ಹರಿಯಾಣ ವಿಧಾನಸಭೆ ಚುನಾವಣೆ ಪೂರ್ಣಗೊಂಡಿದೆ. ಈ ಬಾರಿ ಆಯ್ಕೆಯಾದ 90 ಶಾಸಕ ಪೈಕಿ 30 ಶಾಸಕರು ಮರು ಆಯ್ಕೆಯಾದವರು. 2019ರಲ್ಲಿ ಇವರು ಘೋಷಿಸಿದ ಆಸ್ತಿ ಮೌಲ್ಯಕ್ಕೆ ಹೋಲಿಸಿದರೆ ಈ 30 ಶಾಸಕರ ಸರಾಸರಿ ಆಸ್ತಿಯು ಶೇ 59ರಷ್ಟು ಏರಿಕೆಯಾಗಿದೆ. ಇದರಲ್ಲಿ ಕಾಂಗ್ರೆಸ್ ಶಾಸಕರ ಆಸ್ತಿಯೇ ಅಧಿಕವಾಗಿ ಏರಿಕೆಯಾಗಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಗುರುವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಿದೆ. ಇದರ ಜೊತೆಯಲ್ಲಿ, ರಾಜ್ಯದ ಶಾಸಕರಲ್ಲಿ ಶೇ 95.5ರಷ್ಟು ಮಂದಿ ಕೋಟ್ಯಧಿಪತಿಗಳು ಎಂದೂ ಹೇಳಲಾಗಿದೆ. 2019ಕ್ಕೆ ಹೋಲಿಸಿಕೊಂಡರೆ, ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯವೂ ಅಧಿಕಗೊಂಡಿದೆ, ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಶಾಸಕರ ಸಂಖ್ಯೆಯೂ ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.