ಸೋಮವಾರ, 1 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೋರ್ಟ್‌ಬ್ಲೇರ್‌: ರಾತ್ರಿಯಲ್ಲಿ ಯಶಸ್ವಿಯಾಗಿ ಇಳಿದ ಏರ್‌ ಇಂಡಿಯಾ ವಿಮಾನ

Published 29 ಜೂನ್ 2024, 14:31 IST
Last Updated 29 ಜೂನ್ 2024, 14:31 IST
ಅಕ್ಷರ ಗಾತ್ರ

ಪೋರ್ಟ್‌ಬ್ಲೆರ್‌: ಏರ್‌ ಇಂಡಿಯಾದ ವಿಮಾನವೊಂದು ರಾತ್ರಿ ಸಮಯದಲ್ಲಿ ಪೋರ್ಟ್‌ಬ್ಲೇರ್‌ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಇಳಿದಿದೆ ಎಂದು ಅಧಿಕೃತ ಹೇಳಿಕೆಯಿಂದ ತಿಳಿದುಬಂದಿದೆ. 

‘ಕೋಲ್ಕತ್ತದಿಂದ ಹೊರಟ ವಿಮಾನ ಸಂಜೆ 7.30ರ ಸುಮಾರಿಗೆ ಪೋರ್ಟ್‌ಬ್ಲೇರ್‌ನಲ್ಲಿ ಯಶಸ್ವಿಯಾಗಿ ಇಳಿದಿದೆ. ಪ್ರಯಾಣಿಕರನ್ನು ಇಳಿಸುವ ಸಲುವಾಗಿ ಅಲ್ಲಿಂದ ವೀರ್‌ ಸಾವರ್ಕರ್ ಅಂತಾರಾಷ್ಟ್ರೀಯ ಟರ್ಮಿನಲ್‌ ಕಡೆ ಸಾಗಿತು’  ಎಂದು ಅಂಡಮಾನ್‌ ಮತ್ತು ನಿಕೋಬಾರ್‌ ಕಮಾಂಡ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

‘ಅಂಡಮಾನ್ ಮತ್ತು ನಿಕೋಬಾರ್‌ ದ್ವೀಪಗಳಿಗೆ ವಾಯು ಸಂಪರ್ಕ ಕಲ್ಪಿಸುವಲ್ಲಿ ರಾತ್ರಿ ಹೊತ್ತು ವಿಮಾನ ಯಶಸ್ವಿಯಾಗಿ ಇಳಿದಿರುವುದು ಗುರುತರ ಹೆಜ್ಜೆಯಾಗಿದ್ದು, ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ. ಇದು ನೌಕಾಪಡೆ, ಅಂಡಮಾನ್‌ ಮತ್ತು ನಿಕೋಬಾರ್‌ ಕಮಾಂಡ್‌, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಸತತ ಪ್ರಯತ್ನದ ಫಲವಾಗಿದೆ’ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT