ಕಣ್ಣೂರು: ಕೇರಳದ ಕಣ್ಣೂರು ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರಿಗೆ ಬೀಳ್ಕೊಡುಗೆ ಕಾರ್ಯಕ್ರಮದ ದಿನವೇ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭ್ರಷ್ಟಾಚಾರದ ಆರೋಪ ಮಾಡಿದ್ದರಿಂದ ಆ ಅಧಿಕಾರಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಕಣ್ಣೂರು ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ನವೀನ್ ಬಾಬು ಕೆ ಎನ್ನುವರೇ ಮೃತರು. ಪ್ರಾಥಮಿಕವಾಗಿ ಪೊಲೀಸರು ಇದೊಂದು ಆತ್ಮಹತ್ಯೆ ಎಂದು ಶಂಕಿಸಿದ್ದಾರೆ.

ನವೀನ್ ಬಾಬು ಅವರು ವರ್ಗಾವಣೆ ಆಗಿದ್ದರಿಂದ ಅವರಿಗೆ ಜಿಲ್ಲಾಡಳಿತದಿಂದ ಬೀಳ್ಕೊಡುಗೆ ಸಮಾರಂಭವನ್ನು ಜಿಲ್ಲಾಡಳಿತ ಭವನದಲ್ಲಿ ಕಳೆದ ಸೋಮವಾರ ಏರ್ಪಡಿಸಲಾಗಿತ್ತು. ಈ ವೇಳೆ ಅಲ್ಲಿಗೆ ಆಮಂತ್ರಣವಿಲ್ಲದೇ ಆಗಮಿಸಿದ್ದ ಕಣ್ಣೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಪಿ ದಿವ್ಯಾ ಅವರು ಬಾಬು ಅವರ ಬಗ್ಗೆ ಭ್ರಷ್ಟಾಚಾರದ ಆರೋಪ ಮಾಡಿ, ಅವಮಾನಿಸಿದ್ದರು.

ಬಾಬು ಅವರು ಪೆಟ್ರೋಲ್ ಬಂಕ್ಗಳಿಗೆ ಎನ್ಒಸಿ ನೀಡುವಲ್ಲಿ ಹೇಗೆಲ್ಲ ನಡೆದುಕೊಂಡಿದ್ದಾರೆ ಎಂಬುದು ನಮಗೆ ಗೊತ್ತು. ಅವರಿಗೆ ಸಿಗಬೇಕಾದಾದ್ದು ಸಿಕ್ಕ ನಂತರ ಎರಡೇ ದಿನದಲ್ಲಿ ಎನ್ಒಸಿ ನೀಡಿದ್ದಾರೆ ಎಂದೆಲ್ಲ ದಿವ್ಯಾ ಆರೋಪ ಮಾಡಿದ್ದರು. ಇದೇ ಕಾರ್ಯಕ್ರಮದಲ್ಲಿ ಕಣ್ಣೂರು ಜಿಲ್ಲಾಧಿಕಾರಿ ಅರುಣ್ ಕೆ. ವಿಜಯನ್ ಕೂಡ ಹಾಜರಿದ್ದರು.

ಇದರಿಂದ ಮನನೊಂದಿದ್ದ ಬಾಬು ಅವರು ಸಂಜೆ ತಮ್ಮ ನಿವಾಸಕ್ಕೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ದಿವ್ಯ ಅವರು ಆಡಳಿತಾರೂಢ ಸಿಪಿಐಎಂನ ನಾಯಕಿಯಾಗಿದ್ದಾರೆ.

ಇನ್ನು ಬಾಬು ಅವರ ಸಾವಿನ ಬಗ್ಗೆ ಕಿಡಿಕಾರಿರುವ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳು, ಬಾಬು ಅವರ ಸಾವು ಕೊಲೆಗೆ ಸಮ. ಕೂಡಲೇ ದಿವ್ಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿವೆ.

ಈ ಕುರಿತು ಮಾತನಾಡಿರುವ ಕೇರಳ ಕಂದಾಯ ಸಚಿವ, ಬಾಬು ಅವರ ಸಾವು ದುರದೃಷ್ಟಕರ. ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಯಾವುದೇ ದೂರು ದಾಖಲಾಗಿರಲಿಲ್ಲ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.