ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಂಧ್ರಪ್ರದೇಶ: ಜಾತಿಗಣತಿಗೆ ಚಾಲನೆ

Published : 19 ಜನವರಿ 2024, 11:00 IST
Last Updated : 19 ಜನವರಿ 2024, 11:00 IST
ಫಾಲೋ ಮಾಡಿ
Comments

ಅಮರಾವತಿ: ಆಂಧ್ರ ಪ್ರದೇಶ ಸರ್ಕಾರವು ರಾಜ್ಯದಲ್ಲಿ ಸಮಗ್ರ ಜಾತಿ ಗಣತಿ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಿದೆ. 10 ದಿನಗಳ ಕಾಲ ಈ ಗಣತಿ ಕಾರ್ಯ ನಡೆಯಲಿದೆ ಎಂದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಸಿ. ಶ್ರೀನಿವಾಸ ವೇಣುಗೋಪಾಲ ಕೃಷ್ಣ ತಿಳಿಸಿದ್ದಾರೆ.

ದೇಶದಲ್ಲಿ ಬಿಹಾರದ ಬಳಿಕ ಜಾತಿ ಗಣತಿ ನಡೆಸುತ್ತಿರುವ ಎರಡನೇ ರಾಜ್ಯವಾಗಿ ಆಂಧ್ರ ಪ್ರದೇಶ ಆಗಿದೆ. 

ಅಗತ್ಯವಿದ್ದರೆ ಗಣತಿ ಕಾರ್ಯವನ್ನು ಇನ್ನೂ ನಾಲ್ಕರಿಂದ ಐದು ದಿನಗಳವರೆಗೆ ವಿಸ್ತರಿಸಲಾಗುವುದು ಎಂದು ಸಚಿವ ಕೃಷ್ಣ ಹೇಳಿದ್ದಾರೆ.

ಪ್ರತಿ ಮೆನಗಳಿಗೆ ಸ್ವಯಂ ಸೇವಕರು ಭೇಟಿ ನೀಡಿ ಜನರಿಂದ ಜಾತಿ ವಿವರಗಳನ್ನು ಸಂಗ್ರಹಿಸಿ, ಕ್ರೋಡೀಕರಣ ಮಾಡುವರು. ಸ್ವಯಂ ಸೇವಕರು ಸಂಗ್ರಹಿಸಿದ ಮಾಹಿತಿಯ ನಿಖರತೆಯನ್ನು ಸಚಿವಾಲಯದ ಅಧಿಕಾರಿಗಳು ಪರಿಶಿಲಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರತಿ ಸ್ವಯಂ ಸೇವಕರಿಗೆ 50 ಮನೆಗಳಿಗೆ ಭೇಟಿ ನೀಡಿ, ನಿವಾಸಿಗಳ ಜಾತಿ ವಿವರಗಳನ್ನು ಸಂಗ್ರಹಿಸುವ ಜವಾಬ್ದಾರಿ ನೀಡಲಾಗಿದೆ. ಫೆಬ್ರುವರಿ 15 ಅಥವಾ ಲೋಕಸಭಾ ಚುನಾವಣೆಯ ಅಧಿಸೂಚನೆ ಪ್ರಕಟಣೆಗೂ ಮುನ್ನ ಜಾತಿಗಣತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT