ಜಮ್ಮು: ಜಮ್ಮು ನಗರದ ಹೊರವಲಯದ ಕೋಳಿ ಫಾರಂ ಒಂದರಲ್ಲಿ ಬೆಂಕಿ ಅವಘಡದಿಂದಾಗಿ 2 ಸಾವಿರಕ್ಕೂ ಅಧಿಕ ಕೋಳಿಗಳು ಸಜೀವ ದಹನವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ರಾತ್ರಿ ಅಖ್ನೂರ್ ತೆಹ್ಸಿಲ್ನ ಡೋಕ್ ಜಗೀರ್ ಪ್ರದೇಶದಲ್ಲಿ, ರಜ್ನೀತ್ ಸಿಂಗ್ ಎಂಬುವವರಿಗೆ ಸೇರಿದ ಫಾರಂನಲ್ಲಿ ಈ ಘಟನೆ ನಡೆದಿದೆ.

ಅಚಾನಕ್ಕಾಗಿ ಹೊತ್ತಿಕೊಂಡ ಬೆಂಕಿ, ಏಕಾಏಕಿ ಇಡೀ ಫಾರಂಗೆ ಆವರಿಸಿಕೊಂಡಿದೆ. ಪರಿಣಾಮ ಇಡೀ ಫಾರಂ ಹೊತ್ತಿ ಉರಿದಿದೆ. 2 ಸಾವಿರಕ್ಕೂ ಅಧಿಕ ಕೋಳಿಗಳು ಸತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿ ಅವಘಡಕ್ಕೆ ಕಾರಣ ಏನೆಂಬುದರ ಪತ್ತೆಗೆ ತನಿಖೆ ಪ್ರಾರಂಭಿಸಲಾಗಿದೆ. ಘಟನೆಯಿಂದ ಆದ ನಷ್ಟದ ಪ್ರಮಾಣ ಬಗ್ಗೆ ಲೆಕ್ಕ ಹಾಕಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.