ನವದೆಹಲಿ: ಹಿಂಸಾಚಾರವನ್ನು ಬಿಟ್ಟು, ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗಿ ಎಂದು ನಕ್ಸಲರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಕರೆ ನೀಡಿದರು.

ಇದೇ ಸಂದರ್ಭದಲ್ಲಿ, ನಮ್ಮ ಮಾತು ಕೇಳದಿದ್ದರೆ ನಕ್ಸಲರೆಲ್ಲರನ್ನೂ ಸದೆಬಡಿಯುವ ಕಾರ್ಯಾಚರಣೆಯನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.

ತಮ್ಮ ನಿವಾಸದಲ್ಲಿ ನಕ್ಸಲ್ ಹಿಂಸಾಚಾರದಿಂದ ಬಾಧಿತರಾದ ಛತ್ತೀಸಗಢದ 55 ಸಂತ್ರಸ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಕ್ಸಲರು ಪರಿವರ್ತನೆಯಾಗಲು ಮಾರ್ಚ್ 31, 2026ರವರೆಗೂ ಕಾಲಾವಕಾಶ ನೀಡುವುದಾಗಿ ತಿಳಿಸಿದರು.

‘ನಕ್ಸಲ್ ಹಿಂಸಾಚಾರ ಮತ್ತು ನಕ್ಸಲ್ ಸಿದ್ಧಾಂತವು ದೇಶದಿಂದ ದೂರವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಧರಿಸಿದ್ದಾರೆ. ನಕ್ಸಲ್ ವಿರುದ್ಧದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಗಮನಾರ್ಹ ಯಶಸ್ಸು ಸಾಧಿಸಿವೆ. ಛತ್ತೀಸಗಢದ ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಈ ಸಮಸ್ಯೆ ಇದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.