ವಿಜಯವಾಡ: ವಿಜಯವಾಡದ ಬೈಕ್ ಶೋರೂಮ್‌ವೊಂದರಲ್ಲಿ ಗುರುವಾರ ಮುಂಜಾನೆ ಅಗ್ನಿ ಅವಘಡ ಸಂಭವಿಸಿದ್ದು ಸುಮಾರು ₹ 4 ಕೋಟಿ ಮೌಲ್ಯದ 400 ಹೊಸ ಬೈಕ್‌ಗಳು ಸುಟ್ಟು ಕರಕಲಾಗಿವೆ. ಆದರೆ ಯಾವುದೇ ಜೀವಹಾನಿ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ–16ರಲ್ಲಿರುವ ಶೋರೂಮ್‌ನಲ್ಲಿ ಗುರುವಾರ ಬೆಳಿಗ್ಗೆ 5 ಗಂಟೆಯಲ್ಲಿ ಘಟನೆ ನಡೆದಿದೆ. ಚೆನ್ನೈನಿಂದ ಬಂದ ಹೊಸ ವಾಹನಗಳನ್ನು ಟ್ರಕ್‌ನಿಂದ ಇಳಿಸಲಾಗುತ್ತಿತ್ತು. ಆಗ ಬೆಂಕಿ ಕಾಣಿಸಿಕೊಂಡಿದೆ. ನಂತರದ 90 ನಿಮಿಷಗಳ ಕಾಲ ಶೋರೂಮ್‌ನಲ್ಲಿ ಬೆಂಕಿ ಹೊತ್ತಿ ಉರಿದಿದೆ. ಬೆಂಕಿ ನಂದಿಸಲು 5 ಅಗ್ನಿಶಾಮಕ ವಾಹನಗಳು ಶ್ರಮಿಸಿದವು. ಹೀಗಾಗಿ 200 ಬೈಕ್‌ಗಳು ನಾಶವಾಗುವುದು ತಪ್ಪಿದೆ’ ಎಂದು ವಿಜಯವಾಡ ಕೇಂದ್ರ ವಿಭಾಗದ ಎಸಿಪಿ ಪಿ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.