ನವದೆಹಲಿ: ರಾಜ್ಯಸಭೆಯ ಕೆಲ ಸದಸ್ಯರು ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಕಾರಣ ರಾಜ್ಯಸಭೆಯಲ್ಲಿ 10 ಸ್ಥಾನಗಳು ತೆರವುಗೊಂಡಿವೆ ಎಂದು ರಾಜ್ಯಸಭಾ ಕಾರ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಅಸ್ಸಾಂ, ಬಿಹಾರ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ತಲಾ ಎರಡು ಸ್ಥಾನಗಳು, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತ್ರಿಪುರಾ ರಾಜ್ಯಗಳಲ್ಲಿ ತಲಾ ಒಂದು ಸ್ಥಾನ ಸದ್ಯ ಖಾಲಿಯಾಗಿವೆ ಎಂದು ತಿಳಿಸಿದೆ.

ಕಾಮಕ್ಯ ಪ್ರಸಾದ್ ತಾಸಾ, ಸರ್ಬಾನಂದ ಸೋನಾವಾಲ್ (ಅಸ್ಸಾಂ), ಮೀಸಾ ಭಾರತಿ, ವಿವೇಕ್ ಠಾಕೂರ್ (ಬಿಹಾರ), ದೀಪೆಂದರ್ ಸಿಂಗ್ ಹೂಡಾ (ಹರಿಯಾಣ), ಜ್ಯೋತಿರಾದಿತ್ಯ ಎಂ. ಸಿಂದಿಯಾ (ಮಧ್ಯಪ್ರದೇಶ), ಉದಯನ್ರಾಜೆ ಭೋಸ್ಲೆ , ಪೀಯೂಷ್ ಗೋಯಲ್ (ಮಹಾರಾಷ್ಟ್ರ), ಕೆ.ಸಿ. ವೇಣುಗೋಪಾಲ್ (ರಾಜಸ್ಥಾನ) ಮತ್ತು ವಿಪ್ಲಬ್ ಕುಮಾರ್ ದೇವ್ (ತ್ರಿಪುರಾ) ಅವರು 2024ರ ಜೂನ್ 4ರಂದು ಲೋಕಸಭೆ ಸದಸ್ಯರಾಗಿ ಆಯ್ಕೆ ಆಗಿದ್ದಾರೆ. ಹೀಗಾಗಿ ಅವರ ರಾಜ್ಯಸಭೆ ಸದಸ್ಯತ್ವವನ್ನು ಅಂತ್ಯಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ತೆರವುಗೊಂಡಿರುವ ಸ್ಥಾನಗಳಿಗೆ ಚುನಾವಣಾ ಆಯೋಗವು ಸಧ್ಯದಲ್ಲೇ ಚುನಾವಣೆ ಘೋಷಿಸಲಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.