ಲಖನೌ: ಅಲಹಾಬಾದ್ ಅನ್ನು ಪ್ರಯಾಗರಾಜ್ ಎಂದೂ ಫೈಜಾಬಾದ್ ಅನ್ನು ಅಯೋಧ್ಯಾ ಎಂದೂ ಬದಲಾಯಿಸಿದ ಬಳಿಕ ಅಲೀಗಡವನ್ನು ಹರಿಗಡ ಎಂದು ಬದಲಾಯಿಸುವ ಬೇಡಿಕೆಯು
ಕೇಳಿ ಬಂದಿದೆ.

ಅಲೀಗಡವನ್ನು ಹರಿಗಡ ಎಂದು ಬದಲಾಯಿಸುವ ನಿರ್ಣಯವನ್ನು ಅಲೀಗಡ ಜಿಲ್ಲಾ ಪಂಚಾಯಿತಿ ಮಂಡಳಿಯು ಅಂಗೀಕರಿಸಿದೆ. ಪ್ರಸ್ತಾವವನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿರ್ಣಯನ್ನು ಅಂಗೀಕರಿಸುವಾಗ ಜಿಲ್ಲೆಯ ಶಾಸಕರು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರು ಹಾಜರಿದ್ದರು. ನಿರ್ಣಯವು ಅವಿರೋಧವಾಗಿ ಅಂಗೀಕಾರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೈನ್‌ಪುರಿಯ ಹೆಸರನ್ನು ಮಾಯನ್ ನಗರ ಎಂದು ಬದಲಾಯಿಸುವ ನಿರ್ಣಯವನ್ನು ಮೈನ್‌ಪುರಿ ಜಿಲ್ಲಾ ಪಂಚಾಯಿತಿ ಅಂಗೀಕರಿಸಿದೆ. ಈ ನಗರವನ್ನು ಮಾಯನ್ ಮುನಿ ಸ್ಥಾಪಿಸಿದ್ದ. ಹಾಗಾಗಿ, ನಗರದ ಹೆಸರು ಮಾಯನ್ ನಗರ ಎಂದಿರುವುದೇ ಸೂಕ್ತ ಎಂದು ಪಂಚಾಯಿತಿ ಹೇಳಿದೆ.

ಅಲೀಗಡದ ಹೆಸರು ಬದಲಾವಣೆಯ ಪ್ರಸ್ತಾವವು 1992ರಲ್ಲಿ ಕಲ್ಯಾಣ್ ಸಿಂಗ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಆಗಿದ್ದಾಗಲೇ ಇತ್ತು. ಅಲೀಗಡವನ್ನು ಹರಿಗಡ ಎಂದು ಬದಲಾಯಿಸಬೇಕು ಎಂಬ ಪ್ರಸ್ತಾವವನ್ನು ವಿಶ್ವ ಹಿಂದೂ ಪರಿಷತ್ ಕೂಡ 2015ರಲ್ಲಿ ಅಂಗೀಕರಿಸಿತ್ತು.

‘ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಏನೂ ಇಲ್ಲ. ಎಲ್ಲ ವಿಚಾರಗಳಲ್ಲಿಯೂ ಸರ್ಕಾರ ವಿಫಲವಾಗಿದೆ. ನಗರಗಳು ಮತ್ತು ಪಟ್ಟಣಗಳ ಹೆಸರು ಬದಲಾವಣೆಯು ಸರ್ಕಾರದ ವೈಫಲ್ಯಗಳನ್ನು ಮುಚ್ಚಿಡುವ ಯತ್ನ ಮಾತ್ರ’ ಎಂದು ವಿರೋಧ ಪಕ್ಷ ಎಸ್‌ಪಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.