗಳನ್ನು ತಯಾರಿಸುತ್ತಿರುವುದು ತನಿಖೆ ವೇಳೆ ಪತ್ತೆಯಾಗಿದೆ.

ನಕಲಿ ಔಷಧಗಳು ತೀವ್ರ ಅಪಾಯವನ್ನುಂಟುಮಾಡುತ್ತವೆ. ಆದ್ದರಿಂದ ಆರೋಪಿಗಳ ವಿರುದ್ದ ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
.ನಕಲಿ ಆಯುರ್ವೇದ ಔಷಧ ಮಾರಾಟ: ಆರು ಮಂದಿ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.