ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಕಟು ವಿರೋಧಿಗಳಾಗಿರುವ ನಟ ಪ್ರಕಾಶ್ ರಾಜ್ ಅವರು ತಮಗೆ ಅನಿಸಿದ್ದನ್ನುಮುಕ್ತವಾಗಿ ಹೇಳುತ್ತಾರೆ.

ಅದರಲ್ಲೂ ಮೋದಿ ಅವರ ಬಗ್ಗೆ ಸದಾ ಒಂದು ಕಣ್ಣಿಟ್ಟಿರುವ ಪ್ರಕಾಶ್ ರಾಜ್ ಸಮಯ ಸಿಕ್ಕಾಗಲೆಲ್ಲಾ ಅವರನ್ನು ವಿರೋಧಿಸಿ ಕಾಲೆಳೆಯುವ ಟ್ವೀಟ್ಗಳನ್ನು ಮಾಡುತ್ತಾ ಇರುತ್ತಾರೆ.

ಇತ್ತೀಚೆಗೆ ಗಿರಿಧಾಮವೊಂದಕ್ಕೆ ಭೇಟಿ ನೀಡಿದ್ದ ಪ್ರಕಾಶ್ ರಾಜ್ ಅಲ್ಲಿಯ ಆಕರ್ಷಕ ವೇಷ ತೊಟ್ಟು ಮೋದಿ ಅವರನ್ನು ಉದ್ದೇಶಿಸಿ ಪರೋಕ್ಷವಾಗಿಕಿಚಾಯಿಸಿದ್ದಾರೆ.

‘ನೋಡಿ, ಇದು ನಾನು ನಮ್ಮ ಸರ್ವೋಚ್ಚ ನಾಯಕನಿಂದ ಪ್ರಭಾವಿತನಾಗಿ ಈ ವೇಷ ಹಾಕಿಕೊಂಡಿದ್ದೇನೆ. ಸ್ನೇಹಿತರೇ ನೀವು ಏಕೆ ಇದನ್ನು ಪ್ರಯತ್ನಿಸಬಾರದು?‘ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ಕಾಲೆಳದಿದ್ದಾರೆ. ಇದಕ್ಕೆ ಪರ ವಿರೋಧ ವ್ಯಕ್ತವಾಗಿದೆ.

ಪ್ರಧಾನಿ ಮೋದಿ ಅವರು ದೇಶ–ವಿದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿನ ವಿಶೇಷ ಉಡುಗೆ ತೊಡುಗೆಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆಯುತ್ತಾರೆ. ಇದು ಕೂಡ ಮೋದಿ ವಿರೋದಿಗಳಿಗೆ ಆಗಾಗ ಆಹಾರವಾಗುವುದನ್ನು ನಾವು ನೋಡುತ್ತಿರುತ್ತೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.