ಕಣ್ಣೂರು (ಕೇರಳ): ಉತ್ತರ ಕೇರಳ ಜಿಲ್ಲೆಯ ತಲಸ್ಸೆರಿ ಬಳಿ ಮಂಗಳವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 86 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ವೇಲಾಯುಧನ್ ಮೃತ ವ್ಯಕ್ತಿ. ತೆಂಗಿನಕಾಯಿ ಸಂಗ್ರಹಿಸಲು ಹೋಗಿದ್ದ ವೇಳೆ ಜಮೀನಿನಲ್ಲಿ ಪತ್ತೆಯಾದ ಬಾಂಬ್ ಇದ್ದ ಪೊಟ್ಟಣವನ್ನು ತೆರೆಯಲು ಯತ್ನಿಸಿದಾಗ ಅದು ಸ್ಫೋಟಗೊಂಡಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ತಲಸ್ಸೆರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

'ಇಂದು (ಮಂಗಳವಾರ) ಮಧ್ಯಾಹ್ನ 12.45ರ ಸುಮಾರಿಗೆ ಘಟನೆ ಸಂಭವಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಇದು ಸ್ಟೀಲ್ ಬಾಂಬ್ ಎಂದು ಕಂಡುಬಂದಿದೆ. ಸ್ಫೋಟಕ ಪತ್ತೆಯಾದ ಜಮೀನಿನಲ್ಲಿ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸುತ್ತಿದೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
.ಬಾಂಬ್ ಸ್ಫೋಟ ಪ್ರಕರಣ: ಅರೇಬಿಕ್ ಶಿಕ್ಷಕರು ಎನ್ಐಎ ವಶಕ್ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.