ಅಮರಾವತಿ: ದಕ್ಷಿಣ ವಲಯ ಮಂಡಳಿಯ 29ನೇ ಸಭೆಯು ಆಂಧ್ರಪ್ರದೇಶದ ತಿರುಪತಿಯಲ್ಲಿ ನವೆಂಬರ್ 14ರಂದು ನಡೆಯಲಿದೆ. ಕರ್ನಾಟಕವು ಸೇರಿದಂತೆ ಐದು ರಾಜ್ಯಗಳ ಮುಖ್ಯಮಂತ್ರಿಗಳು, ಎರಡು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನಂಟ್ ಗವರ್ನರ್‌ಗಳು ಸಭೆಯಲ್ಲಿ ಭಾಗವಹಿಸುವರು.

ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಲೆಫ್ಟಿನಂಟ್ ಗವರ್ನರ್‌ಗಳು ಈ ಸಭೆಯಲ್ಲಿ ಭಾಗವಹಿಸುವರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆ ವಹಿಸುವರು.

ಸಭೆಯಲ್ಲಿ ಕೇಂದ್ರ ಸರ್ಕಾರ ಸಲಹೆ ಮಾಡಿರುವ ನಾಲ್ಕು ವಿಷಯಗಳು ಸೇರಿದಂತೆ 26 ವಿಷಯಗಳು ಚರ್ಚೆಗೆ ಬರಲಿವೆ. ಕರ್ನಾಟಕವು ತುಂಗಭದ್ರಾ, ಕೃಷ್ಣಾ ನದಿಗೆ ಅನ್ವಯಿಸಿ ಕೈಗೊಳ್ಳಬೇಕಾದ ನೀರಾವರಿ ಯೋಜನೆಗಳ ಬಗ್ಗೆ ನೆರೆಯ ಆಂಧ್ರಪ್ರದೇಶ, ತೆಲಂಗಾಣಗಳು ತಕರಾರು ಹೊಂದಿವೆ. ಈ ವಿಷಯವೂ ಚರ್ಚೆಗೆ ಬರಲಿದೆ.

ಅಲ್ಲದೆ ನೀರಾವರಿ ಯೋಜನೆಗಳು, ಗಡಿ, ಭೂ ವಿವಾದ, ಮೆಟ್ರೊ ಮತ್ತು ವಿವಿಧ ರೈಲ್ವೆ ಯೋಜನೆಗಳಿಗೆ ಭೂಮಿ ಹಂಚಿಕೆ ವಿಷಯಗಳು ಸೇರಿದಂತೆ ವಿವಿಧ ರಾಜ್ಯಗಳ ನಡುವೆ ಇರುವ ವಿವಾದಗಳನ್ನು ಒಳಗೊಂಡ ವಿಷಯಗಳು ಸಭೆಯಲ್ಲಿ ಚರ್ಚೆಗೆ ಬರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.