ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಕಳೆದ ಹಣಕಾಸು ವರ್ಷದಲ್ಲಿ ಬಡತನದ ಪ್ರಮಾಣ ಶೇಕಡ 39.4ಕ್ಕೆ ತಲುಪಿದ್ದು, 12.50 ಕೋಟಿಗೂ ಹೆಚ್ಚು ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ದೇಶವು ಆರ್ಥಿಕ ಸ್ಥಿರತೆ ಸಾಧಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಬ್ಯಾಂಕ್ ಹೇಳಿದೆ.

ಹೊಸ ಸರ್ಕಾರದ ಆಯ್ಕೆಗೆ ಚುನಾವಣೆ ಎದುರು ನೋಡುತ್ತಿರುವ ಪಾಕಿಸ್ತಾನದಲ್ಲಿನ ಎನ್ನ ಎಲ್ಲ ಪಾಲುದಾರರ ನೆರವಿನಿಂದ ಸಿದ್ಧಪಡಿಸಿದ ಕರಡು ನೀತಿ ಟಿಪ್ಪಣಿಗಳನ್ನು ವಿಶ್ವ ಬ್ಯಾಂಕ್ ಶುಕ್ರವಾರ ಅನಾವರಣಗೊಳಿಸಿದೆ ಎಂದು ‘ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ಪತ್ರಿಕೆ ವರದಿ ಮಾಡಿದೆ.

ವಿಶ್ವಬ್ಯಾಂಕ್ ಪ್ರಕಾರ, ಪಾಕಿಸ್ತಾನದಲ್ಲಿ ಬಡತನದ ಪ್ರಮಾಣವು ಒಂದು ವರ್ಷದೊಳಗೆ ಶೇ 34.2ರಿಂದ ಶೇ 39.4ಕ್ಕೆ ಏರಿಕೆಯಾಗಿದೆ. ದೇಶದ 12.50 ಕೋಟಿಗೂ ಹೆಚ್ಚು ಜನರು ಬಡತನ ರೇಖೆಗಿಂತ ಕೆಳಗಿನ ಮಟ್ಟದ ಸುಳಿಗೆ ಸಿಲುಕುತ್ತಿದ್ದು, ಅವರ ದಿನದ ಆದಾಯ ಪಾಕಿಸ್ತಾನದ ರೂಪಾಯಿಯಲ್ಲಿ 1,048 (₹303) ಇದೆ. ಈಗ ದೇಶದಲ್ಲಿ ಸುಮಾರು 9.50 ಕೋಟಿ ಜನರು ಬಡತನದಲ್ಲಿ ಬದುಕುತ್ತಿದ್ದಾರೆ ಎಂದು ಅದು ಹೇಳಿದೆ.

ವಿಶ್ವ ಬ್ಯಾಂಕ್, ಪಾಕಿಸ್ತಾನಕ್ಕೆ ತನ್ನ ಪ್ರಮುಖ ವಲಯಗಳಾದ ಕೃಷಿ ಮತ್ತು ರಿಯಲ್ ಎಸ್ಟೇಟ್ ಮೇಲೆ ತೆರಿಗೆ ವಿಧಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ, ಆರ್ಥಿಕ ಸ್ಥಿರತೆ ಸಾಧಿಸಲು ಅನುಪಯುಕ್ತ ವೆಚ್ಚಗಳನ್ನು ಕಡಿತಗೊಳಿಸಲು ತನ್ನ ವರದಿಯಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.