ನವದೆಹಲಿ: ತಲೆಮರೆಸಿಕೊಂಡಿದ್ದ ತಮಿಳುನಾಡಿನ ತ್ರಿಶ್ಶೂರ್ ಘಟಕದ ಐಎಸ್ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಬುಧವಾರ ಬಂಧಿಸಿದ್ದು, ದೇಶದಿಂದ ಪಲಾಯನಗೈಯುವ ಆತನ ಯೋಜನೆಯನ್ನು ವಿಫಲಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಷೇಧಿತ ಜಾಗತಿಕ ಉಗ್ರರ ಸಂಘಟನೆಯ ತ್ರಿಶ್ಶೂರ್ ಘಟಕದ ಮುಖ್ಯಸ್ಥ ಸಯ್ಯದ್ ನಬೀಲ್‌ನನ್ನು ಎನ್‌ಐಎ ತಂಡ ಚೆನ್ನೈನಲ್ಲಿ ಬಂಧಿಸಿದೆ ಎಂದು ಸಂಸ್ಥೆಯ ವಕ್ತಾರರು ಹೇಳಿದ್ದಾರೆ.

ನೇಪಾಳದ ನಕಲಿ ಹಾಗೂ ಮೋಸದ ದಾಖಲೆಗಳನ್ನು ಬಳಸಿಕೊಂಡು ದೇಶದಿಂದ ಪಲಾಯನಗೈಯಲು ಈತ ಯೋಜನೆ ರೂಪಿಸಿಕೊಂಡಿದ್ದ ಎಂದು ತಿಳಿಸಿದ್ದಾರೆ.

ಈತ ಹಲವು ವಾರಗಳಿಂದಲೂ ತಮಿಳುನಾಡು ಮತ್ತು ಕರ್ನಾಟಕದ ವಿವಿಧೆಡೆ ತಲೆಮರೆಸಿಕೊಂಡಿದ್ದ. ಬಂಧಿತನಿಂದ ದಾಖಲೆಗಳು ಹಾಗೂ ಡಿಜಿಟಲ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.