ಸೂರತ್: ಗುಜರಾತ್ನಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಿರಬೇಕು ಎಂಬುದನ್ನು ತೀರ್ಮಾನಿಸುವ ಅಧಿಕಾರವನ್ನು ಕೇಜ್ರಿವಾಲ್ ಅವರು ಮತದಾರರಿಗೇ ನೀಡಿದ್ದಾರೆ.

ಗುಜರಾತ್ ಪ್ರವಾಸ ಕೈಗೊಂಡಿರುವ ಆಮ್ ಆದ್ಮಿ ಪಕ್ಷದ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈ ಬಗ್ಗೆ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

‘ಮುಂದಿನ ಸಿಎಂ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಗುಜರಾತ್ ಜನತೆಯೇ ಹೇಳಬೇಕೆಂದು ನಾನು ಬಯಸುತ್ತೇನೆ. ನಾವು ದೂರವಾಣಿ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನೀಡುತ್ತಿದ್ದೇವೆ. ನವೆಂಬರ್ 3 ರಂದು ಸಂಜೆ 5ರ ಒಳಗಾಗಿ ಜನ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು. ನವೆಂಬರ್ 4ರಂದು ಫಲಿತಾಂಶವನ್ನು (ಎಎಪಿಯಿಂದ ಸಿಎಂ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು) ಪ್ರಕಟಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.

‘ಸಾರ್ವಜನಿಕರು 6357000360ಗೆ ಕರೆ ಮಾಡಿ, ಸಂದೇಶ, ಧ್ವನಿ ಸಂದೇಶ ಕಳುಹಿಸಿ, ವಾಟ್ಸ್ಆ್ಯಪ್ ಮಾಡಿ ತಮ್ಮ ಆಯ್ಕೆ ತಿಳಿಸಬಹುದು. ಅದಲ್ಲದೇ aapnocm@gmail.comಗೆ ಇಮೇಲ್ ಮಾಡಿಯೂ ತಮ್ಮ ಆಯ್ಕೆಯನ್ನು ತಿಳಿಸಬಹುದು’ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ. ಈ ಬಗ್ಗೆ ಸುದ್ದಿ ಮಾಧ್ಯಮ ಎನ್ಡಿಟಿವಿ ವರದಿ ಮಾಡಿದೆ.

ಪಂಜಾಬ್ ಸಿಎಂ ಅಭ್ಯರ್ಥಿ ಆಯ್ಕೆಯ ಸಂದರ್ಭದಲ್ಲೂ ಕೇಜ್ರಿವಾಲ್ ಇದೇ ತಂತ್ರ ಪ್ರಯೋಗಿಸಿದ್ದರು.

ಇದನ್ನೂ ಓದಿ

ಸಂದೇಶ ಕಳಿಸಿ ಸಿಎಂ ಅಭ್ಯರ್ಥಿ ಆಯ್ಕೆ ಮಾಡಿ: ಪಂಜಾಬ್ನಲ್ಲಿ ಕೇಜ್ರಿವಾಲ್ ಪ್ರಯೋಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.