ನವದೆಹಲಿ: ಲಿಬಿಯಾದ ಸಶಸ್ತ್ರ ಗುಂಪಿನ ಸೆರೆಯಲ್ಲಿದ್ದ 17 ಭಾರತೀಯರನ್ನು ರಕ್ಷಿಸಿ ಸುರಕ್ಷಿತವಾಗಿ ದೇಶಕ್ಕೆ ಕರೆತರಲಾಗಿದೆ.

ಮಾನವ ಕಳ್ಳಸಾಗಾಣಿಕೆಗೆ ಸಿಲುಕಿ ಲಿಬಿಯಾದಲ್ಲಿ ಸಿಲುಕಿದ್ದ ಪಂಜಾಬ್ ಮತ್ತು ಹರಿಯಾಣ ಮೂಲದವರಾದ 17 ಜನರು ಭಾನುವಾರ ಸಂಜೆ ದೆಹಲಿಗೆ ಮರಳಿದ್ದಾರೆ.

ಟ್ಯೂನಿಸ್ನಲ್ಲಿನ ಭಾರತದ ರಾಯಭಾರಿ ಕಚೇರಿಗೆ ಮನೆಯ ಸದಸ್ಯರು ನಾಪತ್ತೆಯಾಗಿರುವುದಾಗಿ ಮೇ 26ರಂದು ಕುಟುಂಬವು ಮಾಹಿತಿ ರವಾನಿಸಿತ್ತು.

ಜೂನ್ 13 ರಂದು ಜ್ವಾರ ನಗರದಲ್ಲಿ ಲಿಬಿಯನ್ ಅಧಿಕಾರಿಗಳು ಭಾರತೀಯರನ್ನು ಹಿಡಿದು, ಅಕ್ರಮವಾಗಿ ದೇಶ ನುಸುಳಿದ್ದಾರೆ ಎಂದು ತಮ್ಮ ವಶದಲ್ಲಿ ಇರಿಸಿಕೊಂಡಿದ್ದರು.

ಬಳಿಕ ಭಾರತ ರಾಯಭಾರ ಕಚೇರಿ, ವಿದೇಶಾಂಗ ಸಚಿವಾಲಯವು ಲಿಬಿಯಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಕಾರಣ ಬಿಡುಗಡೆಗೆ ಒಪ್ಪಿದ್ದರು ಎಂದು ವಾಪಸ್ಸಾದ ಭಾರತೀಯರು ಹೇಳಿದ್ದಾರೆ.

ಪಾಸ್ಪೋರ್ಟ್ ಇಲ್ಲದ ಕಾರಣ ತುರ್ತು ಪ್ರಮಾಣ ಪತ್ರ ನೀಡುವ ಮೂಲಕ ಭಾರತ ರಾಯಭಾರ ಕಚೇರಿಯು ನಮ್ಮನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಮರಳುವಂತೆ ಮಾಡಿದೆ ಎಂದು ಪ್ರಶಂಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.