ರಾಯ್ಪುರ : ‘ಇಲ್ಲಿನ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಎಂಟು ಮಂದಿ ನಕ್ಸಲರು ಹತರಗಿದ್ದಾರೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಿಲ್ಲಾ ಮೀಸಲು ಪೊಲೀಸ್ ಪಡೆ ಹಾಗೂ ವಿಶೇಷ ಪೊಲೀಸ್ ಪಡೆಯು ದಂತೇವಾಡ ಜಿಲ್ಲೆಯ ಕಾಡಿನಲ್ಲಿ ಬುಧವಾರ ರಾತ್ರಿಯಿಂದ ನಕ್ಸಲರಿಗಾಗಿ ಶೋಧ ಕಾರ್ಯ ನಡೆಸುತ್ತಿತ್ತು. ಗುರುವಾರ ಬೆಳಿಗ್ಗೆ 6 ಗಂಟೆ ವೇಳೆಗೆಬಿಜಾಪುರ ಮತ್ತು ದಂತೇವಾಡ ಜಿಲ್ಲೆಯ ಗಡಿಭಾಗದಲ್ಲಿರುವ ಟಿಮಿನಾರ್ ಮತ್ತು ಪುಸನಾರ್ ಗ್ರಾಮದ ಅರಣ್ಯದಲ್ಲಿ ನಕ್ಸಲರನ್ನು ಸುತ್ತುವರಿದಿದ್ದಾರೆ.

‘ಈ ವೇಳೆ ಎರಡು ಕಡೆ ಎರಡು ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದಿದೆ. ಗುಂಡಿನ ಸದ್ದು ನಿಂತ ಬಳಿಕ ನಕ್ಸಲರು ಇದ್ದ ಸ್ಥಳಕ್ಕೆ ತೆರಳಿದ ವೇಳೆ ನಾಲ್ವರು ಮಹಿಳೆಯರು ಸೇರಿದಂತೆ ಎಂಟು ಮಂದಿಯ ಮೃತದೇಹ ಸಿಕ್ಕಿದೆ’ ಎಂದು ನಕ್ಸಲ್ ವಿರೋಧಿ ಕಾರ್ಯಾಚರಣೆ ವಿಭಾಗದಡಿಐಜಿ ಸುಂದರ್ರಾಜ್ ಪಿ ತಿಳಿಸಿದ್ದಾರೆ.

‘ಎನ್ಕೌಂಟರ್ ನಡೆದ ಸ್ಥಳದಿಂದ ಎರಡು ಇನ್ಸಾಸ್ ರೈಫಲ್, ಎರಡು 303 ರೈಫಲ್, 12 ಬಂದೂಕು ಹಾಗೂ ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.