ನವದೆಹಲಿ: ಭಾರತೀಯ ರೈಲ್ವೆಯ ಸುರಕ್ಷತಾ ವಿಭಾಗದಲ್ಲಿ 1.52 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ರೈಲ್ವೆ ಸಚಿವಾಲಯ ಹೇಳಿದೆ.

ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಹಾಕಿರುವ ಅರ್ಜಿಗೆ ಪ್ರತಿಕ್ರಿಯಿಸಿರುವ ಸಚಿವಾಲಯ, ‘ಸುರಕ್ಷತಾ ವಿಭಾಗದಲ್ಲಿ ವಿಭಾಗಕ್ಕೆ 10,00,941 ಲಕ್ಷ ಹುದ್ದೆಗಳು ಮಂಜೂರಾಗಿವೆ. ಈ ವರ್ಷದ ಮಾರ್ಚ್ ಅಂತ್ಯಕ್ಕೆ 8,48,207 ಹುದ್ದೆಗಳು ಭರ್ತಿಯಾಗಿದ್ದು, 1,52,734 ಹುದ್ದೆಗಳು ಖಾಲಿ ಇವೆ’ ಎಂದು ಹೇಳಿದೆ.

‘ಸಿಬ್ಬಂದಿ ಕೊರತೆ ಇದ್ದರೂ, ರೈಲುಗಳ ಸುರಕ್ಷತೆಗೆ ಪ್ರಮುಖವಾಗಿ ಆದ್ಯತೆ ನೀಡಲಾಗುತ್ತಿದೆ. 10 ವರ್ಷಗಳ ಅವಧಿಯಲ್ಲಿ ರೈಲ್ವೆಯು ಸುರಕ್ಷತೆಗಾಗಿ ಗಮನಾರ್ಹ ಬಂಡವಾಳ ಹೂಡಿದೆ. ಜೊತೆಗೆ ಹಲವು ರಚನಾತ್ಮಕ ಮತ್ತು ಸಮಗ್ರ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇವು ರೈಲುಗಳ ಸುಗಮ ಕಾರ್ಯನಿರ್ವಹಣೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸುರಕ್ಷತಾ ವಿಭಾಗದ ಹುದ್ದೆಗಳಲ್ಲಿ ರೈಲು ಚಾಲಕರು, ಇನ್ಸ್ಪೆಕ್ಟರ್ಗಳು, ಸಿಬ್ಬಂದಿ ನಿಯಂತ್ರಕರು, ರೈಲು ನಿಯಂತ್ರಕರು, ಹಳಿ ನಿರ್ವಾಹಕರು, ಸ್ಟೇಷನ್ ಮಾಸ್ಟರ್ಗಳು, ವಿದ್ಯುತ್ ಸಿಗ್ನಲ್ ನಿರ್ವಾಹಕರು, ಪಾಯಿಂಟ್ಸ್ಮೆನ್, ಸಿಗ್ನಲಿಂಗ್ ಮೇಲ್ವಿಚಾರಕರು ಬರುತ್ತಾರೆ.

ರೈಲುಗಳ ಕಾರ್ಯಾಚರಣೆಯಲ್ಲಿ ಈ ಸಿಬ್ಬಂದಿ ನೇರವಾಗಿ ಭಾಗಿಯಾಗುವುದರಿಂದ, ರೈಲುಗಳ ಸುಗಮ ಸಂಚಾರದಲ್ಲಿ ಈ ಹುದ್ದೆಗಳು ಪ್ರಮುಖ ಪಾತ್ರ ವಹಿಸುತ್ತವೆ.

ಮೇಲ್, ಎಕ್ಸ್ಪ್ರೆಸ್, ಪ್ಯಾಸೆಂಜರ್, ಗೂಡ್ಸ್ ಸೇರಿದಂತೆ ಎಲ್ಲ ರೀತಿಯ ರೈಲುಗಳ ಚಾಲಕರ 70,093 ಹುದ್ದೆಗಳು ಮಂಜೂರಾಗಿದ್ದು, 14,429 ಹುದ್ದೆಗಳು ಖಾಲಿ ಇವೆ ಎಂದು ಸಚಿವಾಲಯ ಹೇಳಿದೆ.

ಮಧ್ಯಪ್ರದೇಶದ ಚಂದ್ರ ಶೇಖರ್ ಗೌರ್ ಅವರು ಆರ್ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಭರದಿಂದ ಸಾಗಿದೆ ಕವಚ್ ಅಳವಡಿಕೆ: ಸಚಿವಾಲಯ

ನವದೆಹಲಿ (ಪಿಟಿಐ): ರೈಲುಗಳು ಪರಸ್ಪರ ಡಿಕ್ಕಿ ಆಗುವುದನ್ನು ತಡೆಯವ ‘ಕವಚ್’ ವ್ಯವಸ್ಥೆಯನ್ನು ಅಳವಡಿಸುವ ಕಾರ್ಯವು 3,000 ಕಿ.ಮೀ. ಉದ್ದದ ರೈಲು ಮಾರ್ಗದಲ್ಲಿ ಭರದಿಂದ ಸಾಗಿದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ.

ಕವಚ್ ವ್ಯವಸ್ಥೆಯನ್ನು ಅಳವಡಿಸುವುದು ಬಹಳ ಸಂಕೀರ್ಣವಾದ ಕೆಲಸ. ಇದರಲ್ಲಿ ಆರು ಪ್ರಮುಖ ಉಪ
ವ್ಯವಸ್ಥೆಗಳನ್ನು ಅಳವಡಿಸಬೇಕಾಗುತ್ತದೆ. ಆಪ್ಟಿಕಲ್ ಫೈಬರ್ ಕೇಬಲ್ಗಳನ್ನು ರೈಲು ಮಾರ್ಗದ ಉದ್ದಕ್ಕೂ ಅಳವಡಿಸಬೇಕು, ದೂರಸಂಪರ್ಕ ಟವರ್ಗಳನ್ನು ಅಳವಡಿಸಬೇಕು, ದೂರಸಂಪರ್ಕ ಉಪಕರಣಗಳನ್ನು ಈ ಟವರ್ಗಳಲ್ಲಿ ಹಾಗೂ ರೈಲುಗಳಲ್ಲಿ ಅಳವಡಿಸಬೇಕು, ರೈಲು ನಿಲ್ದಾಣಗಳಲ್ಲಿ ದತ್ತಾಂಶ ಕೇಂದ್ರಗಳನ್ನು ಸ್ಥಾಪಿಸಬೇಕು ಹಾಗೂ ಇವುಗಳನ್ನು ಸಿಗ್ನಲ್ ವ್ಯವಸ್ಥೆಯ ಜೊತೆ ಜೋಡಿಸಬೇಕು. ನಂತರದಲ್ಲಿ ಕೆಲವು ಉಪಕರಣಗಳನ್ನು ರೈಲ್ವೆ ಎಂಜಿನ್ಗಳಲ್ಲಿ ಅಳವಡಿಸಬೇಕು ಎಂದು ಸಚಿವಾಲಯ ವಿವರಿಸಿದೆ.

‘ಈ ವ್ಯವಸ್ಥೆಗೆ 2019ರಲ್ಲಿ ಅನುಮತಿ ಸಿಕ್ಕಿತು. ಕೋವಿಡ್ ಒಡ್ಡಿದ ಸವಾಲುಗಳ ನಡುವೆಯೂ ಕೆಲಸದಲ್ಲಿ ಪ್ರಗತಿ ಸಾಧಿಸಲಾಗಿದೆ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.