ದೇವಘರ್, ಜಾರ್ಖಂಡ್: ಜಿಲ್ಲೆಯ ದೇವಿಪುರ ಗ್ರಾಮದಲ್ಲಿ ಮನೆಯೊಂದರ ಶೌಚ ಗುಂಡಿಯಲ್ಲಿ ಇಳಿದಿದ್ದ ಸಂದರ್ಭದಲ್ಲಿ ಆರು ಜನರು ವಿಷಾನಿಲ ಸೇವಿಸಿ ಮೃತಪಟ್ಟ ಘಟನೆ ಭಾನುವಾರ ಸಂಭವಿಸಿದೆ.

ಗೋವಿಂದ ಮಾಂಝಿ (53), ಟಿಲು ಮುರ್ಮು (24), ಬ್ರಜೇಶ್ (54), ಮಿಥಿಲೇಶ್ (43) ಹಾಗೂ ಮಾಂಝಿ ಅವರ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

ಗ್ರಾಮದ ರಾಜೇಶ್ ಬರ್ನವಾಲ್ ಎಂಬುವವರ ಮನೆಯ ಶೌಚಗುಂಡಿಯನ್ನು ಸ್ವಚ್ಛಗೊಳಿಸಲು ಮಾಂಝಿ ಹಾಗೂ ಮುರ್ಮು ಗುಂಡಿಯಲ್ಲಿ ಇಳಿದಿದ್ದಾರೆ. ತುಂಬಾ ಹೊತ್ತಾದರೂ ಇಬ್ಬರೂ ಮೇಲೆ ಬಾರದಿದಿದ್ದಾಗ, ರಾಜೇಶ್ ಅವರ ಸಹೋದರರಾದ ಬ್ರಜೇಶ್, ಮಿಥಿಲೇಶ್ ಸಹ ಗುಂಡಿಯೊಳಗೆ ಇಳಿದಿದ್ದಾರೆ. ಈ ನಾಲ್ವರೂ ಮೇಲೆ ಬರದಿದ್ದಾಗ, ಮಾಂಝಿ ಅವರ ಮಕ್ಕಳಾದ ಇಬ್ಬರು ಯುವಕರೂ ಗುಂಡಿಗೆ ಇಳಿದಿದ್ದಾರೆ.

‘ಆರು ಜನರು ಮೇಲೆ ಬರದಿದ್ದಾಗ, ಗ್ರಾಮಸ್ಥರು ಗುಂಡಿಗೆ ಇಳಿದು ನೋಡಿದಾಗ ಎಲ್ಲರೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಎಲ್ಲರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿಯೂಷ್ ಪಾಂಡೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.